newsfirstkannada.com

400 ಟಾರ್ಗೆಟ್.. 100 ದಿನಕ್ಕೆ ಸ್ಪೆಷಲ್ ಟಾಸ್ಕ್; ಮಹಾ ಅಧಿವೇಶನದಲ್ಲಿ ಪ್ರಧಾನಿ ಮೋದಿ ಎಚ್ಚರಿಕೆ; ಏನಂದ್ರು?

Share :

Published February 18, 2024 at 4:26pm

    ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುವ ಟಾರ್ಗೆಟ್ ಫಿಕ್ಸ್‌

    ಬಿಜೆಪಿ ನೇತೃತ್ವದ NDA ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತೆ

    ಮುಂದಿನ 100 ದಿನಗಳಲ್ಲಿ ನೀವು ಏನು ಮಾಡಬೇಕು ಅಂದ್ರೆ..

ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಮಹಾ ಅಧಿವೇಶನ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಮಹತ್ವದ ಭಾಷಣ ಮಾಡಿದ್ದಾರೆ. ಹ್ಯಾಟ್ರಿಕ್ ಗೆಲುವಿನ ಲೆಕ್ಕಾಚಾರದಲ್ಲಿರುವ ಬಿಜೆಪಿ ನಾಯಕರು ಲೋಕಸಭಾ ಚುನಾವಣೆಯನ್ನ ಎದುರಿಸಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ಇಂದು ದೆಹಲಿಯ ಭಾರತ್‌ ಮಂಟಪದಿಂದ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿದೆ.

ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆಯಲ್ಲಿ 400 ಸ್ಥಾನ ಗಳಿಸೋದಕ್ಕೆ ಟಾರ್ಗೆಟ್ ಸೆಟ್ ಮಾಡಿದ್ದಾರೆ. ಬಿಜೆಪಿ ಅಗ್ರನಾಯಕರಿಗೆ ಚುನಾವಣೆಯ ಪಾಠ ಮಾಡಿದ ನಮೋ, ಸದ್ಯ ವಿಶ್ವದ ಹಲವು ದೇಶಗಳೊಂದಿಗೆ ಭಾರತದ ಸಂಬಂಧ ಗಟ್ಟಿಯಾಗಿದೆ. ಬೇರೆ ದೇಶದವರಿಗೆ ಮತ್ತೆ ಮೋದಿಯೇ ಬರೋದೆಂದು ಗೊತ್ತಿದೆ. ಕಳೆದ 50 ವರ್ಷಗಳಲ್ಲಿ ಆಗದಿದ್ದನ್ನ ನಾವು ಮಾಡಿ ತೋರಿಸಿದ್ದೇವೆ. ಬಿಜೆಪಿ ನೇತೃತ್ವದ NDA ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದ ಹೇಳಿದ್ದಾರೆ.

ತಮ್ಮ ಭಾಷಣದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಎಚ್ಚರಿಸಿದ ಪ್ರಧಾನಿ ಮೋದಿ, ಮುಂದಿನ 100 ದಿನಗಳಲ್ಲಿ ನಾವು ದೇಶದ ಪ್ರತಿಯೊಬ್ಬರ ವಿಶ್ವಾಸವನ್ನು ಗಳಿಸಬೇಕಿದೆ. ಬಿಜೆಪಿ ಪಕ್ಷದ ಮೊದಲ ಆದ್ಯತೆ 2024ರ ಲೋಕಸಭಾ ಚುನಾವಣೆಯಲ್ಲಿ 400 ಸೀಟ್ ಗೆಲ್ಲುವುದಾಗಿದೆ ಎಂದು ಸ್ಪಷ್ಟಪಡಿಸಿದರು.

ಮುಂದಿನ 100 ದಿನದ ಸ್ಪೆಷಲ್ ಟಾಸ್ಕ್ ಕೊಟ್ಟಿರುವ ನರೇಂದ್ರ ಮೋದಿ, ನಾವೆಲ್ಲರೂ ಪ್ರತಿಯೊಬ್ಬ ಯುವ ಮತದಾರ, ಪ್ರತಿಯೊಬ್ಬ ಫಲಾನುಭವಿ, ಪ್ರತಿಯೊಬ್ಬ ಸಮುದಾಯವನ್ನು ತಲುಪಬೇಕು. ಈ ಮೂಲಕ ಪ್ರತಿಯೊಬ್ಬರ ಪ್ರೀತಿ, ವಿಶ್ವಾಸವನ್ನು ಸಂಪಾದಿಸಬೇಕು ಎಂದು ಕರೆ ಕೊಟ್ಟರು. ಇದೇ ವೇಳೆ ಮೂರನೇ ಬಾರಿಗೆ ಅಧಿಕಾರಕ್ಕೆ ಬರುತ್ತಿರುವುದು ಆಡಳಿತವನ್ನು ಎಂಜಾಯ್ ಮಾಡುವುದಕ್ಕೆ ಅಲ್ಲ. ದೇಶಕ್ಕಾಗಿ ದುಡಿಯಲು ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: ‘ಗ್ಯಾರಂಟಿ’ 20 ಸ್ಥಾನ ಗೆಲ್ಲುತ್ತೇವೆ.. ಮಂಡ್ಯದಲ್ಲಿ BJP-JDS ದೋಸ್ತಿ ದಾಳಕ್ಕೆ ಸಿಎಂ ಸಿದ್ದು ಸವಾಲು; ಹೇಳಿದ್ದೇನು?

ಇನ್ನು, ನನಗೆ ನಮ್ಮ ಹಿರಿಯ ನಾಯಕರು ಸಾಕು ನಿಮ್ಮ ಸೇವೆ ಎಂದು ಹೇಳಲಿ. ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ನಿಮ್ಮ ಕಾರ್ಯ ಸಾಕು ಎಂದು ತಿಳಿಸಲಿ ನಾನು ವಿಶ್ರಾಂತಿ ಪಡೆಯಲು ಸಿದ್ಧನಿದ್ದೇನೆ. ಆದರೆ ನಾನು ರಾಷ್ಟ್ರನೀತಿಗಾಗಿ ದುಡಿಯುತ್ತೇನೆ ರಾಜನೀತಿಗಾಗಿ ಕೆಲಸ ಮಾಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

400 ಟಾರ್ಗೆಟ್.. 100 ದಿನಕ್ಕೆ ಸ್ಪೆಷಲ್ ಟಾಸ್ಕ್; ಮಹಾ ಅಧಿವೇಶನದಲ್ಲಿ ಪ್ರಧಾನಿ ಮೋದಿ ಎಚ್ಚರಿಕೆ; ಏನಂದ್ರು?

https://newsfirstlive.com/wp-content/uploads/2024/02/PM-Modi-BJP-1.jpg

Load More