newsfirstkannada.com

T20 ವರ್ಲ್ಡ್​​ಕಪ್; ಕಿಂಗ್ ಕೊಹ್ಲಿ ಬ್ಯಾಟಿಂಗ್​ ಅಂದ್ರೆ ಈ ಬೌಲರ್ಸ್​ಗೆ ಭಯ!

Share :

Published June 5, 2024 at 12:46pm

Update June 5, 2024 at 2:55pm

    ವಿರಾಟ್ ಪಾಲಿಗೆ ಶಾಹೀನ್ ಆಫ್ರಿದಿ ಕೂಡ ಅಪಾಯ ಆಗುತ್ತಾರಾ?

    ಕೊಹ್ಲಿಯ ವಿಕೆಟ್​ ಬೇಟೆಗೆ ಟೊಂಕ ಕಟ್ಟಿ ನಿಂತ ಪಾಕ್ ಬೌಲರ್ಸ್

    ​ಮೋಸ್ಟ್​ ಡೇಂಜರಸ್ ಬೌಲರ್ ಆಗಿರುವ ಮೊಹಮ್ಮದ್ ಅಮಿರ್

ಇಂಡೋ-ಪಾಕ್​ ತಂಡಗಳಲ್ಲಿ ಗೆಲ್ಲೋ ಕುದುರೆ ಯಾವುದು ಅನ್ನೋ ಚರ್ಚೆಗಳೂ ಜೋರಾಗಿವೆ. ಶತಯ ಗತಾಯ ಗೆಲ್ಲೋಕೆ ಪಣ ತೊಟ್ಟಿವೆ. ಆದ್ರೆ, ಇದೆಲ್ಲದರ ನಡುವೆ ಕಿಂಗ್ ಕೊಹ್ಲಿ ವರ್ಸಸ್ ಪಾಕ್ ಬೌಲರ್​​ಗಳ ಬ್ಯಾಟಲ್​ನಿಂದ ಪಂದ್ಯದ ಕಾವು ಮತ್ತಷ್ಟು ಹೆಚ್ಚಾಗಿದೆ.

ಇಂಡೋ-ಪಾಕ್​ ಪಂದ್ಯ ಅಂದ್ರೆ, ಒಂದು ಮಹಾಯುದ್ಧ, ಕ್ರಿಕೆಟ್​​ ದುನಿಯಾದ ಅತಿ ದೊಡ್ಡ ಕಾಳಗ. ಉಭಯ ದೇಶಗಳ ಈ ಪ್ರತಿಷ್ಠೆಯ ಕದನಕ್ಕೆ ಇಡೀ ಜಗತ್ತೇ ಕಾದು ಕುಳಿತಿರುತ್ತೆ.. ಪ್ರತಿಷ್ಠೆಯ ಪಂದ್ಯ ಗೆಲ್ಲಲು ಇನ್ನಿಲ್ಲದ ಕಸರತ್ತೇ ನಡೆಯುತ್ತೆ. ಬ್ಯಾಟ್ ಹಾಗೂ ಬಾಲ್ ನಡುವಿನ ಬ್ಯಾಟಲ್ ಜೊತೆಗೆ ಜಿದ್ದಾಜಿದ್ದಿನ ಹೋರಾಟ ಫ್ಯಾನ್ಸ್​ಗೆ ಭರಪೂರ ಮನರಂಜನೆಯನ್ನೇ ನೀಡುತ್ತೆ. ಅಂಥಹ ರೋಚಕ ಬ್ಯಾಟಲ್​​, ಈ ಬಾರಿಯ ಟಿ20 ವಿಶ್ವಕಪ್​ನಲ್ಲೂ ನಡೆಯಲಿದೆ. ಅದು ಕೂಡ ಕಿಂಗ್ ಕೊಹ್ಲಿ ವರ್ಸಸ್ ಪಾಕ್​​ನ ಪೇಸರ್​ಗಳ ನಡುವೆ ಅನ್ನೋದು ವಿಶೇಷ.

ಇದನ್ನೂ ಓದಿ: ನಂಬಿಕೆ ಉಳಿಸಿಕೊಂಡ ವಿಜಯೇಂದ್ರ.. ಕಾಂಗ್ರೆಸ್​ ಕಟ್ಟಿ ಹಾಕುವಲ್ಲಿ ಯಶಸ್ವಿ ಆಗಿದ್ದು ಹೇಗೆ..?

ಕೊಹ್ಲಿ ಮೇಲೆ ಪಾಕ್ ಪೇಸರ್​​ಗಳ ಕಣ್ಣು..!

ಟಿ20 ವಿಶ್ವಕಪ್​ ಅಖಾಡದಲ್ಲಿ ವಿರಾಟ್​, ವೀರಾವೇಶ ನಡೆಸಲು ಸನ್ನದ್ಧರಾಗಿದ್ದಾರೆ. ಟೀಮ್ ಇಂಡಿಯಾಗೆ ಗೆಲುವಿನ ವಿಜಯದ ಮಾಲೆ ತೊಡಿಸುವ ಲೆಕ್ಕಚಾರದಲ್ಲಿದ್ದಾರೆ. ಆದ್ರೆ, ವಿರಾಟ್​ ವೀರಾವೇಶಕ್ಕೆ ಬ್ರೇಕ್ ಹಾಕಲು ಪಾಕ್ ಪೇಸರ್​ಗಳು ತೊಡೆತಟ್ಟಿ ನಿಂತಿದ್ದಾರೆ. ವಿರಾಟ್​ ರನ್ ಓಟಕ್ಕೆ ಕಡಿವಾಣ ಹಾಕಲು ಶಪಥ ಗೈದಿದ್ದಾರೆ. ಅಂದ್ಹಾಗೆ ಆ ಪೇಸರ್​ಗಳು ಬೇರ್ಯಾರು ಅಲ್ಲ, ಮೊಹಮ್ಮದ್ ಅಮಿರ್ ಆ್ಯಂಡ್ ಶಾಹೀನ್ ಶಾ ಆಫ್ರಿದಿ.

ಟಿ20 ವಿಶ್ವಕಪ್ ಅಂದ್ರೆ, ವೀರ ಸೈನಿಕನಂತೆ ವಿರಾಟ್​ ಹೋರಾಡ್ತಾರೆ. ಟೀಮ್ ಇಂಡಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನೇ ವಹಿಸ್ತಾರೆ. ಪಾಕ್ ಎದುರಿನ ಹೈಪ್ರಷರ್ ಗೇಮ್ ಅಂದ್ರೆ, ಮುಗೀತು ವಿರಾಟ್​ ಆರ್ಭಟ ಮತ್ತಷ್ಟು ಜೋರಾಗಿರುತ್ತೆ. ಇಂಥಹ ವೀರ ಸೇನಾನಿಗೆ ಈಗ ಟಕ್ಕರ್ ನೀಡಲು ಪಾಕ್​​, ಎಡಗೈ ವೇಗಿಗಳಾದ ಮೊಹಮ್ಮದ್ ಅಮಿರ್, ಶಾಹೀನ್ ಶಾ ಆಫ್ರಿದಿ ಮೊರೆ ಹೋಗಿದೆ. ​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

ಶಾಹೀನ್​​​​​-ಅಮಿರ್​​​ಗೆ ವಿರಾಟ್​ ಕೊಹ್ಲಿಯೇ ಟಾರ್ಗೆಟ್​

ವಿರಾಟ್​ ಕೊಹ್ಲಿ ಅಪ್ರತಿಮ ಬ್ಯಾಟರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಇದೇ ಬ್ಯಾಟರ್​ಗೆ ಎಡಗೈ ಬೌಲರ್​​ಗಳ ಎದುರು ಕೊಹ್ಲಿ ಪರದಾಡಿದ್ದೇ ಹೆಚ್ಚು. ಇಂಟ್ರೆಸ್ಟಿಂಗ್ ಅಂದ್ರೆ, 3 ಫಾರ್ಮೆಟ್​ನಿಂದ 102 ಬಾರಿ ಲೆಫ್ಟಿ ಪೇಸರ್​​ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಇದೇ ಕಾರಣಕ್ಕೆ ಎಡಗೈ ಪೇಸರ್​​ಗಳಾದ ಶಾಹೀನ್ ಶಾ, ಮೊಹಮ್ಮದ್​ ಅಮಿರ್, ವಿರಾಟ್ ಕೊಹ್ಲಿಯ ವಿಕೆಟ್​ ಬೇಟೆಗೆ ಟೊಂಕ ಕಟ್ಟಿ ನಿಂತಿದ್ದಾರೆ.

ಮೋಸ್ಟ್​ ಡೇಂಜರಸ್ ಬೌಲರ್ ಆಗಿರುವ ಮೊಹಮ್ಮದ್ ಅಮಿರ್, ಪೇಸ್ ಜೊತೆಗೆ ಸ್ವಿಂಗ್ ಮಾಡುವಲ್ಲೂ ನಿಸ್ಸೀಮ. 145ರ ವೇಗದಲ್ಲಿ ಚೆಂಡನ್ನ ಎಸೆಯೋ ಅಮಿರ್, ಕೊಹ್ಲಿಗೆ ಕಂಟಕವಾದರು ಅಚ್ಚರಿ ಇಲ್ಲ. ಇವ್ರೇ ಅಲ್ಲ, ಪಾಕ್​​ನ ಡೆಡ್ಲಿ ಬೌಲರ್ ಶಾಹೀನ್ ಆಫ್ರಿದಿ ಕೂಡ ವಿರಾಟ್ ಪಾಲಿಗೆ ಅಪಾಯವಾಗಬಲ್ಲರು ಅನ್ನೋದನ್ನ ಮರೆಯುವಂತಿಲ್ಲ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಪ್ರಯಾಣಿಸ್ತಿದ್ದ ಕಾರು ಅಪಘಾತ.. ಕಲಬುರಗಿಯಲ್ಲಿ ಕಾಲುವೆಗೆ ಪಲ್ಟಿ ಹೊಡೆದ ವಾಹನ

ಪಾಕ್ ಎದುರು ಅಬ್ಬರಿಸುವುದೊಂದೇ ಕೊಹ್ಲಿ ಗುರಿ!

ಪಾಕ್​ನ ಶಾಹೀನ್ ಆಫ್ರಿದಿ, ಮೊಹಮ್ಮದ್ ಅಮಿರ್​ ಡೇಂಜರಸ್ ಬೌಲರ್​​ಗಳು ನಿಜ. ಇವರಿಬ್ಬರ ಡೆಡ್ಲಿ ದಾಳಿಗೆ ಸಿಲುಕಿದ್ರೆ, ಎಂಥಹವರೇ ಆಗಲಿ ಪಲ್ಟಿ ಹೊಡೆಯಬೇಕಾಗತ್ತೆ. ಆದ್ರೆ, ವಿರಾಟ್​ ಕೊಹ್ಲಿ ಪಾಲಿಗೆ ಇವರಿಬ್ಬರು ಲೆಕ್ಕಕ್ಕಿಲ್ಲ. ಇನ್​ಫ್ಯಾಕ್ಟ್​_ ಐಪಿಎಲ್​ನಲ್ಲಿ ಅಬ್ಬರಿಸಿ ಬೊಬ್ಬೆರೆದಿರುವ ವಿರಾಟ್, ಇವರಿಬ್ಬರ ಮೇಲೆ ದಂಡಯಾತ್ರೆ ನಡೆಸೋದು ಪಕ್ಕಾ.

ವಿರಾಟ್​ ವೀರಾವೇಶಕ್ಕೆ ಕಡಿವಾಣ ಹಾಕಲು ಎಡಗೈ ಮಿಸೈಲ್​​​ಗಳನ್ನ ಪಾಕ್, ತನ್ನ ಬತ್ತಳಿಕೆಯಲ್ಲಿಟ್ಟುಕೊಂಡಿದೆ. ಆದ್ರೆ, ಕೊಹ್ಲಿಯ ವಿಶ್ವರೂಪದ ಮುಂದೆ ಶಾಹೀನ್ ಆಫ್ರಿದಿ, ಮೊಹಮ್ಮದ್ ಅಮಿರ್​ ಆಟ ನಡೆಯೋದು ಸುಲಭದ್ದಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 ವರ್ಲ್ಡ್​​ಕಪ್; ಕಿಂಗ್ ಕೊಹ್ಲಿ ಬ್ಯಾಟಿಂಗ್​ ಅಂದ್ರೆ ಈ ಬೌಲರ್ಸ್​ಗೆ ಭಯ!

https://newsfirstlive.com/wp-content/uploads/2024/06/VIRAT_KOHLI_NEW_STYLE.jpg

Load More