newsfirstkannada.com

×

ಸೂರ್ಯ ನಮಸ್ಕಾರ ಯಾವಾಗ ಮಾಡಬೇಕು? ಬೆಳಗ್ಗೆ ಮಾಡುವುದು ಒಳ್ಳೆಯದಾ, ಸಂಜೆ ಮಾಡಬೇಕಾ?

Share :

Published October 1, 2024 at 6:12pm

Update October 1, 2024 at 6:13pm

    ಸೂರ್ಯ ನಮಸ್ಕಾರ ಮಾಡಲು ಸರಿಯಾದ ಸಮಯ ಯಾವುದು ಅಂತಾ ಗೊತ್ತಾ?

    ಬೆಳಗ್ಗೆ ಸೂರ್ಯ ನಮಸ್ಕಾರ ಮಾಡುವುದರಿಂದ ಆಗಲಿರುವ ಪ್ರಯೋಜನಗಳೇನು?

    ಸೂರ್ಯ ನಮಸ್ಕಾರದ ಸಮಯದ ಬಗ್ಗೆ ಯೋಗ ಪಟುಗಳು ನೀಡುವ ಸಲಹೆಗಳೇನು?

ಜಗತ್ತು ಈಗ ಭಾರತೀಯ ಪುರಾತನ ಪದ್ಧತಿಗಳ ವಿಸ್ಮಯಕ್ಕೆ ಬೆರಗಾಗಿದೆ.ಅದರಲ್ಲಿ ಸೂರ್ಯನಮಸ್ಕಾರವು ಕೂಡ ಒಂದು. ಸೂರ್ಯ ನಮಸ್ಕಾರ ಅನ್ನೋದು ಈ ದೇಶದಲ್ಲಿ ಒಂದು ತಲೆಮಾರಿನಿಂದ ಒಂದು ತಲೆಮಾರಿಗೆ ಸಾಗಿ ಬಂದ ಅತ್ಯಂತ ಪುರಾತನ ಯೋಗ. ಈ ಒಂದು ಯೋಗ ಭಂಗಿಯನ್ನು ಇಡೀ ವಿಶ್ವವೇ ತಮ್ಮದಾಗಿಸಿಕೊಂಡಿದೆ. ಈ ಯೋಗದ ಪ್ರಯೋಜನಗಳಿಗೆ ಮಾರು ಹೋಗಿದೆ.
ಸೂರ್ಯ ನಮಸ್ಕಾರ ಈಗಾಗಲೇ ಹೇಳಿದಂತೆ ಅದು ಸೂರ್ಯನನ್ನು ನಮಸ್ಕರಿಸಲೇ ಎಂದು ಸೃಷ್ಟಿಸಲಾದ ಪುರಾತನ ಯೋಗಭಂಗಿ. ಸೂರ್ಯನಮಸ್ಕಾರ, ದೇಹದ ಚಲನೆಯೊಂದಿಗೆ ನಮ್ಮ ಉಸಿರಾಟವನ್ನು ಸಮನ್ವಯಗೊಳಿಸುತ್ತದೆ.

ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಆದ್ರೆ ಹಲವರಲ್ಲಿ ಒಂದು ಗೊಂದಲವಂತೂ ಇದ್ದೇ ಇದೆ. ಈ ಸೂರ್ಯನಮಸ್ಕಾರ ಬೆಳಗ್ಗೆ ಮಾಡುವುದು ಒಳ್ಳೆಯದಾ? ಸಂಜೆ ಮಾಡುವುದು ಒಳ್ಳೆಯದಾ? ಅಂತ. ಅದಕ್ಕೆ ಯೋಗ ಪಟುಗಳು ಹೇಳುವುದು ಸೂರ್ಯ ನಮಸ್ಕಾರಕ್ಕೆ ಮುಂಜಾನೆ ವೇಳೆಯ ಪ್ರಶಸ್ತ ಸಮಯ ಎಂದು.

ಇದನ್ನೂ ಓದಿ: ನೆನೆಯಿಟ್ಟ ಹೆಸರು ಕಾಳು ತಿನ್ನುವುದರಿಂದ ಇದೆ ಹಲವು ಪ್ರಯೋಜನಗಳು; ಆರೋಗ್ಯದಲ್ಲಿ ಏನೆಲ್ಲಾ ಸುಧಾರಣೆ ಆಗಲಿದೆ?

ಬೆಳಗ್ಗೆ ಸೂರ್ಯ ನಮಸ್ಕಾರ ಮಾಡುವುದರಿಂದ ಆಗುವ ಪ್ರಯೋಜನಗಳು ಬಹಳ ಇವೆ. ಬೆಳಗ್ಗೆ ಸೂರ್ಯನ ತಾಜಾ ಕಿರಣಗಳು ನಮ್ಮ ದೇಹದ ಮೇಲೆ ಬೀಳುವುದರಿಂದ ನಮಗೆ ವಿಟಮಿನ್ ಡಿ ಸಿಗುತ್ತದೆ. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ.

ಇದನ್ನೂ ಓದಿ: Body Language ಬಗ್ಗೆ ಇರಲಿ ನಿಮಗೆ ಅರಿವು, ನಮ್ಮ ದೇಹಭಾಷೆ ಹೇಗಿರಬೇಕು? ಇಲ್ಲಿವೆ ಸಲಹೆಗಳು

ಸೂರ್ಯ ನಮಸ್ಕಾರವನ್ನು ಬೆಳಗ್ಗೆ ಮಾಡುವುದರಿಂದಾಗಿ ನಮ್ಮ ಮನಸ್ಸು ಹೆಚ್ಚು ಪ್ರಫುಲ್ಲವಾಗಿರುತ್ತದೆ. ತಾಜಾತನದ ಭಾವವೊಂದು ನಮಗೆ ಅನುಭವವಾಗುತ್ತದೆ. ಇನ್ನೂ ಸೂರ್ಯ ನಮಸ್ಕಾರವನ್ನು ರಾತ್ರಿ ಮಲಗಿ ಎದ್ದ ಮೇಲೆ ಖಾಲಿ ಹೊಟ್ಟೆಯಲ್ಲಿಯೇ ಮಾಡುವುದು ಒಳ್ಳೆಯದು. ಇದು ಆಸನಗಳನ್ನು ಕೂಡ ಸರಿಯಾಗಿ ಹಾಕಲು ಸಾಧ್ಯವಾಗುತ್ತದೆ. ಜೀರ್ಣವಾದ ಆಹಾರ ಯೋಗಾಸನ ಮಾಡುವದಕ್ಕೆ ಶಕ್ತಿ ತುಂಬುತ್ತದೆ ಅದು ಮಾತ್ರವಲ್ಲ, ಬೆಳ್ಳಂ ಬೆಳಗ್ಗೆ ಸೂರ್ಯನಮಸ್ಕಾರ ಮಾಡುವುದರಿಂದ ಬೆಳಗ್ಗೆ ತುಂಬಾ ತಾಜಾ ಗಾಳಿ, ತಂಪಾದ ಗಾಳಿ ನಮ್ಮ ಶ್ವಾಸಕೋಶವನ್ನು ರೀಫ್ರೆಶ್​ ಮಾಡುವಲ್ಲಿ ಸಹಕಾರಿ ಹಾಗೆಯೇ ಉಸಿರಾಟದ ಪ್ರಕ್ರಿಯೆಗೂ ಕೂಡ ಸಹಾಯಕವಾಗಿ ನಿಲ್ಲುತ್ತದೆ.

ಬೆಳಗ್ಗೆ ಸೂರ್ಯ ನಮಸ್ಕಾರ ಮಾಡುವುದರಿಂದಾಗಿ ನಮ್ಮ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ. ತೂಕ ನಿರ್ವಹಣೆಯಲ್ಲಿಯೂ ಕೂಡ ಸಹಾಯಕವಾಗುತ್ತದೆ. ಹೀಗಾಗಿ ಮುಂಜಾನೆಯೇ ಸೂರ್ಯ ನಮಸ್ಕಾರ ಮಾಡುವುದರಿಂದ ಹಲವು ಆರೋಗ್ಯದ ಲಾಭಗಳಿವೆ. ಮುಂಜಾನೆಯೇ ಸೂರ್ಯ ನಮಸ್ಕಾರ ಮಾಡುವುದರಿಂದ ಹಲವು ಲಾಭಗಳಿದ್ದು ಯೋಗಪಟುಗಳು ಕೂಡ ಮುಂಜಾನೆ ಸೂರ್ಯ ನಮಸ್ಕಾರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೂರ್ಯ ನಮಸ್ಕಾರ ಯಾವಾಗ ಮಾಡಬೇಕು? ಬೆಳಗ್ಗೆ ಮಾಡುವುದು ಒಳ್ಳೆಯದಾ, ಸಂಜೆ ಮಾಡಬೇಕಾ?

https://newsfirstlive.com/wp-content/uploads/2024/10/SURYA-NAMASKAR-3.jpg

Load More