Advertisment

ಹನಿಮೂನ್‌ನಲ್ಲಿ ತರುಣ್ ಸುಧೀರ್, ಸೋನಲ್ ಮೊಂಥೆರೋ ಜೋಡಿ; ಪ್ರಣಯಪಕ್ಷಿಗಳು ಹೋಗಿದ್ದು ಎಲ್ಲಿಗೆ? VIDEO

author-image
admin
Updated On
ಹನಿಮೂನ್‌ನಲ್ಲಿ ತರುಣ್ ಸುಧೀರ್, ಸೋನಲ್ ಮೊಂಥೆರೋ ಜೋಡಿ; ಪ್ರಣಯಪಕ್ಷಿಗಳು ಹೋಗಿದ್ದು ಎಲ್ಲಿಗೆ? VIDEO
Advertisment
  • ಸಪ್ತಸಾಗರದಾಚೆ ಜಾಲಿಯಾಗಿ ಓಡಾಡುತ್ತಿರುವ ಸ್ಟಾರ್ ಜೋಡಿ
  • ಬೆಂಗಳೂರು, ಮಂಗಳೂರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ಸ್ಟಾರ್ಸ್
  • ತರುಣ್ ಸುಧೀರ್‌, ಸೋನಲ್ ಹನಿಮೂನ್ ವಿಡಿಯೋ ವೈರಲ್‌!

ಸ್ಯಾಂಡಲ್‌ವುಡ್‌ ಸಕ್ಸಸ್‌ಫುಲ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಬೆಳಕಿನ ಕವಿತೆ ಖ್ಯಾತಿಯ ಚೆಲುವೆ ಸೋನಲ್‌ ಮೊಂಥೆರೋ ಪ್ರಣಯಪಕ್ಷಿಗಳಾಗಿ ಹಾರಾಡುತ್ತಿದ್ದಾರೆ. ಸ್ಟಾರ್ ಜೋಡಿ ಅದ್ಧೂರಿ ಮದುವೆಯಾದ ಮೇಲೆ ಹನಿಮೂನ್‌ಗೆ ಹೋಗಿದ್ದಾರೆ. ಹನಿಮೂನ್‌ನಲ್ಲಿ ಜಾಲಿಯಾಗಿ ಓಡುಡುತ್ತಿರುವ ಈ ಜೋಡಿ ಹಕ್ಕಿಗಳು ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.

Advertisment

publive-image

ತರುಣ್ ಸುಧೀರ್ ಹಾಗು ಸೋನಲ್ ಮೊಂಥೆರೋ ಕಳೆದ ಆಗಸ್ಟ್​ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಮದುವೆ ಸಮಾರಂಭ ನಡೆದಿತ್ತು. ಗುರು ಹಿರಿಯರ ಸಮ್ಮುಖದಲ್ಲಿ ಈ ಸ್ಟಾರ್​ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಈ ಸ್ಟಾರ್ ಜೋಡಿಯ ಮದುವೆ ಸಮಾರಂಭಕ್ಕೆ ಇಡೀ ಸ್ಯಾಂಡಲ್‌ವುಡ್ ತಾರೆಯರು ಬಂದು ಶುಭ ಹಾರೈಸಿದ್ದರು.

ಇದನ್ನೂ ಓದಿ: ಮದುವೆ ದಿನವೇ ಸೋನಲ್ ಹಾಕಿದ್ರು ಒಂದು ಕಂಡೀಷನ್‌.. ತರುಣ್ ಸುಧೀರ್‌ಗೆ ನರ್ವಸ್‌; ವಿಡಿಯೋ ನೋಡಿ!

ಬೆಂಗಳೂರಲ್ಲಿ ಅದ್ಧೂರಿ ಕಲ್ಯಾಣ ಮುಗಿಯುತ್ತಿದ್ದಂತೆ ಮಂಗಳೂರಲ್ಲಿ ಕ್ರೈಸ್ತ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್ ವೆಡ್ಡಿಂಗ್ ಚರ್ಚ್‌ನಲ್ಲಿ ನೆರವೇರಿತ್ತು. ಸೋನಲ್ ಮನೆಯ ಸಂಪ್ರದಾಯದಂತೆ ತರುಣ್ ಸುಧೀರ್ ಅವರ ಮದುವೆ ಸಮಾರಂಭ ಕಳೆ ಕಟ್ಟಿತ್ತು. ಮಂಗಳೂರಲ್ಲಿ ನಡೆದ ಚರ್ಚ್‌ ವೆಡ್ಡಿಂಗ್‌ನಲ್ಲಿ ತರುಣ್ ಸುಧೀರ್, ಸೋನಲ್‌ ಸ್ನೇಹಿತರು, ಕುಟುಂಬದ ಆಪ್ತರು ಭಾಗಿಯಾಗಿದ್ದರು.

Advertisment

ಇದನ್ನೂ ಓದಿ: ವೇದಿಕೆ ಮೇಲೆ ನಟಿಯನ್ನ ಎತ್ತಿ ಮುದ್ದಾಡಿದ ತರುಣ್​; ಚಿನ್ನ, ಬಂಗಾರಿ ಎಂದಿದ್ದಕ್ಕೆ ನಾಚಿ ನೀರಾದ ಸೋನಲ್ 

ಮದುವೆಯಾದ ಬಳಿಕ ತರುಣ್ ಸುಧೀರ್ ಹಾಗೂ ಸೋನಲ್ ಹನಿಮೂನ್ ಟ್ರಿಪ್‌ಗೆ ಹೋಗಿದ್ದಾರೆ. ಸೋನಲ್ ಮೊಂಥೆರೋ ಅವರೇ ತಮ್ಮ ಹನಿಮೂನ್‌ನ ಅಪ್ಡೇಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೋನಲ್ ರೆಕಾರ್ಡ್‌ ಮಾಡಿರುವ ವಿಡಿಯೋದಲ್ಲಿ ತರುಣ್ ಬಿಂದಾಸ್ ಆಗಿ ವಾಕ್ ಮಾಡುತ್ತಿದ್ದಾರೆ. ತರುಣ್ ಜೊತೆ ಹೆಜ್ಜೆ ಹಾಕುತ್ತಿರುವ ಸೋನಲ್‌ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.

Advertisment

ಸದ್ಯ ತರುಣ್ ಹಾಗೂ ಸೋನಲ್ ಅವರು ದುಬೈನಲ್ಲಿ ತಮ್ಮ ಹನಿಮೂನ್ ಪ್ಲಾನ್ ಮಾಡಿದ್ದಾರೆ. ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಬಳಿ ಹಾಗೂ  ದುಬೈನ ರಸ್ತೆಗಳಲ್ಲಿ ಫುಲ್ ಬಿಂದಾಸ್ ಆಗಿ ಓಡಾಡುತ್ತಿರುವ ಈ ಸ್ಟಾರ್ ಜೋಡಿ ಸಖತ್ ಎಂಜಾಯ್ ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ತರುಣ್ ಹಾಗೂ ಸೋನಲ್ ಹನಿಮೂನ್ ವಿಡಿಯೋ ನೋಡಿದ ಅಭಿಮಾನಿಗಳು ಸೂಪರ್ ಜೋಡಿ ಅಂತ ಕಮೆಂಟ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment