newsfirstkannada.com

ಪಬ್​ನಲ್ಲಿ ಭಾರೀ ಅನಾಹುತ; ಮೇಲ್ಛಾವಣಿ ಕುಸಿದು ಮೂವರು ಕಾರ್ಮಿಕರು ಸಾವು

Share :

Published March 29, 2024 at 8:13am

  ಎಂದಿನಂತೆ ಕೆಲಸ ಮಾಡಲು ಪಬ್​ಗೆ ಬಂದಿದ್ದ ಮೂವರು ಸಿಬ್ಬಂದಿ

  ಪಬ್​ನಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕುಸಿದು ಬಿತ್ತು ಮೇಲ್ಛಾವಣಿ

  ಸ್ಥಳಕ್ಕೆ ಆಗಮಿಸಿ ಮೂರು ಮೃತದೇಹಗಳನ್ನ ಹೊರತೆಗೆದ ಪೊಲೀಸರು

ಚೆನ್ನೈ: ಪಬ್​ವೊಂದನ್ನು ನವೀಕರಣ ಮಾಡುತ್ತಿದ್ದಾಗ ಕಟ್ಟಡದ ಮೊದಲ ಮಹಡಿಯ ಕಾಂಕ್ರೀಟ್ ಸೀಲಿಂಗ್ ಕುಸಿದು ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಚೆನ್ನೈನ ಅಲ್ವಾರ್‌ಪೇಟ್​​ನಲ್ಲಿ ನಡೆದಿದೆ.

ಮ್ಯಾಕ್ಸ್ (22)​, ಲಾಲಿ (24) ಹಾಗೂ ಸೈಕ್ಲೋನ್ ರಾಜ್ (48) ಮೃತಪಟ್ಟವರು. ಚೆನ್ನೈನ ಅಲ್ವಾರ್‌ಪೇಟ್ ಪ್ರದೇಶದ ಚೇಮಿಯರ್ಸ್ ರಸ್ತೆಯಲ್ಲಿರುವ ಸೆಖ್‌ಮೆಟ್ ಕ್ಲಬ್‌ನಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದ ಮೂವರು ಅದೇ ಕ್ಲಬ್​ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯಾಗಿದ್ದಾರೆ.

ಇಬ್ಬರು ಕಾರ್ಮಿಕರು ಮಣಿಪುರದವರು ಮತ್ತೊಬ್ಬ ಚೆನ್ನೈ ಮೂಲದವನು ಎನ್ನಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದು ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಇದನ್ನೂ ಓದಿ: ಯುಗಾದಿ ಹೊಸತಡಕುಗಾಗಿ ಚೀಟಿ ಹಾಕಿದ್ದವ್ರಿಗೆ ಮಕ್ಮಲ್​ ಟೋಪಿ.. ಮಾಂಸದ ಆಸೆಗೆ ಕೋಟಿ, ಕೋಟಿ ಕಳ್ಕೊಂಡ ಜನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಬ್​ನಲ್ಲಿ ಭಾರೀ ಅನಾಹುತ; ಮೇಲ್ಛಾವಣಿ ಕುಸಿದು ಮೂವರು ಕಾರ್ಮಿಕರು ಸಾವು

https://newsfirstlive.com/wp-content/uploads/2024/03/TN_3_DIED.jpg

Load More