/newsfirstlive-kannada/media/post_attachments/wp-content/uploads/2024/08/Vijayapura-Bike-Accident-4.jpg)
ವಿಜಯಪುರದಲ್ಲಿ ಭೀಕರ ಅಪಘಾತ ಸಂಭವಿಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕಾರು ಗುದ್ದಿದ ಬಳಿಕ ಬೈಕ್‌ನಲ್ಲಿದ್ದ ವಕೀಲನನ್ನು ಅರ್ಧ ಕಿಲೋಮೀಟರ್ ಎಳೆದೊಯ್ದು ಸಾಯಿಸಿದ್ದಾರೆ ಎನ್ನಲಾಗಿತ್ತು. ಆದ್ರೆ ಇದೀಗ ಸಿಕ್ಕ ಮಾಹಿತಿ ಪ್ರಕಾರ ಅರ್ಧ ಕಿಲೋ ಮೀಟರ್ ಅಲ್ಲ 2 ಕಿ.ಮೀ ಧರಧರನೇ ಎಳೆದೊಯ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಫಸ್ಟ್ ನೈಟ್‌ನಲ್ಲಿ ಮಚ್ಚಿನ ಏಟು.. ನವವಧು-ವರರು ರೂಮಿಗೆ ಹೋದ ಮೇಲೆ ಆಗಿದ್ದೇನು? ಸಾವಿನ ಸುತ್ತ ಅನುಮಾನ!
ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ಇಂದು ಸಂಜೆ 6 ಗಂಟೆಗೆ ನಡೆದ ಭಯಾನಕ ಘಟನೆ ಇದು. ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದ ನಿವಾಸಿ ಹಾಗೂ ವಕೀಲ ರವಿ ಮೇಲಿನಕೇರಿ (35) ಸಾವನ್ನಪ್ಪಿದ ದುರ್ದೈವಿ.
ಅಗಸಿ ಬಳಿ ವಕೀಲ ರವಿ ಮೇಲಿನಕೇರಿ ಅವರ ಚಲಾಯಿಸುತ್ತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಚಾಲಕ ಸ್ಥಳದಿಂದ ಪರಾರಿಯಾಗಿರೋದು ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ. ವಿಜಯಪುರ ಸಂಚಾರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮೈ ಮೇಲೆ ಸೀರೆ ಇರಲ್ಲ, ಆದ್ರೂ ರೇಪ್ ಆಗಿರಲ್ಲ; ಒಂದೇ ರೀತಿ 9 ಮಹಿಳೆಯರ ಹತ್ಯೆ; ಬೆಚ್ಚಿ ಬೀಳಿಸಿದ ಸ್ಯಾರಿ ಕಿಲ್ಲರ್!
ಅಪಘಾತ ನೋಡಿದ್ರೆ ಕೊಲೆಯಾದ ಶಂಕೆ!
ವಕೀಲ ರವಿ ಮೇಲಿನಕೇರಿ ಅವರು ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಅವರ ರೈಟ್ ಹ್ಯಾಂಡ್ ಹಾಗೂ ಸಂಬಂಧಿಯಾಗಿದ್ದಾರೆ. ರವಿ ಚಲಾಯಿಸುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದು 2 ಕಿಲೋ ಮೀಟರ್‌ವರೆಗೆ ಡೆಡ್ ಬಾಡಿಯನ್ನು ಎಳೆದೊಯ್ದಿದೆ. ಈ ಘಟನೆ ನೋಡಿದ್ರೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತರ ಸಂಬಂಧಿಕರ ದೂರಿನ ಮೇರೆಗೆ ವಿಜಯಪುರ ಎಸ್‌ಪಿ ಋಷಿಕೇಶ್ ಸೋನಾವನೆ ಅವರು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ