newsfirstkannada.com

ತಲಘಟ್ಟಪುರ ಹಿಟ್ ಅಂಡ್ ರನ್​ ಕೇಸ್​​ಗೆ ಭಯಾನಕ ಟ್ವಿಸ್ಟ್​; ಕಾರಲ್ಲಿ ಎಣ್ಣೆ ಪಾರ್ಟಿ, ಆಮೇಲೆ ನಡೆದಿದ್ದೇ ಬೇರೆ..!

Share :

Published March 26, 2024 at 8:42am

    ಗೆಳೆಯನ ಕೊಲೆ ಕಣ್ಣಾರೆ ಕಂಡ ಸ್ನೇಹಿತ ಆತ್ಮಹತ್ಯೆಗೆ ಯತ್ನಿಸಿದ

    ಕಾರಣವಿಲ್ಲದೇ ಸಾಯಲು ಮುಂದಾದವನ ಕಂಡು ಕುಟುಂಬಸ್ಥರು ಶಾಕ್

    ಘಟನೆ ನಡೆದು ಎರಡೇ ದಿನಕ್ಕೇ ರೋಚಕವಾಗಿ ಕೇಸ್ ಬೇಧಿಸಿದ ಪೊಲೀಸರು

ಬೆಂಗಳೂರು: ತಲಘಟ್ಟಪುರ ಹಿಟ್ ಅಂಡ್ ರನ್ ಪ್ರಕರಣವು​ ಹೊಸ ತಿರುವು ಪಡೆದುಕೊಂಡಿದೆ. ಘಟನೆ ನಡೆದು ಎರಡೇ ದಿನದಲ್ಲಿ ಪೊಲೀಸರು ಪ್ರಕರಣವನ್ನು ಬೇಧಿಸಿದ್ದು, ಮೊದಲು ‘ಹಿಟ್ ಅಂಡ್ ರನ್’ ಅಂದುಕೊಂಡಿದ್ದ ಪೊಲೀಸರಿಗೆ ಇದೀಗ ಕೊಲೆ ಎಂಬುವುದು ಗೊತ್ತಾಗಿದೆ.

ಪ್ರಕರಣ ಶುರುವಾಗಿದ್ದು ಹೇಗೆ?

ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಬಿದ್ದಿತ್ತು. ಆರಂಭದಲ್ಲಿ ಮೃತ ವ್ಯಕ್ತಿಯ ಗುರುತು ಪತ್ತೆ ಆಗಿರಲಿಲ್ಲ. ಯಾವುದೋ ವಾಹನ ಗುದ್ದಿ ಪರಾರಿ ಆಗಿದೆ ಅಂತಾ ಪೊಲೀಸರು ತಿಳಿದುಕೊಂಡಿದ್ದರು. ಅನುಮಾನದ ಮೇಲೆ ತನಿಖೆ ಶುರು ಮಾಡಿದ ಪೊಲೀಸರು, ಹಿಟ್​ ಅಂಡ್​ ರನ್ ಕೇಸ್​ ದಾಖಲಿಸಿಕೊಂಡಿದ್ದರು. ನಂತರ ರಸ್ತೆಯ ಸಿಸಿಟಿವಿ ದೃಶ್ಯಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಈ ವೇಳೆ ಅಸಲಿ ಸತ್ಯ ಬಯಲಾಗಿದೆ.

ಅಸಲಿ ಕಥೆ ಏನು?

ನಡು ರಸ್ತೆಯಲ್ಲಿ ಹೆಣವಾಗಿ ಬಿದ್ದಿದ್ದ ವ್ಯಕ್ತಿ, ಕೊಂಚ ದೂರದಲ್ಲೇ ಒಂದು ಕಾರಿನಿಂದ ಇಳಿದಿದ್ದ. ಆತನ ಜೊತೆ ಇನ್ನೊಬ್ಬ ಕೂಡ ಇಳಿದಿದ್ದ. ಕೊನೆಗೆ ಕೊಲೆಯಾದ ವ್ಯಕ್ತಿ ಇಳಿದಿದ್ದ ಕಾರಿನಿಂದಲೇ ಗುದ್ದಿ ಕೊಲೆ ಮಾಡಿರೋದು ತನಿಖೆಯಿಂದ ಗೊತ್ತಾಗಿದೆ.

ನಡೆದಿರೋ ಘಟನೆ ಏನು..?

ಕೋಣನಕುಂಟೆಯ ಹರಿನಗರ ನಿವಾಸಿ ಗೋಪಿ (55) ಮೃತ ವ್ಯಕ್ತಿ ಎಂದು ತನಿಖೆಯಿಂದ ತಿಳಿದುಬಂದಿದೆ. ಗೋಪಿ ತನ್ನ ಗೆಳೆಯ ಉಮಾಪತಿ ಜೊತೆ ಎಣ್ಣೆ ಕುಡಿಯಲು ಬಾರ್​​ಗೆ ಹೋಗಿದ್ದ. ಈ ವೇಳೆ ಸ್ಥಳೀಯ ನಿವಾಸಿ ಮುನಿಕೃಷ್ಣ ಎಂಬಾತ ಕೂಡ ಸೇರಿಕೊಳ್ಳುತ್ತಾನೆ. ಮೂವರು ರಾತ್ರಿ ಬಾರ್​ಗೆ ಹೋಗಿ ಮದ್ಯ ತೆಗೆದುಕೊಂಡು ಬರುತ್ತಾರೆ.

ಇದನ್ನೂ ಓದಿ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಟಿಪ್ಪರ್.. ಬೈಕ್​​ ಸವಾರ ಸಾವು, ಮತ್ತೋರ್ವ ಗಂಭೀರ

ನಂತರ ಮೂವರು ಮುನಿಕೃಷ್ಣನ ಕಾರಿನಲ್ಲಿ ಹೊರಡುತ್ತಾರೆ. ಸ್ವಲ್ಪ ದೂರ ಬರುತ್ತಿದ್ದಂತೆಯೇ ಮುನಿಕೃಷ್ಣನ ಕಾರಿನಲ್ಲಿ ಎಣ್ಣೆ ಕುಡಿಯಲು ಶುರುಮಾಡಿದ್ದಾರೆ. ನಶೆ ಏರಿದ ನಂತರ ಮುನಿಕೃಷ್ಣನಿಗೆ ಬಾಯಿಗೆ ಬಂದಂತೆ ಗೋಪಿ ಮಾತನಾಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಕೋಪಿಸಿಕೊಂಡ ಮುನಿಕೃಷ್ಣ ಕಾರ್​ನಿಂದ ಇಳಿಯುವಂತೆ ಹೇಳಿದ್ದ. ಕಾರ್​ನಿಂದ ಇಳಿದ ಗೋಪಿ, ಮುನಿಕೃಷ್ಣಗೆ ಚಪ್ಪಲಿ ಎಸೆದಿದ್ದ. ಕೋಪಗೊಂಡ ಮುನಿಕೃಷ್ಣ, ಆತನ ಸ್ನೇಹಿತ ಉಮಾಪತಿಯನ್ನೂ ಇಳಿಸಿ ಹೊರಟಿದ್ದ.

ನಂತರ ಅದೇ ಕೋಪದಲ್ಲಿ ಮುನಿಕೃಷ್ಣ ತನ್ನ ಕಾರನ್ನು ಯೂಟರ್ನ್ ಮಾಡಿಕೊಂಡು ಬಂದು, ನಡು ರಸ್ತೆಯಲ್ಲಿ ಹೋಗ್ತಿದ್ದ ಗುಪಿಗೆ ಡಿಕ್ಕಿ ಹೊಡೆಸಿದ್ದಾನೆ. ಮುನಿಕೃಷ್ಣ ಗೋಪಿ ಮೇಲೆ ಕಾರು ಹತ್ತಿಸಿ ಪರಾರಿ ಆಗುತ್ತಿದ್ದಂತೆ ಗೆಳೆಯ ಉಮಾಪತಿ ಊರು ಬಿಟ್ಟಿದ್ದ.

ಆತ್ಮಹತ್ಯೆಗೆ ಯತ್ನಿಸಿದ ಸ್ನೇಹಿತ

ಗೆಳೆಯನ ಕೊಲೆಯನ್ನು ಕಣ್ಣಾರೆ ನೋಡುತ್ತಿದ್ದಂತೆಯೇ ಉಮಾಪತಿ ಗಾಬರಿಯಾಗಿದ್ದಾನೆ. ಅಲ್ಲಿಂದ ನೇರವಾಗಿ ಮಾಲೂರಿಗೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವಿಚಾರ ಸಂಬಂಧಿಕರಿಗೆ ಗೊತ್ತಾಗ್ತಿದ್ದಂತೆಯೇ, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಉಮಾಪತಿ ಕಾರಣವಿಲ್ಲದೇ ಆತ್ಮಹತ್ಯೆಗೆ ಯತ್ನಿಸಿರೋದನ್ನ ಕಂಡು ಕುಟುಂಬಸ್ಥರು ಗೊಂದಲಕ್ಕೆ ಒಳಗಾಗಿದ್ದಾರೆ. ಪೊಲೀಸರ ಮುಲಕ ಉಮಾಪತಿ ಕುಟುಂಬಕ್ಕೆ ಅಸಲಿ ವಿಚಾರ ಗೊತ್ತಾಗಿದೆ. ಸದ್ಯ ಕೊಲೆ ಆರೋಪಿ ಮುನಿಕೃಷ್ಣನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಲಘಟ್ಟಪುರ ಹಿಟ್ ಅಂಡ್ ರನ್​ ಕೇಸ್​​ಗೆ ಭಯಾನಕ ಟ್ವಿಸ್ಟ್​; ಕಾರಲ್ಲಿ ಎಣ್ಣೆ ಪಾರ್ಟಿ, ಆಮೇಲೆ ನಡೆದಿದ್ದೇ ಬೇರೆ..!

https://newsfirstlive.com/wp-content/uploads/2024/03/BNG-ACCIDENT.jpg

Load More