ಅಮೆರಿಕ ತಂಡದಲ್ಲಿ ಚಿಕ್ಕಮಗಳೂರಿನ ಮೂಡಿಗೆರೆ ಹೈದ
ನಿರರ್ಗಳವಾಗಿ ಕನ್ನಡ ಮಾತನಾಡುವ ಈ ಆಟಗಾರ ಯಾರು?
ಪಾಕ್ ಸೋಲಿಗೆ ಈತನೇ ಕಾರಣ.. ಈತ ಓದಿರೋದು ಬೆಂಗಳೂರಲ್ಲಿ!
ಗುರುವಾರ ನಡೆದ ಟಿ20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಅಮೆರಿಕ ಗೆದ್ದಿದೆ. ಅನುಭವಿ ಪಾಕ್ ಯುಎಸ್ಎ ವಿರುದ್ಧ ಸೋತಿರೋದು ದೊಡ್ಡ ಮುಖಭಂಗಕ್ಕೆ ಕಾರಣವಾಗಿದೆ. ಆದರೆ ಪಾಕ್ ಅನ್ನು ಸೋಲಿಸಲು ಅಮೆರಿಕ ತಂಡ ಕನ್ನಡಿಗನನ್ನು ಅಸ್ತ್ರವನ್ನಾಗಿ ಬಳಸಿರೋದು ಬಹುತೇಕರಿಗೆ ತಿಳಿದಿಲ್ಲ.
ಹೌದು. ಅಮೆರಿಕ ತಂಡ ನೊಸ್ತುಶ್ ಕೆಂಜಿಗೆ ಮೂಲಕ ಪಾಕ್ ತಂಡದ ಮೇಲೆ ಬೌಲಿಂಗ್ ದಾಳಿ ಮಾಡಿದರು. ನೊಸ್ತುಶ್ ಎಸೆತಕ್ಕೆ ಪಾಕ್ 3 ವಿಕೆಟ್ ಉದುರಿತ್ತು. ಇದಾದ ಬಳಿಕ ಅಬ್ಬರದ ಜೊತೆಗೆ ಆತ ಕನ್ನಡಿಗ ಎಂಬ ಸುದ್ದಿಯೂ ವೈರಲ್ ಆಯ್ತು.
ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್ಗೆ ರಸ್ತೆ ಮಧ್ಯೆಯೇ ಹೊತ್ತಿ ಉರಿದ ಕಾರು.. ನಾಲ್ವರು ಪ್ರಯಾಣಿಕರು ಬಚಾವ್ ಆಗಿದ್ದೇ ರೋಚಕ
ಅಂದಹಾಗೆಯೇ ನೊಸ್ತುಶ್ ಮೂಲತಃ ಕರ್ನಾಟಕದವನು. ಅದರಲ್ಲೂ ಕಾಫಿನಾಡು ಚಿಕ್ಕಮಗಳೂರಿನವರು. ಮೂಡಿಗೆರೆ ಮೂಲದ ಇವರು ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಸದ್ಯ ಈ ಕನ್ನಡಿಗನ ಮಾತು ವೈರಲ್ ಆಗಿದೆ. ಇನ್ಸ್ಟಾದಲ್ಲಿ ಅವರು ಕನ್ನಡದಲ್ಲಿ ಮಾತನಾಡಿರುವುದು ಹರಿದಾಡುತ್ತಿದೆ. ನೊಸ್ತುಶ್ ಮಾತುಗಳ ಕೇಳಿ ಕನ್ನಡಿಗರು ಮನಸೋತಿದ್ದಾರೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ಪೂರ್ಣಚಂದ್ರ ತೇಜಸ್ವಿ ಅವರ ಮಿತ್ರ ಪ್ರದೀಪ್ ಕೆಂಜಿಗೆ ಅವರ ಮಗ ನೊಸ್ತುಶ್ ಕೆಂಜಿಗೆ ಅವರು ನಿನ್ನೆ ಅಮೆರಿಕ ತಂಡದ ಪರವಾಗಿ ಪಾಕಿಸ್ತಾನದ ಮೂರು ವಿಕೆಟ್ ಕಿತ್ತು ಗೆಲುವಿಗೆ ಕಾರಣರಾಗಿದ್ದು ನಮ್ಮೆಲ್ಲರ ಹೆಮ್ಮೆ. ಜೈ ಮೂಡಿಗೆರೆ ಜೈ ಕರ್ನಾಟಕ 💛❤️#T20WorldCupOnStar pic.twitter.com/ftEaezUCEr
— Star Sports Kannada (@StarSportsKan) June 7, 2024
ನೊಸ್ತುಶ್ ಕೆಂಜಿಗೆ
22 ವಷದಿಂದ ವೃತ್ತಿಪರ ಕ್ರಿಕೆಟಿಗನಾಗಲು ಬಯಸಿದ್ದರು. ಅದಕ್ಕಾಗಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ನಲ್ಲಿ ಕಠಿಣ ತರಬೇತಿ ಪಡೆದರು. ಆದರೆ ಅಮೆರಿಕಾದ ಪ್ರಜೆಯಾದ ಈತ ಬೆಂಗಳೂರಿನ ದಯಾನಂದ ಸಾಗರ ಕಾಲೇಜ್ ಆಫ್ ಇಂಜಿನಿಯರಿಂಗ್ನಿಂದ ಜೈವಿಕ ತಂತ್ರಜ್ನಾನದಲ್ಲಿ ಪದವಿಯನ್ನು ಪಡೆದು ಬಳಿಕ ಯುಎಸ್ಎಗೆ ಮರಳಿದರು.
ಇದನ್ನೂ ಓದಿ: ಪಕ್ಕಾ ಚಾಕಲೇಟ್ ಗರ್ಲ್ ಎಂದಿದ್ದ ಚಂದನ್ ಶೆಟ್ಟಿ! ನಿವೇದಿತಾ ಜೊತೆಗಿನ ಸಂಸಾರಕ್ಕೆ ಬ್ರೇಕ್ ನೀಡಲು ಇದೇನಾ ಕಾರಣ?
ಆ ಬಳಿಕ ಅಮೆರಿಕ ತಂಡ ಸೇರಿಕೊಂಡರು. 2019ರಲ್ಲಿ ನೊಸ್ತುಶ್ ಕೆಂಜಿಗೆ ಯುಎಇ ವಿರುದ್ಧ ಮೈದಾನಕ್ಕೆ ಕಾಲಿಟ್ಟರು. ಅಂದಿನಿಂದ ಕೆಂಜಿಗೆ 40 ಒಡಿಐ ಮತ್ತು 7 ಟಿ20ಐಗಳನ್ನು ಆಡಿದ್ದಾರೆ.
ಇದನ್ನೂ ಓದಿ: ಬರಲಿ ಮಳೆ.. ಹರಿಯಲಿ ಹೊಳೆ.. ಇಂದು KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ ಗೊತ್ತಾ?
ಅಂದಹಾಗೆಯೇ ಪಾಕ್ ವಿರುದ್ಧ ಆಡಿದ ಪಂದ್ಯ ನೊಸ್ತುಶ್ ಕೆಂಜಿಗೆ 4 ಓವರ್ನಲ್ಲಿ 30 ರನ್ ನೀಡಿ 3 ವಿಕೆಟ್ ಉರುಳಿಸಿದ್ದಾರೆ. ಆ ಮೂಲಕ ಅಮೆರಿಕ ತಂಡದ ಗೆಲುವಿಗೆ ಮತ್ತು ಪಾಕ್ ಸೋಲಿಗೆ ಕಾರಣರಾಗಿದ್ದಾರೆ. ಇದಕ್ಕೂ ಮುಖ್ಯವಾಗಿ ನೊಸ್ತುಶ್ ಕನ್ನಡಿಗ ಎಂಬ ವಿಚಾರ ಎಲ್ಲರಿಗೂ ಹೆಮ್ಮ ತಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ