/newsfirstlive-kannada/media/post_attachments/wp-content/uploads/2024/06/PAk.webp)
ಗುರುವಾರ ನಡೆದ ಟಿ20 ಪಂದ್ಯದಲ್ಲಿ ಪಾಕ್ಗೆ ಮುಖಭಂಗವಾಗಿದೆ. ಅಮೆರಿಕಾದ ವಿರುದ್ಧ ಸೂಪರ್ ಓವರ್ನಲ್ಲಿ ಪಾಕ್ ಸೋತಿದೆ. ಹೀಗಾಗಿ ಸಪ್ಪೆ ಮೋರೆ ಹಾಕಿ ಕುಳಿತಿದೆ.
ಡಲ್ಲಾಸ್ನ ಗ್ರ್ಯಾಂಡ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಅಮೆರಿಕ ತಂಡ ಪಾಕ್ ತಂಡವನ್ನು ಮಣಿಸಿದೆ. ಅದಕ್ಕೂ ಮುನ್ನ ಟಾಸ್ ಗೆದ್ದು ಜಾಣತನದಿಂದ ಬೌಲಿಂಗ್ ಆಯ್ದುಕೊಂಡ ಅಮೆರಿಕ ತಂಡ 20 ಓವರ್ನಲ್ಲಿ ಪಾಕ್ ತಂಡವನ್ನು 159 ರನ್ಗೆ ಹಿಡಿದಿಟ್ಟುಕೊಂಡಿತ್ತು. ಶಾಬಾದ್ ಖಾನ್ 25 ಎಸೆತಕ್ಕೆ 40 ರನ್ ಒಂದು ಬೌಂಡರಿ ಮತ್ತು 6 ಸಿಕ್ಸ್ ಬಾರಿಸಿದ್ರು. ಆದರೆ ಉಳಿದ ಆಟಗಾರರ ಪರ್ಫಾಮೆನ್ಸ್ ಅಷ್ಟೇನು ಚೆನ್ನಾಗಿರಲಿಲ್ಲ. ಅಮೆರಿಕ ಬೌಲರ್ಸ್ ನೋಸ್ತೂಶ್ ಕೆಂಜಿಗೆ 3, ಸೌರಭ್ ನೇತ್ರವಾಲ್ಕರ್ 2, ಅಲಿಖಾನ್ ಮತ್ತು ಜಸ್ದೀಪ್ ಸಿಂಗ್ ತಲಾ 1 ವಿಕೆಟ್ ಕಬಳಿಸುವ ಮೂಲಕ ಪಾಕ್ಗೆ ಕಾಡಿದರು.
ಇದನ್ನೂ ಓದಿ:ಇಂದು ಬಿರುಗಾಳಿ ಸಮೇತ ಮಳೆಯ ಮುನ್ಸೂಚನೆ! 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್.. ಬೇಗ ಮನೆ ಸೇರಿಕೊಳ್ಳಿ
ಗೆಲುವಿನ ಗಡಿ ಮುಟ್ಟಿದ ಅಮೆರಿಕ
ಅತ್ತ ಪಾಕ್ ನೀಡಿದ ಟಾರ್ಗೆಟ್ ಬೆನ್ನತ್ತಿದ ಅಮೆರಿಕ ಮಾತ್ರ ಗೆಲುವನ್ನು ಸಂಭ್ರಮಿಸುವ ಗುರಿ ಹೊಂದಿತ್ತು. ಅದರಲ್ಲೂ ಮೋನಾಂಕ್ ಪಟೇಲ್ 38 ಎಸೆತಕ್ಕೆ 7 ಬೌಂಡರಿ, 1 ಸಿಕ್ಸ್ ಬಾರಿ ಅರ್ಧ ಶತಕ ಪೂರೈಸಿದರು. ಅತ್ತ ಆ್ಯಂಡ್ರಿಸ್ ಗಸ್ ಮತ್ತು ಆ್ಯರೋನ್ ಜೋನ್ಸ್ ಇಬ್ಬರು 26 ಎಸೆತಕ್ಕೆ 35, 36 ರನ್ ಬಾರಿಸಿದರು. ಕೊನೆಗೆ ಪಾಕ್ ನೀಡಿದ ಟಾರ್ಗೆಟ್ಗೆ ಬಂದು ಮುಟ್ಟಿಸುವ ಮೂಲಕ ಪಂದ್ಯ ಟೈ ಆಯಿತು. ಅತ್ತ ಅಮೆರಿಕನ್ನರ ಮೇಲೆ ಪಾಕ್ ವೇಗಿಗಳು ಬೌಲಿಂಗ್ ದಾಳಿ ಮಾಡಿ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಅದು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: IND vs PAK ಪಂದ್ಯಕ್ಕೆ ಭಾರೀ ಡಿಮ್ಯಾಂಡ್.. ಜಸ್ಟ್ 10 ಸೆಕೆಂಡ್ಸ್ ಜಾಹೀರಾತಿಗೆ 10, 20 ಲಕ್ಷ ಅಲ್ಲವೇ ಅಲ್ಲ..!
Scenes from USA's stunning victory in Dallas ???#T20WorldCup#USAvPAKpic.twitter.com/bTipZM8env
— ICC (@ICC)
Scenes from USA's stunning victory in Dallas 😍🇺🇸#T20WorldCup#USAvPAKpic.twitter.com/bTipZM8env
— ICC (@ICC) June 6, 2024
">June 6, 2024
ಸೂಪರ್ ಓವರ್ ಸೂಪರ್ ಮ್ಯಾಜಿಕ್
ಪಂದ್ಯ ಟೈ ಆದ ಬಳಿಕ ಸೂಪರ್ ಓವರ್ಗೆ ಕೊಂಡೊಯ್ಯಿತು. ಇದರಲ್ಲಿ ಪಾಕ್ 1 ವಿಕೆಟ್ ಒಪ್ಪಿಸಿ 13 ರನ್ ಟಾರ್ಗೆಟ್ ನೀಡಿತು. ಆದರೆ ಅಮೆರಿಕ ತಂಡ ಒಂದು ವಿಕೆಟ್ ನೀಡಿದರು 18 ರನ್ ಕಬಳಿಸಿತು. ಒಟ್ಟಿನಲ್ಲಿ ಪಾಕ್ಗೆ ಅಮೆರಿಕ ತಾವೇನು ಕಡಿಮೆ ಇಲ್ಲ ಎಂಬುದನ್ನು ನಿನ್ನೆಯ ಪಂದ್ಯದಲ್ಲಿ ತೋರಿಸಿಕೊಟ್ಟಿದೆ. ಇದರಿಂದ ಪಾಕ್ಗೆ ಮುಖಭಂಗವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್