ಆ್ಯಕ್ಸಿಡೆಂಟ್‌ ಆಗಿದ್ರೂ ಡೋಂಟ್ ಕೇರ್.. ಕಾರು ರೇಸ್​​​ನಲ್ಲಿ ಛಲ ಬಿಡದೇ ಬಹುಮಾನ ಗೆದ್ದ ನಟ ಅಜಿತ್..!

author-image
Ganesh
Updated On
ಆ್ಯಕ್ಸಿಡೆಂಟ್‌ ಆಗಿದ್ರೂ ಡೋಂಟ್ ಕೇರ್.. ಕಾರು ರೇಸ್​​​ನಲ್ಲಿ ಛಲ ಬಿಡದೇ ಬಹುಮಾನ ಗೆದ್ದ ನಟ ಅಜಿತ್..!
Advertisment
  • ದುಬೈ ಕಾರ್ ರೇಸ್‌ನಲ್ಲಿ ನಟ ಅಜಿತ್ ತಂಡಕ್ಕೆ 3ನೇ ಸ್ಥಾನ
  • ಬ್ರೇಕ್ ಫೇಲ್ ಆಗಿತ್ತು.. ಪ್ರಾಕ್ಟೀಸ್ ವೇಳೆ ಆಕ್ಸಿಡೆಂಟ್ ಆಯ್ತು..
  • ನಟ ಅಜಿತ್ ಸಾಧನೆ ಕಂಡು ಅಭಿಮಾನಿಗಳಿಂದ ಸಂಭ್ರಮ

ಸಾಮಾನ್ಯವಾಗಿ ಸ್ಟಾರ್ ನಟರು ಸಿನಿಮಾ ಜರ್ನಿಯ ಜೊತೆಗೆ ರಾಜಕೀಯದತ್ತ ಮುಖ ಮಾಡ್ತಾರೆ. ಇಲ್ಲವಾದ್ರೆ ಚಿತ್ರ ನಿರ್ದೇಶನ, ನಿರ್ಮಾಣದ ಚಿಂತನೆಯಲ್ಲಿ ಮುಳುಗ್ತಾರೆ. ಆದ್ರೆ ತಮಿಳು ನಟ ಅಜಿತ್ ಕುಮಾರ್​ ಕಂಡ ಕನಸು ಮಾತ್ರ ಬಲು ದೊಡ್ಡದು. ಸ್ಟಾರ್ ನಟ ಅಜಿತ್ ಕುಮಾರ್​ ದುಬೈನಲ್ಲಿ ನಡೆದ ಕಾರ್ ರೇಸ್​ನಲ್ಲಿ ಗೆದ್ದು ಸಂಭ್ರಮದಲ್ಲಿದ್ದಾರೆ.

ಆ್ಯಕ್ಸಿಡೆಂಟ್‌ ಆಗಿದ್ರೂ ಡೋಂಟ್ ಕೇರ್, ರೇಸ್‌ನಲ್ಲಿ ಅಬ್ಬರ

ಬೈ ಬರ್ತ್​ ಹಿ ಇಸ್​ ಮಾಡೆಲ್.. ಬೈ ಚಾಯ್ಸ್​ ಹಿ ಈಸ್​ ಌಕ್ಟರ್.. ಬೈ ಪ್ಯಾಶನ್​ ಹಿ ಈಸ್​ ರೇಸರ್​.. ಮೊದಲು ಕನಸನ್ನ ಕಾಣು... ನೀನು ಕಂಡ ಕನಸಿಗಾಗಿ ಏನಾದರೂ ಮಾಡು.. ಗೆಲುವು ನಿನ್ನ ಹಾದಿಗೆ ತಾನಾಗೆ ಬರುತ್ತೆ.. ಇದಕ್ಕೆ ಬೆಸ್ಟ್​ ಉದಾಹರಣೆ ತಮಿಳು ನಟನ ಈ ಅದ್ಭುತ ಸಾಧನೆ.
ಬ್ರೇಕ್ ಫೇಲ್ ಆಗಿತ್ತು.. ಪ್ರಾಕ್ಟೀಸ್ ವೇಳೆ ಆಕ್ಸಿಡೆಂಟ್ ಆಯ್ತು.. ಕೂದಳೆಲೆ ಅಂತರದಲ್ಲಿ ಬಚಾವ್​ ಆಗಿ ಬದುಕುಳಿದಿದ್ರು. ಅದೃಷ್ಟವಶಾತ್ ಅಜಿತ್‌ಗೆ ಏನೂ ಆಗಲಿಲ್ಲ. ಈ ರೇಸ್​ ಮುಖ್ಯ ಅಂತ 9 ತಿಂಗಳು ಸಿನಿಮಾದಲ್ಲಿ ನಟಿಸಲ್ಲ. ಇಷ್ಟೆಲ್ಲಾ ತ್ಯಾಗದ ಫಲ ಅಜಿತ್​ಗೆ ಕೊನೆಗೂ ಸಿಕ್ಕಿದೆ.

ಇದನ್ನೂ ಓದಿ: ತಮಿಳು ನಟ ಅಜಿತ್​​ ಮನೆಗೆ ಮತ್ತೊಂದು ದುಬಾರಿ ಕಾರ್​ ಎಂಟ್ರಿ; ಇದರ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ!

publive-image

ದುಬೈ 24ಹವರ್ಸ್​ ಕಾರ್ ರೇಸ್​​ನ 911 ಜಿಟಿ3R ವಿಭಾಗದಲ್ಲಿ ತಮಿಳು ನಟ ಅಜಿತ್ ಕುಮಾರ್ ರೇಸಿಂಗ್ ತಂಡ 3ನೇ ಸ್ಥಾನ ಗಿಟ್ಟಿಸಿಕೊಂಡಿದೆ. 24H ಸರಣಿ ರೇಸ್ ಅಂದ್ರೆ ನಿರಂತರವಾಗಿ 24 ಗಂಟೆಗಳ ಕಾಲ ಕಾರನ್ನ ಓಡಿಸಬೇಕು. ಒಂದು ತಂಡವು 3 ರಿಂದ 4 ಚಾಲಕರನ್ನ ಒಳಗೊಂಡಿರುತ್ತೆ. ತಲಾ 6 ಗಂಟೆಯಂತೆ 24 ಗಂಟೆಗಳ ಕಾಲ ವಾಹನ ಚಲಾಯಿಸಬೇಕು. ಇದೀಗ ಈ ರೇಸ್​ನಲ್ಲಿ ಅಜಿತ್ ಕುಮಾರ್ ತಂಡ ಮೂರನೇ ಸ್ಥಾನ ಪಡೆದಿದೆ.

ರೇಸ್​ನಲ್ಲಿ ಭಾಗಿಯಾಗೋದಕ್ಕೂ ಮುಂಚೆ ಪತ್ನಿ ಶಾಲಿನಿ.. ಮಗಳು ಅನೌಷ್ಕ ಜೊತೆ ಕೆಲ ಹೊತ್ತು ಮನಸ್ಸು ಬಿಚ್ಚಿ ಮಾತನಾಡಿದ್ರು.. ಬಳಿಕ ರೇಸ್​ನಲ್ಲಿ ಪಾಲ್ಗೊಂಡು 991 ಕೆಟಗರಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ರು.. ಜಿಟಿ4 ಕೆಟಗರಿಯಲ್ಲಿ ಸ್ಪಿರಿಟ್ ಆಫ್ ದಿ ರೇಸ್ ಪ್ರಶಸ್ತಿ ಪಡೆದ ವೇಳೆ ಪತ್ನಿ ಶಾಲಿನಿಗೆ ಅಜಿತ್ ಮುತ್ತು ಕೊಟ್ಟರು. ಅಜಿತ್​ ಗೆಲುವನ್ನ ನಟ ಮಾಧವನ್​ ಕೂಡ ಜೊತೆ ಸೇರಿ ಸಂಭ್ರಮಿಸಿದ್ರು.

ಇದನ್ನೂ ಓದಿ: ಇಂದು 1 ಲೀಟರ್​​ ಪೆಟ್ರೋಲ್​​, ಡೀಸೆಲ್​​ ಬೆಲೆ ಎಷ್ಟು ಗೊತ್ತಾ? ವಾಹನ ಸವಾರರು ಓದಲೇಬೇಕಾದ ಸ್ಟೋರಿ!

publive-image

ಈ ಕಾರ್​ ರೇಸ್​ನಲ್ಲಿ ನಟ ಅಜಿತ್ ಸಾಧನೆ ಕಂಡು ಅಭಿಮಾನಿಗಳು ಕೂಡ ಸಂಭ್ರಮಿಸಿದ್ದಾರೆ. ಅಜಿತ್ ಕುಮಾರ್​​ ಕೂಡ ಭಾರತ ಬಾವುಟ ಹಿಡಿದು ಮನಗ ಜೊತೆ ಮಾಡಿದ ಅಬ್ಬರಕ್ಕೆ ಪಾರವೇ ಇರಲಿಲ್ಲ. ಅದೇನೆ ಇರಲಿ ಕಂಡ ಕನಸಿಗಾಗಿ ಶ್ರಮಿಸಿದ್ರೆ ಗೆಲುವು ಕಾದಿರುತ್ತೆ ಅನ್ನೋದು ಮತ್ತೆ ಪ್ರೂವ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment