newsfirstkannada.com

×

ವಿಶ್ವಕಪ್​​ ಗೆಲುವು.. ಹರಕೆ ತೀರಿಸಲು ಗಂಡನೊಂದಿಗೆ ಉಡುಪಿಗೆ ಬಂದ್ರಾ ಸೂರ್ಯ ಕುಮಾರ್​ ಪತ್ನಿ? ಏನಂದ್ರು?

Share :

Published July 9, 2024 at 1:57pm

    ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಉಡುಪಿಗೆ ಬಂದ ಸೂರ್ಯ ಕುಮಾರ್​ ಯಾದವ್

    ಕಾಪುವಿನ ಶ್ರೀ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಮಿಸ್ಟರ್​ 360

    ಒಂದು ಕನಸು ಸಾಕಾರಗೊಂಡಿದೆ ಎಂಬ ಖುಷಿ ಇದೆ ಎಂದ ಸೂರ್ಯನ ಪತ್ನಿ

ಟೀಂ ಇಂಡಿಯಾ ಆಟಗಾರ ಸೂರ್ಯ ಕುಮಾರ್​ ಯಾದವ್​ ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಉಡುಪಿಗೆ ಆಗಮಿಸಿದ್ದಾರೆ. ಉಡುಪಿಯ ಕಾಪುವಿನ ಶ್ರೀ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ದೇವರ ದರ್ಶನ ಪಡೆದ ಬಳಿಕ ನ್ಯೂಸ್​​ಫಸ್ಟ್​ ಜೊತೆಗೆ ಮಾತನಾಡಿದ ಸೂರ್ಯ ಕುಮಾರ್ ಪತ್ನಿ ದೇವಿಶಾ, ‘ಕಾಪು ಮಾರಿಗುಡಿಗೆ ಬಂದು ಮನಸ್ಸಿಗೆ ಖುಷಿಯಾಗಿದೆ. ಐದು ವರ್ಷದ ಹಿಂದೆ ನಾವು ಒಮ್ಮೆ ಉಡುಪಿಗೆ ಬಂದಿದ್ದೆವು. ಮತ್ತೊಮ್ಮೆ ಕಾಪು ಅಮ್ಮನ ಭೇಟಿ ಮಾಡಬೇಕು ಎಂಬ ಇಚ್ಛೆ ಇತ್ತು. ಯಾವುದೇ ಟೂರ್ನಿ ಇಲ್ಲದಿದ್ದರೆ ದೇಗುಲ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಬರುತ್ತೇವೆ. ಕಾಪು ಮಾರಿಯಮ್ಮನನ್ನು ನೋಡಲು ಪತಿಯನ್ನೂ ಕರೆದುಕೊಂಡು ಬಂದಿದ್ದೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೌಂಡರಿ ಲೈನ್​ ಟಚ್​​ ವಿಚಾರವಾಗಿ ಸೂರ್ಯ ಸ್ಪಷ್ಟನೆ.. ಒಂದೇ ಮಾತಲ್ಲಿ ಏನಂದ್ರು ಗೊತ್ತಾ?

ಬಳಿಕ ಮಾತನಾಡಿದ ಅವರು, ‘ದೇವಿಯಲ್ಲಿ ಏನು ಪ್ರಾರ್ಥಿಸಿದ್ದೇನೆ ಎಂದು ಹೇಳುವುದಿಲ್ಲ. ದೇವರಿಗೆ ಸೇವೆ ಕೊಡಬೇಕು ಎಂಬ ಸಂಕಲ್ಪ ಇತ್ತು. ದೇವರಿಗೆ ಸಲ್ಲಿಸಿದ ಕಾಣಿಕೆಯನ್ನು ಹೇಳಿಕೊಳ್ಳಲು ಇಷ್ಟವಿಲ್ಲ. ಭಾರತವನ್ನು ಪ್ರತಿನಿಧಿಸಬೇಕು ಮತ್ತು ವರ್ಲ್ಡ್ ಕಪ್ ಗೆಲ್ಲಬೇಕು ಎಂಬುದು ಎಲ್ಲಾ ಕ್ರಿಕೆಟರ್​ಗಳ ಕನಸು. ಒಂದು ಕನಸು ಸಾಕಾರಗೊಂಡಿದೆ ಎಂಬ ಖುಷಿ ಇದೆ. ಇಂತಹ ಹಲವಾರು ಕನಸುಗಳನ್ನು ಕಂಡು ಮುಂದೆ ಸಾಗಬೇಕಾಗಿದೆ ಎಂದು ದೇವಿಶಾ ಶೆಟ್ಟಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವಕಪ್​​ ಗೆಲುವು.. ಹರಕೆ ತೀರಿಸಲು ಗಂಡನೊಂದಿಗೆ ಉಡುಪಿಗೆ ಬಂದ್ರಾ ಸೂರ್ಯ ಕುಮಾರ್​ ಪತ್ನಿ? ಏನಂದ್ರು?

https://newsfirstlive.com/wp-content/uploads/2024/07/Surya-Kumar-yadav-udupi-2.jpg

Load More