ಇದು ವಿಶ್ವಕಪ್​ ಗೆದ್ದ ಸ್ಟಾರ್ ಆಟಗಾರನ ಅಜ್ಜನ ಮನೆ.. ಮೊಮ್ಮಗ ಬರುವಿಕೆಯ ನಿರೀಕ್ಷೆಯಲ್ಲಿ ತಾತ..!

author-image
Ganesh
Updated On
ಇದು ವಿಶ್ವಕಪ್​ ಗೆದ್ದ ಸ್ಟಾರ್ ಆಟಗಾರನ ಅಜ್ಜನ ಮನೆ.. ಮೊಮ್ಮಗ ಬರುವಿಕೆಯ ನಿರೀಕ್ಷೆಯಲ್ಲಿ ತಾತ..!
Advertisment
  • ಸ್ಟಾರ್ ಕ್ರಿಕೆಟಿಗನ ಪೂರ್ವಜರ ಗ್ರಾಮದಲ್ಲಿ ಸಂತಸದ ಅಲೆ
  • ವಿಶ್ವಕಪ್ ಗೆದ್ದ ಬೆನ್ನಲ್ಲೇ ಸಿಹಿ ಹಂಚಿ ಸಂಭ್ರಮಿಸಿರುವ ಪೂರ್ವಜರು
  • ಟಿ-20 ವಿಶ್ವಕಪ್​ ಗೆದ್ದು ತಾಯ್ನಾಡಿಗೆ ಆಗಮಿಸಿದ ಟೀಂ ಇಂಡಿಯಾ

ಭಾರತ ತಂಡವು ಟಿ-20 ವಿಶ್ವಕಪ್​​ ಗೆಲ್ಲೋದಕ್ಕೆ ಪ್ರಮುಖ ಕಾರಣ ಸೂರ್ಯಕುಮಾರ್ ಯಾದವ್ ಕೂಡ ಹೌದು. ಇದೀಗ ಅದೇ ಸೂರ್ಯಕುಮಾರ್ ಯಾದವ್ ಅವರ ಸ್ವಗ್ರಾಮದ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

publive-image

ಸೂರ್ಯಕುಮಾರ್ ಯಾದವ್ ಮುಂಬೈನಲ್ಲಿ ಜನಿಸಿದವರು. ಅವರ ಪೂರ್ವಜರ ಮನೆ ಇರೋದು ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಗಾಜಿಪುರದಲ್ಲಿ. ಗಾಜಿಪುರದ ಕುಸಾನ್ಹಿ ಗ್ರಾಮದಲ್ಲಿ ಸೂರ್ಯ ಅವರ ಪೂರ್ವಜರು ವಾಸ ಮಾಡ್ತಿದ್ದಾರೆ. ಅವರ ಅಜ್ಜ ವಿಕ್ರಮ್ ಸಿಂಗ್ ಯಾದವ್ ಇನ್ನೂ ಕುಸಾನ್ಹಿಯಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ:ಇರುವೆಗಳೂ ಆಪರೇಷನ್ ಮಾಡ್ತವೆ..! ಮನುಷ್ಯರ ಹೊರತುಪಡಿಸಿದ್ರೆ ಈ ಕಲೆಗಾರಿಕೆ ಇರೋದು ಇವುಗಳಿಗೆ ಮಾತ್ರ..!

publive-image

ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಗಿದ್ದಕ್ಕೆ ಸೂರ್ಯ ಅವರ ತಾತ ಸಂತೋಷ ವ್ಯಕ್ತಪಡಿಸಿದ್ದಾರೆ. ಸಾಧಾರಣವಾಗಿರುವ ಮನೆಯಲ್ಲಿ ಸೂರ್ಯ ತಾತ ವಾಸಿಸುತ್ತಿದ್ದಾರೆ. ಮನೆಯಲ್ಲಿ ಸೂರ್ಯ ಹಾಗೂ ಅವರ ಪತ್ನಿ ದೇವಿಶಾ ಶೆಟ್ಟಿ ಫೋಟೋ ಕೂಡ ಇಟ್ಟುಕೊಂಡಿದ್ದಾರೆ. ಈ ಗ್ರಾಮಕ್ಕೆ ಸೂರ್ಯಕುಮಾರ್ 2017ರಲ್ಲಿ ಬಂದಿದ್ದರಂತೆ. ಪೂರ್ವಜರ ನಿವಾಸಕ್ಕೆ ಬಂದು ಮಾತನಾಡಿಸಿಕೊಂಡು ಹೋಗಿದ್ದರು.

publive-image

ಭಾರತ ತಂಡದ ಈ ಸಾಧನೆಗೆ ಇಡೀ ಗ್ರಾಮವೇ ಸಂತಸಗೊಂಡಿದೆ ಎಂದು ಸೂರ್ಯಕುಮಾರ್ ಅವರ ತಾತ ಹೇಳಿದ್ದಾರೆ. ಸೂರ್ಯಕುಮಾರ್ ಬೇಗ ಗ್ರಾಮಕ್ಕೆ ಬಂದು ಎಲ್ಲರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲಿ ಎಂದಿದ್ದಾರೆ.

ಇದನ್ನೂ ಓದಿ:ಮೂರು ಕ್ಯಾಚ್.. ಮೂರು ವಿಶ್ವಕಪ್.. ಇವರು ಹಿಡಿದಿದ್ದು ಬರೀ ಕ್ಯಾಚ್ ಅಲ್ಲ, ವಿಶ್ವ ಕಿರೀಟ..!

publive-image

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment