Advertisment

ದೇವರು ಇಚ್ಛಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ.. ನಾಯಕತ್ವದ ಬಗ್ಗೆ ಸೂರ್ಯ ಕುಮಾರ್ ಏನಂದ್ರು ಗೊತ್ತಾ?

author-image
AS Harshith
Updated On
ದೇವರು ಇಚ್ಛಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ.. ನಾಯಕತ್ವದ ಬಗ್ಗೆ ಸೂರ್ಯ ಕುಮಾರ್ ಏನಂದ್ರು ಗೊತ್ತಾ?
Advertisment
  • ಟೀಂ ಇಂಡಿಯಾ ನಾಯಕತ್ವದ ಕುರಿತು ಸೂರ್ಯ ಕುಮಾರ್ ಟಾಕ್
  • ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಉಡುಪಿಗೆ ಆಗಮಿಸಿದ ಮಿಸ್ಟರ್​ 360
  • ಟೀಂ ಇಂಡಿಯಾದ ನಾಯಕತ್ವದ ಬಗ್ಗೆ ಸೂರ್ಯ ಕುಮಾರ್ ಏನಂದ್ರು?

ಉಡುಪಿ: ಟೀಂ ಇಂಡಿಯಾ ಕ್ರಿಕೆಟರ್ ಸೂರ್ಯ ಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಉಡುಪಿಗೆ ಆಗಮಿಸಿದ್ದಾರೆ. ಉಡುಪಿಯ ಕಾಪು ಶ್ರೀ ಮಾರಿಗುಡಿ ದೇವಸ್ಥಾನಗೆ ಭೇಟಿ ನೀಡಿದ್ದು, ದೇವರ ದರ್ಶನ ಪಡೆದಿದ್ದಾರೆ.

Advertisment

ಇದನ್ನೂ ಓದಿ: ವಿಶ್ವಕಪ್​​ ಗೆಲುವು.. ಹರಕೆ ತೀರಿಸಲು ಗಂಡನೊಂದಿಗೆ ಉಡುಪಿಗೆ ಬಂದ್ರಾ ಸೂರ್ಯ ಕುಮಾರ್​ ಪತ್ನಿ? ಏನಂದ್ರು?

ದೇವಸ್ಥಾನ ಭೇಟಿ ನೀಡಿದ ಬಳಿಕ ಸೂರ್ಯ ಕುಮಾರ್​ ಯಾದವ್​ ನ್ಯೂಸ್​​ಫಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಟೀಂ ಇಂಡಿಯಾದ ನಾಯಕತ್ವದ ಬಗ್ಗೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ್ದಾರೆ. ‘ಅದು ನಮ್ಮ ಕೈಯಲ್ಲಿಲ್ಲ. ದೇಶಕ್ಕಾಗಿ ಚೆನ್ನಾಗಿ ಆಡುವುದು ಮಾತ್ರ ನಮ್ಮ ಗುರಿ. ದೇವರು ಇಚ್ಛಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೌಂಡರಿ ಲೈನ್​ ಟಚ್​​ ವಿಚಾರವಾಗಿ ಸೂರ್ಯ ಸ್ಪಷ್ಟನೆ.. ಒಂದೇ ಮಾತಲ್ಲಿ ಏನಂದ್ರು ಗೊತ್ತಾ?

Advertisment

ಬಳಿಕ ಮಾತು ಮುಂದುವರೆಸಿದ ಅವರು, ‘ಕರಾವಳಿಯ ಬೇರೆ ಬೇರೆ ದೇವಸ್ಥಾನಗಳಿಗೆ ಹೋಗಿದ್ದೇವೆ ಮನಸ್ಸಿಗೆ ಶಾಂತಿ ಸಿಕ್ಕಿದೆ. ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಬಂದಿದ್ದೇನೆ. ನಾನು ಯಾವುದೇ ಸೆಲೆಬ್ರಿಟಿಯಾಗಿ ಬಂದಿಲ್ಲ. ನಾನೊಬ್ಬ ಸೆಲೆಬ್ರಿಟಿ ಎಂಬ ಆಲೋಚನೆ ನನಗೆ ಬಂದಿಲ್ಲ. ಸಾಮಾನ್ಯ ವ್ಯಕ್ತಿಯಾಗಿ ದೊಡ್ಡ ಜೀವನವನ್ನು ಸಾಗಿಸಬೇಕಾಗಿದೆ. ವರ್ಲ್ಡ್ ಕಪ್ ಅನ್ನೋದು ಇಡೀ ಜೀವನ ಅಲ್ಲ ಅದೊಂದು ಭಾಗ. ಜೀವನದಲ್ಲಿ ಇಂತಹ ಹಲವನ್ನು ನೋಡುತ್ತಾ ಸಾಗಬೇಕಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment