/newsfirstlive-kannada/media/post_attachments/wp-content/uploads/2024/06/mandya.jpg)
ಮಂಡ್ಯ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಚಾಕುವಿನಿಂದ ದೊಡ್ಡಮ್ಮನ ಹತ್ಯೆ ಮಾಡಿದ ಘಟನೆ ಮಂಡ್ಯ ನಗರದ ಆನೆಕೆರೆ ಬೀದಿಯಲ್ಲಿ ನಡೆದಿದೆ. ವೃದ್ಧೆ ಕೆಂಪಮ್ಮ(80) ಕೊಲೆಯಾದ ದುರ್ದೈವಿ.
ಆರೋಪಿ ಹರೀಶ್ (34) ಎಂಬಾತ ಕೆಂಪಮ್ಮನನ್ನು ಕೊಲೆ ಮಾಡಿದ್ದು, ಕೊಲೆಗೈದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ಕೊಲೆ ಆರೋಪಿ ಹರೀಶ್ ತಂದೆಯ ಜೊತೆಗೆ ಕೆಂಪಮ್ಮ ಕಳೆದ ಹಲವು ವರ್ಷಗಳಿಂದ ವಾಸವಾಗಿದ್ದಳು. ಗಂಡ ತೀರಿಹೋದ ನಂತರ ಕೆಂಪಮ್ಮನಿಗೆ ಆರೋಪಿ ತಂದೆ ರಾಮಕೃಷ್ಣ ಆಸರೆ ನೀಡಿದ್ದರು.
ಇದನ್ನೂ ಓದಿ: ಜೈಲಿನಲ್ಲಿ ಮೊದಲ ದಿನ ಕಳೆದ ದರ್ಶನ್​.. ನಟನಿಗೆ ನೀಡಿದ ಫೆಸಿಲಿಟಿ ಮಾತ್ರ..
ಕೆಂಪಮ್ಮನನ್ನು ಕೊಲೆಗೈದ ಬಳಿಕ ತನ್ನ ತಂದೆ ರಾಮಕೃಷ್ಣನಿಗೆ ಆರೋಪಿ ಹರೀಶ್ ಮಾಹಿತಿ ನೀಡಿದ್ದಾನೆ. ಹರೀಶ್ ತಾಯಿ ತಂದೆ ರಾಮಕೃಷ್ಣನಿಂದ ಬೇರೆಯಾಗಲು ಕೆಂಪಮ್ಮ ಕಾರಣ ಎಂಬ ದ್ವೇಷ ಕೂಡ ಇತ್ತು. ಕುಡಿದ ಮತ್ತಿನಲ್ಲಿ ಮಾತಿನ ಚಕಮಕಿ ನಡೆದು ಕೊನೆಗೆ ದೊಡ್ಡಮ್ಮನನ್ನು ಹರೀಶ್​ ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ: ಕೈದಿ ನಂ. 6106.. ದರ್ಶನ್ ಜೈಲು ಸೇರಲು ಕಾರಣವಾಗಿದ್ದೇ ಅಭಿಮಾನಿಗಳು; SPP ಹೇಳಿದ್ದೇನು?
ತಂದೆ ಕೆಲಸಕ್ಕೆ ಹೋಗಿದ್ದ ವೇಳೆ ದೊಡ್ಡಮ್ಮನ ಕೊಲೆಗೈದಿದ್ದಾನೆ. ಸ್ಥಳಕ್ಕೆ ಎಸ್ ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us