ವಿರಾಟ್ ಕೊಹ್ಲಿ ವಿರುದ್ಧ ದಕ್ಷಿಣ ಭಾರತೀಯರ ಆಕ್ರೋಶದ ಸುರಿಮಳೆ
ಬೆಳೆಯೋಕೆ ಫ್ಯಾನ್ಸ್ ಬೇಕೆಂದು ವಿರಾಟ್ ವಿರುದ್ಧ ನೆಟ್ಟಿಗರು ಗರಂ
ಮೂರ್ಖತನದ ರೂಲ್ಸ್ ತೆಗೆದು ಹಾಕಿ ಎಂದು ನೆಟ್ಟಿಗರು ಛಾಟಿ
ಕಿಂಗ್ ಕೊಹ್ಲಿ ಅಂದ್ರೆ ಫ್ಯಾನ್ಸ್ಗೆ ಪಂಚಪ್ರಾಣ. ಒಡಹುಟ್ಟಿದವರನ್ನ ಅಷ್ಟಾಗಿ ಪ್ರೀತಿಸಲ್ಲ. ಆದರೆ ಕೊಹ್ಲಿಯನ್ನು ಅದಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾ, ಆರಾಧಿಸ್ತಾರೆ. ಇಂತಹ ಸೆಂಚುರಿ ಸಾಮ್ರಾಟ ದಕ್ಷಿಣ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿರಾಟ್ ವಿ ಲವ್ ಅಂತಿದ್ದವರೇ, ವಿರಾಟ್ ವಿ ಹೇಟ್ ಯು ಅಂತಿದ್ದಾರೆ.
ವರ್ಲ್ಡ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಒಡೆತನದ ಫ್ಯಾನ್ಸಿ ರೆಸ್ಟೋರೆಂಟ್. ಒನ್- 8 ಹೆಸರಿನ ರೆಸ್ಟೋರೆಂಟ್ ಇತ್ತೀಚೆಗಷ್ಟೇ ಓಪನ್ ಆಗಿತ್ತು. ಓಪನ್ ಆದ ಕೆಲ ಸಮಯದಲ್ಲೆ ಗ್ರಾಹಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಇದೇ ರೆಸ್ಟೋರೆಂಟ್ ಇಷ್ಟು ವರ್ಷಗಳ ಕಾಲ ಕಿಂಗ್ ಕೊಹ್ಲಿ ಕಾಪಾಡಿಕೊಂಡು ಬಂದಿದ್ದ ಗೌರವಕ್ಕೆ ದಕ್ಕೆ ತಂದಿದೆ.
ಕೊಹ್ಲಿ ವಿರುದ್ಧ ದಕ್ಷಿಣ ಭಾರತೀಯರು ಆಕ್ರೋಶದ ಸುರಿಮಳೆ..!
ಯಾವ ಕಿಂಗ್ ಕೊಹ್ಲಿಯನ್ನ ಅಪಾರವಾಗಿ ಪ್ರೀತಿಸ್ತಾರೋ, ಅದೇ ಫ್ಯಾನ್ಸ್ ವಿರಾಟ್ ವಿರುದ್ಧ ಸಿಡಿದೆದ್ದಿದ್ದಾರೆ. ಲವ್ ಯು ಕೊಹ್ಲಿ ಅಂತಿದ್ದವರು ಹೇಟ್ ಯು ಕೊಹ್ಲಿ ಅಂತಿದ್ದಾರೆ. ಅಷ್ಟಕ್ಕೂ ಕೊಹ್ಲಿ ವಿರುದ್ಧ ಫ್ಯಾನ್ಸ್ ಕೆಂಡಾಮಂಡಲವಾಗಿರಲು ಕಾರಣ ಅದೇ ಕೊಹ್ಲಿ ಮಾಲೀಕತ್ವದ ಒನ್-8 ರೆಸ್ಟೋರೆಂಟ್. ಹೌದು, ತಮಿಳಿನಾಡಿನ ವ್ಯಕ್ತಿಯೊಬ್ಬ ಕೊಹ್ಲಿ ರೆಸ್ಟೋರೆಂಟ್ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರನ್ನ ಒಳಗೆ ಬಿಡದೇ ಅವಮಾನಿಸಲಾಗಿದೆ.
ತುಂಬಾ ಉತ್ಸುಕದಲ್ಲಿದ್ದ ತಮಿಳುನಾಡಿನ ವ್ಯಕ್ತಿಯನ್ನ ಡೋರ್ ಬಳಿಯಲ್ಲೇ ತಡೆದಿದ್ದಾರೆ. ನಿಮ್ಮ ಉಡುಪು ಸರಿ ಇಲ್ಲ. ಸಾಂಪ್ರದಾಯಿಕ ಡ್ರೆಸ್ನವರಿಗೆ ಒಳಗೆ ಅವಕಾಶವಿಲ್ಲ ಎಂದು ಹೇಳಿ ನಿರಾಕರಿಸಿದ್ದಾರೆ. ಇದರಿಂದ ಬೇಸರಗೊಂಡ ಆತ ಕೊಹ್ಲಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಇದು ಮುಂಬೈನ ಜುಹುನಲ್ಲಿರೋ ವಿರಾಟ್ ಕೊಹ್ಲಿ ಅವರ ರೆಸ್ಟೋರೆಂಟ್. ಇಲ್ಲಿಗೆ ನಡೆದುಕೊಂಡೆ ಬಂದೆ. ವಾಸ್ತವ್ಯ ಹೂಡಿದ ಹೋಟೆಲ್ನಲ್ಲಿ ಏನೂ ತಿನ್ನದೇ ಇಲ್ಲಿಗೆ ಬಂದೆ. ಯಾಕಂದ್ರೆ one- 8 ಅನ್ನೋದು ಕ್ರಿಕೆಟಿಗ ಕೊಹ್ಲಿ ಅವರ ರೆಸ್ಟೋರೆಂಟ್. ಇದರ ಬಗ್ಗೆ ಹೇಳಲೇಬೇಕು. ನಾನು ರಾಮ್ರಾಜ್ನ ಹೊಸ ಬಟ್ಟೆ ಧರಿಸಿದ್ದೆ. ಇಷ್ಟಾದ್ರು ಇಲ್ಲಿನ ಸಿಬ್ಬಂದಿ ನಿಮ್ಮ ಉಡುಪು ಸರಿ ಇಲ್ಲ, ಈ ಡ್ರೆಸ್ಕೋಡ್ಗೆ ಅವಕಾಶವಿಲ್ಲ ಎಂದು ಹೇಳಿ ಒಳಗಡೆ ಬಿಡಲು ನಿರಾಕರಿಸಿದ್ರು. ತುಂಬಾ ಬೇಸರದಿಂದಲೇ ನಾನು ರೂಮ್ಗೆ ಹೋಗುತ್ತಿದ್ದೇನೆ. ಇದಕ್ಕೆ ಕ್ರಮ ತೆಗೆದುಕೊಳ್ತಾರೋ, ಇಲ್ವೋ ಅನ್ನೋದು ಗೊತ್ತಿಲ್ಲ. ಆದರೆ ಇಂತಹ ಘಟನೆಗಳು ಮತ್ತೊಮ್ಮೆ ನಡೆಯಬಾರದು. ಯಾಕಂದ್ರೆ ನಾನು ಪಕ್ಕಾ ತಮಿಳುನಾಡಿನ ಸಾಂಪ್ರದಾಯಿಕ ಉಡುಪು ಧರಿಸಿ ಬಂದಿದ್ದೇನೆ. ಇಷ್ಟಾಗಿ ನನಗೆ ಅನುಮತಿ ನೀಡಿಲ್ಲ. ನಿಜಕ್ಕೂ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ.
A person was not allowed to #ViratKohli𓃵’s restaurant for wearing DHOTI
People with shorts were allowed
Cats were allowed tooBut wearing Dhoti not allowed 🚫
Isn’t this discrimination ?— Vineeth K (@DealsDhamaka) December 2, 2023
ಬೆಳೆಯೋಕೆ ಫ್ಯಾನ್ಸ್ ಬೇಕು.. ರೆಸ್ಟೋರೆಂಟ್ಗೆ ಬೇಡ್ವಾ..?
ತಮಿಳುನಾಡು ವ್ಯಕ್ತಿಗೆ ಕೊಹ್ಲಿ ರೆಸ್ಟೋರೆಂಟ್ಗೆ ನೋ ಎಂಟ್ರಿ ಎಂದಿದ್ದೇ ತಡ ಕೊಹ್ಲಿ ವಿರುದ್ಧ ಆಕ್ರೋಶದ ಬಾಣ ಪ್ರಯೋಗಿಸಲಾಗ್ತಿದೆ. ನಮಗೆಲ್ಲಾ ನೀವು ಯಾರು ಅನ್ನೋದು ಗೊತ್ತು. ಹಾಗೇ ನಿಮ್ಮ ರೆಸ್ಟೋರೆಂಟ್ಗೆ ಬರುವ ಗ್ರಾಹಕರನ್ನ ಯಾರೆಂದು ತಿಳಿದುಕೊಳ್ಳಲು ಪ್ರಯತ್ನಿಸಿ. ಮೂರ್ಖತನದ ರೂಲ್ಸ್ಗಳನ್ನ ತೆಗೆದು ಹಾಕಿ ಎಂದು ನೆಟ್ಟಿಗರು ಛಾಟಿ ಬೀಸಿದ್ದಾರೆ.
ಎಚ್ಚೆತ್ತುಕೊಳ್ಳಲಿ ಕೊಹ್ಲಿ.. ಬದಲಾಗಲಿ ರೂಲ್ಸ್..
ಸಾಂಪ್ರದಾಯಿಕ ಉಡುಪು ಧರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ರೆಸ್ಟೋರೆಂಟ್ ಒಳಗೆ ಅವಕಾಶ ನೀಡದಿರೋದು ನಿಜಕ್ಕೂ ಒಪ್ಪುವಂತಹದ್ದಲ್ಲ. ರೆಸ್ಟೋರೆಂಟ್ ಮ್ಯಾನೇಜರ್ ಮೌನವಹಿಸಿದ್ದಾರೆ. ಮಾಲೀಕ ಕಿಂಗ್ ಕೊಹ್ಲಿ ಘಟನೆ ಬಗ್ಗೆ ಇಲ್ಲಿತನಕ ತುಟಿ ಬಿಚ್ಚಿಲ್ಲ. ಇನ್ನಾದ್ರೂ ವಿರಾಟ್ ಎಚ್ಚೆತ್ತುಕೊಳ್ಳಲಿ. ಮತ್ತೊಮ್ಮೆ ಇಂತಹ ಘಟನೆ ನಡೆಯದಂತೆ ಜಾಗರೂಕರಾಗಿರಲಿ. ಇಲ್ಲವಾದ್ದಲ್ಲಿ ದಕ್ಷಿಣ ಭಾರತೀಯರ ಕೆಂಗಣ್ಣಿಗೆ ಗುರಿಯಾಗಬೇಕಾದೀತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ