/newsfirstlive-kannada/media/post_attachments/wp-content/uploads/2024/04/Surya_Rohit.jpg)
ಇಂದು ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಇಂಡಿಯನ್​ ಪ್ರೀಮಿಯರ್​​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​​​, ರಾಜಸ್ಥಾನ್​ ರಾಯಲ್ಸ್​​​ ತಂಡಗಳು ಮುಖಾಮುಖಿ ಆಗುತ್ತಿವೆ. ಸತತ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್​​​ ಇಂದು ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ.
ಇನ್ನು, ಈ ಮಧ್ಯೆ ಮುಂಬೈ ಇಂಡಿಯನ್ಸ್​​ಗೆ ಸ್ಟಾರ್​ ಬ್ಯಾಟರ್​ ಸೂರ್ಯಕುಮಾರ್ ಯಾದವ್ ಎಂಟ್ರಿ ನೀಡಿದ್ದಾರೆ ಎಂದು ಸುದ್ದಿಯಾಗಿದೆ. ಹೀಗಾಗಿ ಸೂರ್ಯ ಆಗಮನದಿಂದ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ನಾಯಕತ್ವದ ಮುಂಬೈ ತಂಡಕ್ಕೆ ಆನೆಬಲ ಬಂದಿದೆ.
/newsfirstlive-kannada/media/post_attachments/wp-content/uploads/2023/11/Surya-Kumar-yadav.jpg)
ಕಳೆದ 2 ಪಂದ್ಯಗಳಲ್ಲೂ ಸೂರ್ಯಕುಮಾರ್​ ಯಾದವ್ ಆಡಿರಲಿಲ್ಲ. ಈಗ ಇಂದು ರಾಜಸ್ಥಾನ್​​ ವಿರುದ್ಧ ಪಂದ್ಯದಿಂದ ಸೂರ್ಯ ಕಮ್​ಬ್ಯಾಕ್​ ಮಾಡಲಿದ್ದು, ಮುಂಬೈ ಇಂಡಿಯನ್ಸ್​​ ​​ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಬಲ ಹೆಚ್ಚಾಗಿದೆ. ಸರ್ಜರಿ ಬಳಿಕ ಇನ್ನೂ ಚೇತರಿಸಿಕೊಳ್ಳದ ಕಾರಣ ಸೂರ್ಯ ಇತ್ತೀಚೆಗೆ ಹಾರ್ಟ್​​ ಇಮೋಜಿಯನ್ನು ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us