/newsfirstlive-kannada/media/post_attachments/wp-content/uploads/2024/06/TEAM_INDIA.jpg)
ಯುಎಸ್ಎ ಎದುರಿನ ಭರ್ಜರಿ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಮತ್ತೊಂದು ಗುಡ್ನ್ಯೂಸ್ ಸಿಕ್ಕಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರೋ ರೋಹಿತ್ ಪಡೆ, ಸೂಪರ್- 8ಗೆ ಎಂಟ್ರಿ ಕೊಟ್ಟಿದೆ. ಅಮೇರಿಕದ ಬಳಿಕ ವೆಸ್ಟ್ ಇಂಡೀಸ್ನಲ್ಲೂ ಗೆಲುವಿನ ಪತಾಕೆ ಹಾರಿಸಲು ಸಜ್ಜಾಗಿದೆ. ಕೋಚ್-ಕ್ಯಾಪ್ಟನ್ ಅಂದುಕೊಂಡಂತೆ ಎಲ್ಲ ಆದ್ರಂತೂ ಕಪ್ ನಮ್ದೇ. ಅದ್ರಲ್ಲಿ ಡೌಟೇ ಬೇಡ. ಅಷ್ಟಕ್ಕೂ ಸಿಕ್ಕಿರೋ ಗುಡ್ನ್ಯೂಸ್ ಏನು?. ದ್ರಾವಿಡ್-ರೋಹಿತ್ ಅಂದುಕೊಂಡಿದ್ದೇನು?.
T20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಜಯದ ಯಾತ್ರೆ ಮುಂದುವರೆದಿದೆ. ಹ್ಯಾಟ್ರಿಕ್ ಗೆಲುವು ದಾಖಲಿಸಿರೋ ಟೀಮ್ ಇಂಡಿಯಾ ಸೂಪರ್- 8 ಹಂತಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಭರ್ಜರಿ ಗೆಲುವುಗಳು ತಂಡದ ಆತ್ಮವಿಶ್ವಾಸವನ್ನ ಹೆಚ್ಚಿಸಿದ್ದು, ಕಪ್ ಗೆದ್ದೇ ತೀರಲು ಟೀಮ್ ಇಂಡಿಯಾ ಪಣ ತೊಟ್ಟಿದೆ.
ಇದನ್ನೂ ಓದಿ: IPLನಲ್ಲಿ ಆರ್ಭಟಿಸಿದ್ದ ವಿರಾಟ್ ವಿಶ್ವಕಪ್ನಲ್ಲಿ ಸೈಲೆಂಟ್.. ಕೊಹ್ಲಿರನ್ನ ಬೆಂಚ್ ಕಾಯಿಸ್ತಾರಾ ಕ್ಯಾಪ್ಟನ್ ರೋಹಿತ್?
ಕೆರಬಿಯನ್ ನಾಡಿಗೆ ಕಾಲಿಡೋ ಮೊದಲೇ ಬಂಪರ್.!
ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಟೂರ್ನಿಯ ಮೊದಲ 3 ಪಂದ್ಯಗಳನ್ನ ಆಡಿದ ಟೀಮ್ ಇಂಡಿಯಾ ಈ ಮೂರೂ ಪಂದ್ಯಗಳನ್ನ ಗೆದ್ದು ಬೀಗಿದೆ. ಇನ್ನೊಂದು ಪಂದ್ಯವನ್ನಾಡಿ ವಿಂಡೀಸ್ ನಾಡಿಗೆ ಕಾಲಿಡಲಿದೆ. ಸೂಪರ್- 8 ಪಂದ್ಯಗಳು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿದ್ದು, ಅಮೆರಿಕಗೆ ಗುಡ್ ಬೈ ಹೇಳಿ ಫುಲ್ ಜೋಷ್ನಲ್ಲಿ ವಿಂಡೀಸ್ಗೆ ಹಾಯ್ ಎನ್ನಲು ರೋಹಿತ್ ಪಡೆ ಸಜ್ಜಾಗಿದೆ. ಅದಕ್ಕೂ ಮೊದಲೇ ಭಾರತ ತಂಡಕ್ಕೆ ಗುಡ್ ನ್ಯೂಸ್ ಸಿಕ್ಕಿದೆ.
ಸ್ಪೆಷಲ್ ಅಸ್ತ್ರ ಪ್ರಯೋಗಕ್ಕೆ ದ್ರಾವಿಡ್-ರೋಹಿತ್ ರೆಡಿ.!
ನ್ಯೂಯಾರ್ಕ್ನ ಅನ್ಪ್ರಿಡಿಕ್ಟಬಲ್ ಕೌಂಟಿ ಪಿಚ್ನಲ್ಲೇ ಗೆಲುವಿನ ಪತಾಕೆ ಹಾರಿಸಿದ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ನಲ್ಲಿ ಧೂಳೆಬ್ಬಿಸೋದು ಕನ್ಫರ್ಮ್. ಕೆರಬಿಯನ್ ನಾಡಲ್ಲಿ ಸ್ಪೆಷಲ್ ಅಸ್ತ್ರದ ದಾಳ ಉರುಳಿಸಲು ಕೋಚ್ ರಾಹುಲ್ ದ್ರಾವಿಡ್ -ರೋಹಿತ್ ಶರ್ಮಾ ರೆಡಿಯಾಗಿದ್ದಾರೆ. ವಿಶ್ವಕಪ್ಗೆ ಟೀಮ್ ಸೆಲೆಕ್ಷನ್ ಆದಾಗಲೇ ರೋಹಿತ್ ಶರ್ಮಾ ಒಂದು ಮಾತು ಹೇಳಿದ್ರು. ಸ್ಪಿನ್ನರ್ಗಳ ಆಯ್ಕೆ ಬಗ್ಗೆ ಕೇಳಿದ ಪ್ರಶ್ನೆಗೆ ವೆಸ್ಟ್ ಇಂಡೀಸ್ನಲ್ಲಿ ಉತ್ತರ ಕೊಡ್ತೀನಿ ಅಂತಾ. ಇದೀಗ ಆ ಪ್ರಶ್ನೆಗೆ ಉತ್ತರ ಸಿಗೋ ಸಮಯ ಬಂದಿದೆ.
ಕೆರಬಿಯನ್ ನಾಡಲ್ಲಿ ಸ್ಪಿನ್ನರ್ಗಳ ದರ್ಬಾರ್.!
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಕೆರಬಿಯನ್ ನಾಡಲ್ಲಿ ಸ್ಪಿನ್ನರ್ಗಳ ದರ್ಬಾರ್ ಜೋರಾಗಿದೆ. ಆಡಿದ ಪಂದ್ಯಗಳಲ್ಲಿ ವರ್ಲ್ಡ್ ಕ್ಲಾಸ್ ಸ್ಪಿನ್ನರ್ಗಳು ಬ್ಯಾಟ್ಸ್ಮನ್ಗಳನ್ನ ಸಿಕ್ಕಾಪಟ್ಟೆ ಕಾಡಿದ್ದಾರೆ. ಸ್ಪಿನ್ ಮ್ಯಾಜಿಕ್ನ ಮುಂದೆ ಬ್ಯಾಟ್ಸ್ಮನ್ಗಳು ತಡಬಡಾಯಿಸಿದ್ದು, ಸುಲಭಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಆಸ್ಟ್ರೇಲಿಯಾದ ಆ್ಯಂಡಂ ಝಂಪಾ, ವೆಸ್ಟ್ ಇಂಡೀಸ್ನ ಅಕೇಲ್ ಹೂಸೈನ್, ಅಫ್ಘಾನಿಸ್ತಾನದ ರಶೀದ್ ಖಾನ್ ಧೂಳೆಬ್ಬಿಸಿದ್ದಾರೆ.
T20 ವಿಶ್ವಕಪ್ -ವಿಂಡೀಸ್ನಲ್ಲಿ ಸ್ಪಿನ್ನರ್ಸ್
ಈ ಬಾರಿಯ ವಿಶ್ವಕಪ್ನಲ್ಲಿ, ವಿಂಡೀಸ್ ನೆಲದಲ್ಲಿ ಆಡಿದ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಆ್ಯಡಂ ಜಂಪಾ 3 ಪಂದ್ಯದಿಂದ ಬರೋಬ್ಬರಿ 8 ವಿಕೆಟ್ ಕಬಳಿಸಿದ್ದಾರೆ. ವಿಂಡೀಸ್ನ ಅಕೇಲ್ ಹೂಸೈನ್ ಹಾಗೂ ಅಫ್ಫಾನಿಸ್ತಾನದ ರಶೀದ್ ಖಾನ್ ತಲಾ 2 ಪಂದ್ಯವಾಡಿ ತಲಾ 6 ವಿಕೆಟ್ಗಳನ್ನ ಉರುಳಿಸಿದ್ದಾರೆ.
ಇದನ್ನೂ ಓದಿ: ಅಪಾರ್ಟ್ಮೆಂಟ್ನಲ್ಲಿ ಭೀಕರ ಅಗ್ನಿ.. ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಭಾರತೀಯರು ಸಜೀವ ದಹನ
ಟೀಮ್ ಇಂಡಿಯಾ ವರ್ಲ್ಡ್ ಕ್ಲಾಸ್ ಸ್ಪಿನ್ನರ್ಗಳ ಬಲ.!
ವಿಂಡೀಸ್ ನಾಡಿಗೆ ಕಾಲಿಡಲು ಸಜ್ಜಾಗಿರೋ ಟೀಮ್ ಇಂಡಿಯಾಗೂ ವಿಶ್ವ ಶ್ರೇಷ್ಟ ಸ್ಪಿನ್ನರ್ಗಳ ಬಲವಿದೆ. ಆಲ್ರೌಂಡರ್ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಈಗಾಗಲೇ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದು ಮೋಡಿ ಮಾಡಿದ್ದಾರೆ. ಇದೀಗ ಇಷ್ಟು ದಿನ ಬೆಂಚ್ ಕಾದ ಸ್ಪೆಷಲಿಸ್ಟ್ ಸ್ಪಿನ್ನರ್ಗಳಾದ ಕುಲ್ದೀಪ್ ಯಾದವ್, ಯುಜುವೇಂದ್ರ ಚಹಲ್ ಕಣಕ್ಕಿಳಿಯಲು ಕೌಂಟ್ಡೌನ್ ಶುರುವಾಗಿದೆ. ಇವ್ರ ಅನುಭವ ಪ್ಲಸ್ ಟ್ಯಾಲೆಂಟ್ ತಂಡದ ಕೈ ಹಿಡಿಯೋದ್ರಲ್ಲಿ ಅನುಮಾನವೇ ಬೇಡ.
ವಿಂಡೀಸ್ನಲ್ಲಿ ಸ್ಪಿನ್ ದರ್ಬಾರ್
ವೆಸ್ಟ್ ಇಂಡೀಸ್ನಲ್ಲಿ ಈವರೆಗೆ 3 ಪಂದ್ಯಗಳನ್ನಾಡಿರುವ ಕುಲ್ದೀಪ್ ಯಾದವ್ 12 ಓವರ್ ಬೌಲಿಂಗ್ ಮಾಡಿ 5 ವಿಕೆಟ್ ಕಬಳಿಸಿದ್ದಾರೆ. 3 ಪಂದ್ಯದಿಂದ 10 ಓವರ್ ಬೌಲಿಂಗ್ ಮಾಡಿ ಯುಜುವೇಂದ್ರ ಚಹಲ್ 4 ವಿಕೆಟ್ ಬೇಟೆಯಾಡಿದ್ದಾರೆ. ಹ್ಯಾಟ್ರಿಕ್ ಗೆಲುವಿನೊಂದಿಗೆ ಜಯದ ಅಲೆಯಲ್ಲಿರೋ ಟೀಮ್ ಇಂಡಿಯಾಗೆ ವಿಂಡೀಸ್ ನೆಲಕ್ಕೆ ಕಾಲಿಡೋ ಮೊದಲೇ ಗುಡ್ನ್ಯೂಸ್ ಸಿಕ್ಕಿದೆ. ಸ್ಪಿನ್ ಅಸ್ತ್ರದ ಸಕ್ಸಸ್ ಟೀಮ್ ಮ್ಯಾನೇಜ್ಮೆಂಟ್ನ ಕಾನ್ಫಿಡೆನ್ಸ್ ಕೂಡ ಹೆಚ್ಚಿಸಿದೆ. ಕೆರಬಿಯನ್ ನಾಡಲ್ಲಿ ಉಳಿದ ತಂಡಗಳಂತೆ ನಮ್ಮ ತಂಡದ ಸ್ಪಿನ್ನರ್ಗಳೂ ಕೂಡ ಮೋಡಿ ಮಾಡಿದ್ದೇ ಆದ್ರೆ, ಟ್ರೋಫಿ ಗೆದ್ದು ಚಾಂಪಿಯನ್ ಆಗೋದು ಕಷ್ಟದ ವಿಚಾರವೇನಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ