/newsfirstlive-kannada/media/post_attachments/wp-content/uploads/2024/04/surya2.jpg)
ತಮಿಳು ಖ್ಯಾತ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ವಿಚಾರ ಮುನ್ನಲೆಗೆ ಬರುತ್ತಲೆ ಇರುತ್ತವೆ. ಇದೀಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿರೋ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
/newsfirstlive-kannada/media/post_attachments/wp-content/uploads/2024/04/surya1.jpg)
ಇದನ್ನೂ ಓದಿ:VIDEO: RCB ತಂಡದ ಮುದ್ದಿನ ಯುವರಾಣಿ ಶ್ರೇಯಾಂಕ ಪಾಟೀಲ್​ಗೆ ತವರಿನಲ್ಲಿ ಅದ್ಧೂರಿ ಸ್ವಾಗತ
ನಟಿ ಜ್ಯೋತಿಕಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವೊಡಿಯೋದಲ್ಲಿ ಸ್ಟಾರ್​ ದಂಪತಿ ಇಬ್ಬರೂ ಜಿಮ್‌ನಲ್ಲಿ ಒಟ್ಟಿಗೆ ಕಸರತ್ತು ನಡೆಸುತ್ತಿರುವ ವಿಡಿಯೋ ಸಖತ್​ ವೈರಲ್ ಆಗುತ್ತಿದೆ. ನಟಿ ಶೇರ್ ಮಾಡಿಕೊಂಡ ವಿಡಿಯೋ ಒಂದಲ್ಲಾ ಎರಡಲ್ಲಾ ಬರೋಬ್ಬರಿ 38.7 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ.
View this post on Instagram
ನಟ ಸೂರ್ಯ ಅವರು ಫಿಟ್ನೆಸ್, ಡಯೆಟ್, ವರ್ಕೌಟ್ ಅಂತ ಬ್ಯುಸಿಯಾಗಿ ಇರುತ್ತಾರೆ. ನಟಿ ಜ್ಯೋತಿಕಾ ಆಗಾಗ ಜಿಮ್​ನಲ್ಲಿ ಕಾಲ ಕಳೆಯುತ್ತಾ ಇರುತ್ತಾರೆ. ಇಬ್ಬರು ಒಟ್ಟಿಗೆ ಜಿಮ್​ ಮಾಡುವ ಮೂಲಕ ಅಭಿಮಾನಿಗಳ ಗಮನ ಸಳೆದಿದ್ದಾರೆ. ನಟ ಸೂರ್ಯ ಸುರರೈಪೊಟ್ರು, ಜೈಭೀಮ್ ಸಿನಿಮಾಗಳ ಬಳಿಕ ನೂತನವಾದ ಪಾತ್ರಗಳಲ್ಲಿ ಅಭಿನಯಿಸಿ ಫ್ಯಾನ್ಸ್​ಗನ್ನು ರಂಜಿಸಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us