/newsfirstlive-kannada/media/post_attachments/wp-content/uploads/2024/06/ROHIT_USA.jpg)
2024ರ T20 ವಿಶ್ವಕಪ್​ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕೆನಡಾದ ವಿರುದ್ಧ ಅಮೆರಿಕ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಎ ಗ್ರೂಪ್​ನಲ್ಲಿರುವ ಭಾರತ ಸೇರಿದಂತೆ ಉಳಿದ 3 ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಅಮೆರಿಕದ ಡಲ್ಲಾಸ್​ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ ನಡೆದ T20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಕೆನಡಾವನ್ನು ಬಗ್ಗುಬಡಿದಿದೆ. ಟಾಸ್ ಗೆದ್ದುಕೊಂಡ ಅಮೆರಿಕ ಮೊದಲ ಫಿಲ್ಡೀಂಗ್​ ಆಯ್ಕೆ ಮಾಡಿಕೊಂಡಿತು. ಎದುರಾಳಿ ಕೆನಡಾವನ್ನು ಮೊದಲ ಬ್ಯಾಟಿಂಗ್​ಗೆ ಆಹ್ವಾನಿಸಿದರು. ಉತ್ತಮ ಆರಂಭ ಪಡೆದುಕೊಂಡ ಕೆನಡಾ 43 ರನ್​ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ನವನೀತ್ ಧಲಿವಾಲ್ ಹಾಗೂ ನಿಕೋಲಸ್ ಕಿರ್ಟನ್ ಅವರು ಅಮೋಘ ಬ್ಯಾಟಿಂಗ್​​ ಮಾಡಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಈ ಇಬ್ಬರ ಹಾಫ್​ಸೆಂಚುರಿಯಿಂದ ಕೆನಡಾ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್​ಗಳ ಗುರಿ ನೀಡಿತ್ತು.
/newsfirstlive-kannada/media/post_attachments/wp-content/uploads/2024/06/ROHIT_USA_1.jpg)
ಈ ಟಾರ್ಗೆಟ್ ಬೆನ್ನತ್ತಿದ್ದ ಅಮೆರಿಕ ಪ್ರಾರಂಭದಲ್ಲೇ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. 0ಗೆ 1 ವಿಕೆಟ್​ ಕಳೆದುಕೊಂಡಿತ್ತು. 42 ರನ್​ಗೆ ತನ್ನ 2ನೇ ವಿಕೆಟ್​ ಅನ್ನು ಕಳೆದುಕೊಂಡಿತು. ಇದಾದ ಬಳಿಕ ಕ್ರೀಸ್​​ಗೆ ಆಗಮಿಸಿದ ಆಂಡ್ರೀಸ್ ಗೌಸ್ ಹಾಗೂ ಆ್ಯರೋನ್ ಜೇನ್ಸ್ ಕೆನಡಾ ಬೌಲರ್​ಗಳನ್ನ ಬೆಂಡೆತ್ತಿದರು. ಆಂಡ್ರೀಸ್ 7 ಬೌಂಡರಿ, 3 ಭರ್ಜರಿ ಸಿಕ್ಸರ್ ಸಮೇತ 65 ರನ್​ ಗಳಿಸಿ ಔಟ್ ಆದರು. ಇತ್ತ ಕ್ರೀಸ್ ಕಚ್ಚಿ ನಿಂತಿದ್ದ ಆ್ಯರೋನ್ ಜೇನ್ಸ್ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದರು. ಇವರ ಬ್ಯಾಟಿಂಗ್ ಅಬ್ಬರಕ್ಕೆ ಪ್ರತಿ ಸಾರಿ ಬಾಲ್​ ಮೈದಾನವನ್ನು ಸುತ್ತಿಕೊಂಡು ಬರುತ್ತಿತ್ತು.
ಆ್ಯರೋನ್ ಜೇನ್ಸ್ ಮಿಂಚಿನ ಬ್ಯಾಟಿಂಗ್​​ನಿಂದ ಕೇವಲ 40 ಎಸೆತಗಳಲ್ಲಿ 4 ಬೌಂಡರಿ, 10 ಅಮೋಘವಾದ ಸಿಕ್ಸರ್​ ಸಮೇತ 94 ರನ್​​ಗಳನ್ನು ಸಿಡಿಸಿ ಔಟ್ ಆಗದೇ ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನು 14 ಬಾಲ್ ಬಾಕಿ ಇರುವಾಗಲೇ ಅಮೆರಿಕ 197 ರನ್​ಗಳಿಸಿ ಗೆಲುವಿನ ನಗೆ ಬೀರಿತು. ಇನ್ನು ಭಾರತ ಕೂಡ ಎ ಗ್ರೂಪ್​​ನಲ್ಲಿದ್ದರಿಂದ ಆ್ಯರೋನ್ ಜೇನ್ಸ್ ಅವರ ಬ್ಯಾಟಿಂಗ್ ಭಯ ರೋಹಿತ್ ಪಡೆಗೆ ಇದೆ ಎನ್ನಬಹುದು. ಎಕೆಂದರೆ ಜೂನ್ 6ರಂದು ಅಮೆರಿಕ ವಿರುದ್ಧ ಭಾರತ ಕಣಕ್ಕೆ ಇಳಿಯಲಿದೆ. ಈ ವೇಳೆ ಆ್ಯರೋನ್ ಜೇನ್ಸ್ ಬ್ಯಾಟಿಂಗ್ ಪ್ರದರ್ಶನ ಮೂಡಿ ಬಂದ್ರೆ ರೋಹಿತ್ ಬಾಯ್ಸ್​​ಗೆ ಸೋಲಿನ ರುಚಿ ಸಿಗೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us