ಕಣ್ಣಲ್ಲಿ ನೀರು ಮತ್ತು ವಿಜಯದ ಸಂಭ್ರಮ.. ಹೇಗಿತ್ತು ಟೀಂ ಇಂಡಿಯಾ ಆಟಗಾರರ ಗೆಲುವಿನ ಸಂಭ್ರಮ..! Photos

author-image
Ganesh
Updated On
ಕಣ್ಣಲ್ಲಿ ನೀರು ಮತ್ತು ವಿಜಯದ ಸಂಭ್ರಮ.. ಹೇಗಿತ್ತು ಟೀಂ ಇಂಡಿಯಾ ಆಟಗಾರರ ಗೆಲುವಿನ ಸಂಭ್ರಮ..! Photos
Advertisment
  • ಟೀಂ ಇಂಡಿಯಾಗೆ ಟಿ20 ವಿಶ್ವಕಪ್​​ ಕಿರೀಟ..!
  • ಭಾರತೀಯ ಆಟಗಾರರು ಭಾವುಕರಾಗಿ ಕಣ್ಣೀರು
  • 11 ವರ್ಷಗಳ ನಂತರ ಟೀಂ ಇಂಡಿಯಾಗೆ ಐಸಿಸಿ ಟ್ರೋಫಿ

ಟಿ20 ವಿಶ್ವಕಪ್​​ ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ 7 ರನ್​​ಗಳಿಂದ ಸೋಲಿಸಿ ವಿಶ್ವಕಪ್​​ಗೆ ಮುತ್ತಿಟ್ಟಿತು. ಗೆಲುವು ದಾಖಲಿಸ್ತಿದ್ದಂತೆಯೇ ತಂಡದ ಆಟಗಾರರ ಕಣ್ಣಾಲೆಗಳು ಒದ್ದೆಯಾದವು. ಗೆಲುವಿನ ನಂತರ ಭಾರತೀಯ ಆಟಗಾರರು ಭಾವುಕರಾಗಿ ಕಣ್ಣೀರು ಇಟ್ಟಿದ್ದಾರೆ.

publive-image

ಸುಮಾರು 11 ವರ್ಷಗಳ ನಂತರ ಟೀಂ ಇಂಡಿಯಾ ಅಂತಿಮವಾಗಿ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿದೆ. 17 ವರ್ಷಗಳ ನಂತರ ಭಾರತ ಮತ್ತೊಮ್ಮೆ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಈ ಗೆಲುವಿನ ನಂತರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಸೇರಿದಂತೆ ಭಾರತೀಯ ಆಟಗಾರರು ಭಾವುಕರಾದರು.

ಇದನ್ನೂ ಓದಿ:ಕೊಹ್ಲಿ ಹಾದಿಯಲ್ಲೇ ರೋಹಿತ್ ಶರ್ಮಾ.. ವಿಶ್ವಕಪ್​ ಗೆಲ್ಲಿಸಿಕೊಟ್ಟ ಬೆನ್ನಲ್ಲೇ ಶಾಕ್ ಕೊಟ್ಟ ಕ್ಯಾಪ್ಟನ್..!

publive-image

ಭಾರತೀಯ ಆಟಗಾರರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಟೀಂ ಇಂಡಿಯಾ ಆಟಗಾರರು ಅಳುತ್ತಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ತುಂಬಾನೇ ಎಮೋಷನಲ್ ಆಗಿ ಕಂಡುಬಂದರು.

publive-image

ಒಂದು ಹಂತದಲ್ಲಿ ಟೀಂ ಇಂಡಿಯಾಗೆ ಸೋಲು ಕಣ್ಮುಂದೆಯೇ ಇತ್ತು. ದಕ್ಷಿಣ ಆಫ್ರಿಕಾಗೆ ಗೆಲ್ಲಲು 30 ಎಸೆತಗಳಲ್ಲಿ 30 ರನ್ ಗಳಿಸಬೇಕಾಗಿತ್ತು. ಕೊನೆಗೆ ಭಾರತೀಯ ಬೌಲರ್ಸ್ ಅದ್ಭುತ ಪ್ರದರ್ಶನ ಮಾಡಿದರು. ಭಾರತದ ಗೆಲುವಿನ ನಂತರ ಇಡೀ ದೇಶದಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಅನೇಕ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಇದನ್ನೂ ಓದಿ:‘ನೀನೇ ನಾಯಕ..’ ಹಾರ್ದಿಕ್ ಪಾಂಡ್ಯರನ್ನು ತಬ್ಬಿ ಮುತ್ತಿಟ್ಟು ಕಣ್ಣೀರು ಇಟ್ಟ ರೋಹಿತ್ ಶರ್ಮಾ

publive-image

ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 176 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ ಪಂದ್ಯವನ್ನು 7 ರನ್‌ಗಳಿಂದ ಗೆದ್ದುಕೊಂಡಿತು.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment