newsfirstkannada.com

ಬೆಂಗಳೂರಿನಲ್ಲಿದ್ದ ಈ ಮಹಿಳೆ ಈಗ ನಡೆದಾಡುವ ದೇವರು.. ಇವರಿಗಾಗಿ ಕಾಯುತ್ತಿದೆ ಕೋಟಿ ಕೋಟಿ ರೂಪಾಯಿ!

Share :

Published April 2, 2024 at 11:09pm

Update April 3, 2024 at 6:05am

  ನಂಬಿಕೆಗಳನ್ನ ಇಟ್ಟುಕೊಂಡು ದೇಶ ವಿದೇಶದ ಭಕ್ತರು ನಂಬುತ್ತಿದ್ದಾರೆ

  ಟೋಪಿ ಧರಿಸಿ ಸುಮಾರು 14 ಕಿ ಮೀ ಇರುವ ಈ ಬೆಟ್ಟವನ್ನ ಸುತ್ತುತ್ತಾರೆ

  ಮಗಳ(14)ನ್ನ ಅಜ್ಜಿಯ ಜತೆ ಬಿಟ್ಟು ಬೆಂಗಳೂರಿಗೆ ಬಂದ ಪಳನಿಯಮ್ಮ

ಕೊಳಕು ಬಟ್ಟೆಯಲ್ಲಿ ಮಾನಸಿಕೆ ಅಸ್ವಸ್ಥೆಯಂತೆ ಕಾಣುವ ಈ ಮಹಿಳೆಯನ್ನ ನೋಡಲು ದೇಶ ವಿದೇಶದಿಂದ ಭಕ್ತರು ಬರುತ್ತಿದ್ದಾರೆ. ಈ ಮಹಿಳೆ ಕುಡಿದು ಬಿಟ್ಟ ಟೀ, ಜ್ಯೂಸ್ ಭಕ್ತರಿಗೆ ತೀರ್ಥ. ಈ ಮಹಿಳೆ ಹಿಂದೆ ಹೋದರೆ ಅದು ಶುಭ ಶಕುನ. ಜನರ ಮುಖವನ್ನ ನೋಡಿ ಈ ಮಹಿಳೆ ಮುಖ ಮುಚ್ಚಿಕೊಂಡರೆ ಅಪಶಕುನ. ಹೀಗೆ ನಾನಾ ನಂಬಿಕೆಗಳನ್ನ ಇಟ್ಟುಕೊಂಡು ದೇಶ ವಿದೇಶದ ಭಕ್ತರು ನಂಬುತ್ತಿದ್ದಾರೆ.

ಅಂದಹಾಗೆ ಈ ಮಹಿಳೆ ಕಳೆದ 18 ವರ್ಷಗಳಿಂದ ತಮಿಳುನಾಡಿನ ತಿರುವಣ್ಣಾಮಲೈ ಬೆಟ್ಟವನ್ನ ಸುತ್ತುತ್ತಿದ್ದಾರೆ. ತಿರುವಣ್ಣಾಮಲೈ ಸುತ್ತಾಮುತ್ತ ಟೋಪಿ ಅಮ್ಮ ಎಂದೇ ಪರಿಚಿತ. ಯಾವಾಗಲೂ ಟೋಪಿ ಧರಿಸಿ ಸುಮಾರು 14 ಕಿ ಮೀ ಇರುವ ಈ ಬೆಟ್ಟವನ್ನ ಸುತ್ತುತ್ತಾರೆ. ಬೆಳಗ್ಗೆಯಿಂದ ರಾತ್ರಿವರೆಗೆ ಅವರ ಹಿಂದೆ, ಹಿಂದೆನೇ ಸಾಗಲು ಜನರ ದಂಡೇ ಇದೆ. ಟೋಪಿ ಅಮ್ಮ ಹೋದ ಕಡೆ ಊಟ ಕೊಡುತ್ತಾರೆ. ಅವರು ಕೊಟ್ಟ ಆಹಾರವನ್ನ ಸ್ವಲ್ಪ ಬಿಸಾಡುತ್ತಾರೆ. ಅವರು ಬಿಸಾಡಿದ ಆಹಾರವನ್ನ ಜನರಿಗೆ ಹಂಚಲೆಂದೇ ಓರ್ವ ವಿದೇಶಿಗನಿದ್ದಾನೆ. ಆ ವಿದೇಶಿಗ ಅಲ್ಲಿನ ಭಕ್ತರಿಗೆ ತೀರ್ಥ, ಪ್ರಸಾದ ನೀಡುತ್ತಾನೆ.

ಇದನ್ನೂ ಓದಿ: ಕನ್ನಡಿಗರಿಗೆ ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ; ಚೂರು ಯಾಮಾರಿದ್ರೂ ಆರೋಗ್ಯ ಕೆಡೋದು ಗ್ಯಾರಂಟಿ!

ಕಳೆದ 18 ವರ್ಷದಿಂದ ಮಾನಸಿಕ ಅಸ್ವಸ್ಥೆಯಂತೆ ಕಾಣುವ ಈ ಮಹಿಳೆ ಹೆಸರು ಪಳನಿಯಮ್ಮ. ತಮಿಳುನಾಡಿನ ಧರ್ಮಪುರಿ ಮೂಲದ ಈ ಮಹಿಳೆ ಕಷ್ಟದಿಂದಲೇ ನೊಂದು ಬೆಂದಿದ್ದಾಳೆ. ಮದುವೆಯಾಗಿ ಕೆಲ ತಿಂಗಳಲ್ಲಿ ಗಂಡ ಪಳನಿಯಮ್ಮರನ್ನ ಬಿಟ್ಟು ಪರಾರಿಯಾಗುತ್ತಾನೆ. ಗರ್ಭಿಣಿಯಾಗಿದ್ದ ಪಳನಿಯಮ್ಮ ಕಷ್ಟ ಪಟ್ಟು ತನ್ನ ಹೆಣ್ಣು ಮಗಳನ್ನ ಸುಮಾರು 14 ವರ್ಷ ಸಾಕುತ್ತಾರೆ. ಅದೊಂದು ದಿನ ಒಡಹುಟ್ಟಿದ ತಮ್ಮನ ಸಾವಿನ ಸುದ್ದಿ ಪಳನಿಯಮ್ಮಾಗೆ ಬರಸಿಡಿಲಿನಂತೆ ಅಪ್ಪಳಿಸುತ್ತದೆ. ಬೆಂಗಳೂರಿನಲ್ಲಿ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ತಮ್ಮ, ಅಪಘಾತದಲ್ಲಿ ಸಾವನ್ನಪ್ಪುತ್ತಾನೆ. 14 ವರ್ಷದ ಮಗಳನ್ನ ಅಜ್ಜಿಯ ಜತೆ ಬಿಟ್ಟು ಬೆಂಗಳೂರಿಗೆ ಪಳನಿಯಮ್ಮ ಬರುತ್ತಾರೆ. ಇದಾದ ಬಳಿಕ ಪಳನಿಯಮ್ಮ ಪ್ರತ್ಯಕ್ಷವಾಗಿದ್ದು ಮಾನಸಿಕ ಅಸ್ವಸ್ಥೆಯಂತೆ ತಿರುವಣ್ಣಾಮಲೈನಲ್ಲಿ.

ಇದನ್ನೂ ಓದಿ: RCB vs LSG; ನವೀನ್​ ಓವರ್​ನಲ್ಲಿ ಹೊಡಿಬಡಿ ಆಟ.. ಕೊಹ್ಲಿ ನೆಟ್ಸ್​​ನಲ್ಲಿ ಮಿಂಚಿನ ಬ್ಯಾಟಿಂಗ್ ಹಿಂದಿದೆಯಾ ಆ ಸೇಡು?

ತಿರುವಣ್ಣಾಮಲೈನಲ್ಲಿ ಈ ಮಹಿಳೆಯನ್ನ ನಡೆದಾಡುವ ದೇವರು ಎಂದು ಜಾಲತಾಣಗಳಲ್ಲಿ ವೈರಲ್ ಆದ ಮೇಲೆ ತಾನು ಹೆತ್ತ ಮಗಳಿಗೆ ಮಾಹಿತಿ ಸಿಕ್ಕಿದೆ. ಹೆತ್ತ ತಾಯಿಯನ್ನ ಮನೆಗೆ ವಾಪಾಸ್ ಕರೆತರಲು ಹೋದಾಗ ಪಳನಿಯಮ್ಮ ಬರುವ ವಾತಾವರಣದಲ್ಲಿ ಇರಲಿಲ್ಲ. ಬೆಳೆದು ದೊಡ್ಡವಳಾಗಿ ಒಂದು ಮಗುವಿನ ತಾಯಿಯಾಗಿರುವ ತನ್ನ ಮಗಳನ್ನೂ ಅರಿಯುವ ಸ್ಥಿತಿಯಲ್ಲಿ ಪಳನಿಯಮ್ಮ ಇರಲಿಲ್ಲ. ಇದಾದ ಕೆಲ ದಿನಗಳಲ್ಲೇ ಪಳನಿಯಮ್ಮರ ಮಗಳನ್ನ ಕೆಲ ಪ್ರಭಾವಿಗಳು ಭೇಟಿಯಾಗಿದ್ದಾರೆ. ನಿಮ್ಮ ತಾಯಿ ಸಾವನ್ನಪ್ಪಿದ ನಂತರ ಅವರನ್ನ ಸಮಾಧಿ ಮಾಡಿ, ಮಂಟಪ ಕಟ್ಟಿಸಲು ಪತ್ರದಲ್ಲಿ ಸಹಿ ಮಾಡುವಂತೆ ಒತ್ತಾಯಿಸಿದ್ದಾರೆ. ಇದಕ್ಕಾಗಿ ಕೋಟಿ.. ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪಲೇಬೇಕು ಎಂದು ಬೆದರಿಕೆಯನ್ನ ಹಾಕಿದ್ದಾಗಿಯು ಮಗಳು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಮಾನಸಿಕ ಅಸ್ವಸ್ಥೆಯನ್ನ ದೇವರು ಎಂದು ಜನರು ನಂಬುತ್ತಿದ್ದಂತೆ, ಅದನ್ನ ಬಳಸಿಕೊಂಡು ಬ್ಯುಸಿನೆಸ್ ಮಾಡಲು ಹೊರಟಿರುವುದು ನಿಜಕ್ಕೂ ತಲೆ ತಗ್ಗಿಸುವ ಸಂಗತಿ.

ವಿಶೇಷ ವರದಿ; ಅರುಣ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನಲ್ಲಿದ್ದ ಈ ಮಹಿಳೆ ಈಗ ನಡೆದಾಡುವ ದೇವರು.. ಇವರಿಗಾಗಿ ಕಾಯುತ್ತಿದೆ ಕೋಟಿ ಕೋಟಿ ರೂಪಾಯಿ!

https://newsfirstlive.com/wp-content/uploads/2024/04/PALANIYAMMA.jpg

Load More