newsfirstkannada.com

ಮಂಡ್ಯದಲ್ಲಿ ಕಾನ್​​ಸ್ಟೇಬಲ್​ ಮೇಲೆ ಹಲ್ಲೆ ಪ್ರಕರಣ.. ದರ್ಶನ್​ ಪಟಲಾಂ​ಗೆ ಮತ್ತೆ ಸಂಕಷ್ಟ?

Share :

Published June 23, 2024 at 7:37am

Update June 23, 2024 at 7:38am

    ದರ್ಶನ್​ ಪಟಲಾಂನಿಂದ ಕರ್ತವ್ಯನಿರತ ಕಾನ್​ಸ್ಟೇಬಲ್​ ಮೇಲೆ ಹಲ್ಲೆ

    ಮತ್ತೆ ಜೀವ ಪಡೆದುಕೊಳ್ಳಲಿದೆಯಾ ಕಾನ್​ಸ್ಟೇಬಲ್​ ಮೇಲಿನ ಹಲ್ಲೆ

    ಪ್ರಕರಣದ ಬಗ್ಗೆ ಮಂಡ್ಯ ಎಸ್ಪಿಯಿಂದ ಮಾಹಿತಿ ಪಡಿದುಕೊಂಡ ಗೃಹ ಇಲಾಖೆ

ಮಂಡ್ಯ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್​ ವಿಚಾರವಾಗಿ ಕೊನೆಗೂ ದರ್ಶನ್​ ಆ್ಯಂಡ್​ ಟೀಂ ಜೈಲು‌ ಸೇರಿದ್ದಾರೆ. ಆದರೀಗ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ ಆಪ್ತರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ನಟನ ಆಪ್ತರ ಮೇಲೆ ಮತ್ತೊಂದು ಕೇಸ್ ದಾಖಲಾಗುವ ನಿರೀಕ್ಷೆ ಇದೆ.

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪೊಲೀಸ್ ಕಾನ್​ಸ್ಟೇಬಲ್​ ಮೇಲೆ ಡಿ ಗ್ಯಾಂಗ್​ ಹಲ್ಲೆ ನಡೆಸಿತ್ತು ಎಂಬ ಆರೋಪ ಕೇಳಿಬಂದಿತ್ತು. 2 ತಿಂಗಳ ಬಳಿಕ ಗನ್ ಮ್ಯಾನ್ ಮೇಲಿನ ಹಲ್ಲೆ ಪ್ರಕರಣ ಮತ್ತೆ ಜೀವ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ಮಂಡ್ಯ ಪೊಲೀಸರು ಮೇಲಾಧಿಕಾರಿಗಳ ಸೂಚನೆಯಂತೆ ಪ್ರಕರಣ ದಾಖಲಿಸಿಕೊಳ್ಳುತ್ತಾರಾ ಎಂಬ ಅನುಮಾನ ಕಾಡಿದೆ.

ಇದನ್ನೂ ಓದಿ: ಜೈಲಿನಲ್ಲಿ ಮೊದಲ ದಿನ ಕಳೆದ ದರ್ಶನ್​.. ನಟನಿಗೆ ನೀಡಿದ ಫೆಸಿಲಿಟಿ ಮಾತ್ರ..

ಏಪ್ರಿಲ್ 22 ರಂದು ಗನ್ ಮ್ಯಾನ್ ನಾಗೇಶ್ ಮೇಲೆ ಡಿ ಗ್ಯಾಂಗ್​ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಕಾನ್​ಸ್ಟೇಬಲ್​ ನಾಗೇಶ್ ಮದ್ದೂರು MLA ಕದಲೂರು ಉದಯ್ ಗನ್ ಮ್ಯಾನ್ ಆಗಿದ್ದರು. ಚುನಾವಣಾ ಪ್ರಚಾರದ ವೇಳೆ ನಟ ದರ್ಶನ್ ಆಪ್ತರಿಂದ ನಾಗೇಶ್ ಮೇಲೆ ಹಲ್ಲೆ ನಡೆಸಿದ್ದ ಆರೋಪ ಕೇಳಿಬಂದಿತ್ತು. MLA ಮನೆಯ ಬಳಿಯೇ ಲಕ್ಷ್ಮಣ್, ನಾಗರಾಜು ಎಂಬುವರು ಕಾನ್​ಸ್ಟೇಬಲ್​ ಮೇಲೆ ಹಲ್ಲೆ ಮಾಡಿದ್ದರು. ಸದ್ಯ ಹಲ್ಲೆ ಮಾಡಿದವರಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಭಾಗಿಯಾಗಿದ್ದ ಲಕ್ಷ್ಮಣ್, ನಾಗರಾಜು ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: ವಿವಾದಿತ ಬಾಲಿವುಡ್ ಬ್ಯೂಟಿ ಸೋನಾಕ್ಷಿ ಸಿನ್ಹಾ ಮದುವೆಗೆ ಯಾರೆಲ್ಲಾ ಬರ್ತಾರೆ? ಯಾಕಿಷ್ಟು ಸಿಂಪಲ್‌?

ಕಾನ್​ಸ್ಟೇಬಲ್​ ನಾಗೇಶ್​ ಅಂದು ಹಲ್ಲೆಗೊಳಗಾದ ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ಎಂ.ಎಲ್.ಸಿ ಮಾಡಿಸಿದ್ದರು. ಕೆಸ್ತೂರು ಪೊಲೀಸ್ ಠಾಣೆಗೆ ನಾಗೇಶ್ ದೂರು ಕೊಟ್ಟಿದ್ದರು. ಆದರೆ FIR ದಾಖಲಾಗಿರಲಿಲ್ಲ. ಇದೀಗ ಹಳೆ ಪ್ರಕರಣ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಕಾರಣ ಈ ಬಗ್ಗೆ ಮಂಡ್ಯ ಎಸ್ಪಿಯಿಂದ ಗೃಹ ಇಲಾಖೆ ಮಾಹಿತಿ ಪಡಿದುಕೊಂಡಿದೆ. ಕಾನ್​ಸ್ಟೇಬಲ್​ ಮೇಲೆ ಹಲ್ಲೆ ನಡೆದ್ರೂ ಯಾಕೆ FIR ದಾಖಲಿಸಿಲ್ಲ ಎಂದು ಪ್ರಶ್ನೆ ಮಾಡಿದೆ. ಪ್ರಕರಣ ಬಗ್ಗೆ ವರದಿ ನೀಡುವ ಜೊತೆಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಹಳೆಯ ಸ್ನೇಹಿತರ ಭೇಟಿಯಿಂದ ಖುಷಿ, ಈ ರಾಶಿಗೆ ಶತ್ರುಗಳ ಕಾಟ- ಇಲ್ಲಿದೆ ಇಂದಿನ ಭವಿಷ್ಯ!

ಒಂದು ವೇಳೆ FIR ದಾಖಲಾದ್ರೆ ದರ್ಶನ್ ಆಪ್ತರಿಗೆ ಮತ್ತೊಂದು ಕಂಟಕ ಎದುರಾಗುವ ಸಾಧ್ಯತೆ ಇದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ನೌಕರನ ಮೇಲೆ ಹಲ್ಲೆ ಸೆಕ್ಷನ್ ಅಡಿ ಕೇಸು ದಾಖಲಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಲ್ಲಿ ಕಾನ್​​ಸ್ಟೇಬಲ್​ ಮೇಲೆ ಹಲ್ಲೆ ಪ್ರಕರಣ.. ದರ್ಶನ್​ ಪಟಲಾಂ​ಗೆ ಮತ್ತೆ ಸಂಕಷ್ಟ?

https://newsfirstlive.com/wp-content/uploads/2024/06/Police-nagesh.jpg

Load More