ಕೋಟಿ ಕೋಟಿ ರೂ.ಗಳಲ್ಲಿ ಮುರುಗನ್ ದೇವಾಲಯಗಳ ಅಭಿವೃದ್ಧಿ
ರಾಮನ ಉತ್ಸವ, ರ್ಯಾಲಿ ಬದಲಿಗೆ ಭಗವಾನ್ ಮುರುಗನ್ ಸಮ್ಮೇಳನ
ಮುತಮಿಜ್ ಮುರುಗನ್ ಸಮ್ಮೇಳನದಲ್ಲಿ ಪಾಲ್ಗೊಂಡ ಸಾಕಷ್ಟು ಜನ
ಚೆನ್ನೈ: ರಾಮನ ಉತ್ಸವ, ರ್ಯಾಲಿಗಳ ಬದಲಿಗೆ ತಮಿಳು ಸಂಸ್ಕೃತಿ, ಸಾಹಿತ್ಯ, ಆಧ್ಯಾತ್ಮಿಕತೆಯನ್ನು ಎತ್ತಿ ಹಿಡಿಯಲು ತಮಿಳುನಾಡು ಸರ್ಕಾರ ಭಗವಾನ್ ಮುರುಗನ್ ಸಮ್ಮೇಳನ ಹಮ್ಮಿಕೊಂಡಿತ್ತು. ಎರಡು ದಿನಗಳ ಈ ಅದ್ಧೂರಿ ಸಮಾರಂಭದಲ್ಲಿ ಸಾವಿರಾರು ಜನರು ಪಾಲ್ಗೊಂಡು ಯಶಸ್ವಿಗೊಳಿಸಿದರು.
ಇದನ್ನೂ ಓದಿ: 8 ಗಂಡಂದಿರಿಗೆ ಒಬ್ಬಳೇ ಮಡದಿ.. ಒಬ್ಬೊಬ್ಬರಿಗೂ ಒಂದೊಂದು ರೀತಿ ಮಕ್ಮಲ್ ಟೋಪಿ; ಅಸಲಿ ಕಹಾನಿ ಇಲ್ಲಿದೆ ನೋಡಿ!
ಪಳನಿ ನಗರದಲ್ಲಿ ಆಯೋಜಿಸಿದ್ದ ಬೃಹತ್ ಸಮಾರಂಭವನ್ನು ಚೆನ್ನೈನಲ್ಲಿ ಇದ್ದುಕೊಂಡೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಿಎಂ ಎಂ.ಕೆ ಸ್ಟಾಲಿನ್ ಅವರು ಉದ್ಘಾಟನೆ ಮಾಡಿದರು. ಇದೇ ವೇಳೆ ಮಾತನಾಡಿದ ಸಿಎಂ ಎಂ.ಕೆ ಸ್ಟಾಲಿನ್, ಪ್ರತಿಯೊಬ್ಬರಿಗೂ ಅವರದೇ ಆದ ನಂಬಿಕೆಗಳು ಇರುತ್ತವೆ. ಹೀಗಾಗಿ ತಮಿಳುನಾಡು ಎಲ್ಲ ಧರ್ಮಗಳನ್ನು ಸಮನವಾಗಿ ಕಂಡು ಗೌರವಿಸುತ್ತದೆ. ದ್ರಾವಿಡ ಮಾದರಿ ಸರ್ಕಾರ ಜನರ ನಂಬಿಕೆಗಳಿಗೆ ಅಡ್ಡಿಯುಂಟು ಮಾಡುವುದಿಲ್ಲ. ಮುರುಗನ್ ದೇವಾಲಯಗಳಲ್ಲಿ 789 ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿ ಯೋಜನೆಗಳು ನಡೆಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: 8 ಗಂಡಂದಿರ ಮುದ್ದಿನ ಹೆಂಡತಿ.. 6 ತಿಂಗಳಿಗೆ 1 ಮದುವೆಯಾಗಿ ನಾಟಕ; ಊಸರವಳ್ಳಿ ಬಣ್ಣ ಬಯಲಾಗಿದ್ದು ಹೇಗೆ?
6 ಮುರುಗನ್ ದೇವಾಲಯಗಳ ಪೈಕಿ ಒಂದಾದ ಪಳನಿಯ ಮುರುಗನ್ ದೇವಾಲಯದಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಆಧ್ಯಾತ್ಮಿಕ ಗಣ್ಯರು, ವಿವಿಧ ದೇಶಗಳ ಧಾರ್ಮಿಕ ವಿದ್ವಾಂಸರು, ಸಚಿವ ಪಿ.ಕೆ ಸೇಕರಬಾಬು, ಗ್ರಾಮೀಣಾಭಿವೃದ್ಧಿ ಸಚಿವ ಐ.ಪೆರಿಯಸಾಮಿ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಆರ್.ಸ್ಟಾಲಿನ್ ಇದ್ದರು. ಸಂಶೋಧಕರು ತಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಪುರಾವೆಗಳನ್ನು ಪ್ರಸ್ತುತಪಡಿಸಿದರು. 2 ದಿನಗಳ ಜಾಗತಿಕ ಮುತಮಿಜ್ ಮುರುಗನ್ ಸಮ್ಮೇಳನದಲ್ಲಿ ಸಾಕಷ್ಟು ಜನ ಪಾಲ್ಗೊಂಡಿದ್ದರು. ಸಮ್ಮೇಳನದಲ್ಲಿ ತಮಿಳು ಸಂಸ್ಕೃತಿ, ಆಧ್ಯಾತ್ಮ ಹಾಗೂ ಸಾಹಿತ್ಯದ ಕುರಿತು 1,300 ಸಂಶೋಧನಾ ಪ್ರಬಂಧಗಳನ್ನ ಮಂಡಿಸಲಾಯಿತು ಎಂದು ತಿಳಿದು ಬಂದಿದೆ.
ಪಳನಿ ನಗರದ ದೇವಾಲಯದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾದ ಸಮ್ಮೇಳನದ ಜಾಗವು 8 ಭವ್ಯ ಕಮಾನುಗಳನ್ನು ಒಳಗೊಂಡಿತ್ತು. ಭದ್ರತಾ ಸುರಕ್ಷತೆಗಾಗಿ 2,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಅಲ್ಲದೇ ಎಲ್ಲರಿಗೂ ಉಚಿತ ಪ್ರವೇಶವಿತ್ತು. ಮಧುರೈ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಸರ್ಕಾರ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಿತ್ತು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ