/newsfirstlive-kannada/media/post_attachments/wp-content/uploads/2024/10/RATANA-TATA-5.jpg)
ರತನ್ ಟಾಟಾ ಇಂದು ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಕಟ್ಟಿಕೊಟ್ಟು ಹೋದ ಆದರ್ಶಗಳ, ಮಾನವೀಯ ಮೌಲ್ಯಗಳ ಬುತ್ತಿ ಇದೆಯಲ್ಲ, ಅದು ಈ ದೇಶ ಉಸಿರಾಡುವವರೆಗೂ ಕೂಡ ಸದಾ ಇರುತ್ತೆ. ಸರಳ, ಸಜ್ಜನಿಕೆಗೆ ಒಂದು ಮೂರ್ತರೂಪ ಇದ್ದಿದ್ದೇ ಆದ್ರೆ ಅದು ರತನ್ ಟಾಟಾ ಎಂದು ಅನೇಕರು ಹೇಳಿದ್ದಾರೆ. ಕಾರಣ ಅವರು ಬದುಕಿದ್ದೇ ಆ ರೀತಿಯಾಗಿ. ಕೇವಲ ತಾವಷ್ಟೇ ಬೆಳೆಯಲಿಲ್ಲ. ಅವರೊಂದಿಗೆ ತಮ್ಮ ಉದ್ಯಮವನ್ನು ಬೆಳೆಸಿದರು. ಉದ್ಯಮಗಳ ಜೊತೆ ಜೊತೆಗೆ ಲಕ್ಷಾಂತರ ಕಾರ್ಮಿಕರು ಅವರ ಹೆಸರೊಂದಿಗೆ ಬೆಳೆದರು. ಟಾಟಾ ಗ್ರೂಪ್ ಇಂದು ದೇಶದಲ್ಲಿ ಹೂಡಿಕೆ ಮಾಡದಂತಹ ಯಾವ ಕ್ಷೇತ್ರವೂ ಉಳಿದಿಲ್ಲ. ಈ ಹಿಂದಿನ ಲೇಖನದಲ್ಲಿ ಹೇಳಿದಂತೆ ಉಪ್ಪಿನಿಂದ ಹಿಡಿದು ಜಾಗ್ವಾರ್ವರೆಗೂ, ಲೈಫ್ ಇನ್ಸೂರೆನ್ಸ್ನಿಂದ ಹಿಡಿದು ಏರ್ಲೈನ್ಸ್ವರೆಗೂ ರತನ್ ಟಾಟಾ ಅವರ ಟಾಟಾ ಗ್ರೂಪ್ ಹೂಡಿಕೆ ಮಾಡಿದೆ. ಅಂದು ಜೆಮಶೇಡ್ ಜೀ ಟಾಟಾ ಅವರು ನೆಟ್ಟ ಸಸಿಯನ್ನು ರತನ್ ಟಾಟಾ ಹೆಮ್ಮರವಾಗಿ ಬೆಳೆಸಿದ್ದಾರೆ.
ಇದನ್ನೂ ಓದಿ: ಶ್ವಾನಪ್ರೇಮಿ ರತನ್ ಟಾಟಾ! ಅಂದು ಕಿಂಗ್ ಚಾಲ್ಸ್ ನೀಡುವ ‘ಜೀವಮಾನದ ಸಾಧನೆ’ ಪ್ರಶಸ್ತಿಯನ್ನೇ ಕೈಬಿಟ್ಟಿದ್ರು
ಟಾಟಾ ಗ್ರೂಪ್ ಹೂಡಿಕೆ ಮಾಡಿದ ಒಂದೊಂದು ಕ್ಷೇತ್ರಗಳ ಬಗ್ಗೆಯೂ ನೋಡುತ್ತಾ ಹೋಗುವುದಾದ್ರೆ. ಈಗಾಗಲೇ ಹೇಳದಂತೆ ಆಟೋಮೊಬೈಲ್ ಕ್ಷೇತ್ರದಿಂದ ಹಿಡಿದು ಆಹಾರೋದ್ಯಮದವರೆಗೂ ಟಾಟಾ ಗ್ರೂಪ್ ಹೂಡಿಕೆ ಮಾಡಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಟಾಟಾ ಗ್ರೂಪ್ ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಆಟೋಮೊಬೈಲ್ನಲ್ಲಿ ಏನೆಲ್ಲಾ ಹೂಡಿಕೆ ಮಾಡಿದೆ ಅಂತ ನೋಡುವುದಾದ್ರೆ
ಇದನ್ನೂ ಓದಿ:ಪಾಕಿಸ್ತಾನದ GDPಗಿಂತ ಟಾಟಾ ಗ್ರೂಪ್ನ ಮೌಲ್ಯವೇ ಹೆಚ್ಚು.. ಎಷ್ಟು ಲಕ್ಷ ಕೋಟಿ ಇದೆ ಗೊತ್ತಾ?
ಲ್ಯಾಂಡ್ ಲೋವರ್
ಜಾಗ್ವಾರ್
ಟಾಟಾ ಮೋಟರ್ಸ್
ಆಡು ಮುಟ್ಟದ ಸೊಪ್ಪಿಲ್ಲ, ಟಾಟಾ ಗ್ರೂಪ್ ಹೂಡಿಕೆ ಮಾಡದ ಕ್ಷೇತ್ರವಿಲ್ಲ ಎಂಬ ಮಾತನ್ನು ನಾವು ಈಗಾಗಲೇ ಹೇಳಿದ್ದೇವೆ. ಆ ರೀತಿಯಲ್ಲಿ ಟಾಟಾ ಗ್ರೂಪ್ ಸೋಲೋ ಗೆಲುವೋ, ಲಾಭವೋ ನಷ್ಟವೋ ಒಟ್ಟಿನಲ್ಲಿ ಹೊಸ ಹೊಸ ಪ್ರಯೋಗಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಲೇ ಬಂದಿದೆ. ಅವುಗಳಲ್ಲಿ ಫೈನಾನ್ಸ್ ಕ್ಷೇತ್ರವೂ ಒಂದು.
ಟಾಟಾ ಎಐಎ
ಟಾಟಾ ಕ್ಯಾಪಿಟಲ್
ಟಾಟಾ ಎಐಜಿ
ಇನ್ನು ಟೆಲಿಕಾಂ್ ಮತ್ತು ಮೀಡಿಯಾಗಳಲ್ಲಿಯೂ ಕೂಡ ಟಾಟಾ ಗ್ರೂಪ್ ಹೂಡಿಕೆ ಮಾಡಿದೆ. ಅವುಗಳಲ್ಲಿ ಪ್ರಮುಖವಾಗಿ ನಮಗೆ ಕಾಣಿಸುವುದು
ಟಾಟಾ ಸ್ಕೈ
ಟಾಟಾ ಕಮ್ಯೂನಿಕೇಷನ್
ಟಾಟಾ ಟೆಲಿಸರ್ವಿಸ್ ಲಿಮಿಟೆಡ್
ಟಾಟಾ ಟೆಲೆ
ಐಟಿ ಕ್ಷೇತ್ರದಲ್ಲಿಯೂ ಕೂಡ ಟಾಟಾ ಗ್ರೂಪ್ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿದೆ.ಅವುಗಳಲ್ಲಿ ಪ್ರಮುಖವಾದವು
ಟಾಟಾ ಕ್ಲಾಸ್ ಎಡ್ಜ್
ಟಿಸಿಎಸ್
ಟಾಟಾ ಇಎಲ್ಎಕ್ಸ್ಎಸ್ಐ
ಟ್ರಾವೆಲ್ ಮತ್ತು ಟೂರಿಸಂ ಕ್ಷೇತ್ರದಲ್ಲಿ ಟಾಟಾ ಕಂಪನಿ ಮಾಡಿದ ಹೂಡಿಕೆ ಅಪಾರ ಮತ್ತು ನೀಡಿದ ಕೊಡುಗೆಯೂ ಕೂಡ ಅಪಾರ
ಏರ್ ಏಷಿಯಾ
ಏರ್ ಇಂಡಿಯಾ
ವಿವಾಂತ್
ವಿಸ್ತಾರ
ಜಿಂಜರ್ ಹೋಟೆಲ್ಸ್
ಟಾಟಾ ಎಂಟರ್ಪ್ರೈಸಸ್ ತಾಜ್
ಕೆಮಿಕಲ್ ಕ್ಷೇತ್ರದಲ್ಲಿಯೂ ಕಾಲಿಟ್ಟ ಟಾಟಾ ಗ್ರೂಪ್ ಟಾಟಾ ಕೆಮಿಕಲ್ಸ್ ಎಂಬ ಹೆಸರಿನಡಿ ಹೂಡಿಕೆ ಮಾಡಿದೆ. ಅರಂತೆ ರಿಟೇಲ್ ಸೆಕ್ಟರ್ನಲ್ಲಿಯೂ ಟಾಟಾ ಇಟ್ಟ ಹೆಜ್ಜೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು
ಸ್ಟಾರ್ ಬಕ್ಸ್ ಕಾಫಿ
ವೊಲ್ಟಾಸ್, ಸೋನಾಟಾ
ಟೈಟಾನ್, ಜೋಯಾ ಕ್ರೋಮಾ
ತನಿಷ್ಕಾ, ಫಾಸ್ಟ್ಟ್ರ್ಯಾಕ್
ಇನ್ನು ಗ್ರಾಹಕ ಮಾರುಕಟ್ಟೆಯಲ್ಲಿಯೂ ಕೂಡ ಟಾಟಾ ಗ್ರೂಪ್ ಕಂಪನಿಯ ಅನೇಕ ಉತ್ಪನ್ನಗಳನ್ನು ನಾವು ಕಾಣಬಹುದು
ಟಾಟಾ ಟೀ
ಮಾಪ್, ಹಿಮಾಲಯಾ, ಟೀಪಿಗ್ಸ್
ವಿಟಾಕ್ಸ್, ಗುಡ್ ಅರ್ಥ್, ಸೂಲ್ಫುಲ್
ಬಿಸ್ಲೆರಿ, ಟಾಟಾ ಗ್ಲುಕೊ, ಟಾಟಾ ಸಾಲ್ಟ್
ಇನ್ನು ಮೆಟಲ್ ಕ್ಷೇತ್ರಲ್ಲಿಯೂ ಕೂಡ ಟಾಟಾ ಗ್ರೂಪ್ ಆಫ್ ಕಂಪನಿ ಕೈಯಾಡಿಸಿದೆ.
ಟಾಟಾ ಟಿನ್ಪ್ಲೇಟ್, ಟಾಟಾ ಸ್ಟೀಲ್, ಟಾಟಾ ಸ್ಪೋಂಜ್, ಟಾಟಾ ಬ್ಲೂಸ್ಕೊಪ್ ಸ್ಟೀಲ್ ಇವು ಪ್ರಮುಖವಾಗಿ ಟಾಟಾ ಮೆಟಲ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ ಕಂಪನಿಗಳು
ಇದನ್ನೂ ಓದಿ:ಟಾಪ್ ಬಿಲಿಯನೇರ್ ಪಟ್ಟಿಯಲ್ಲಿ ರತನ್ ಟಾಟಾ ಹೆಸರು ಯಾಕಿಲ್ಲ? ಕಾರಣ ಗೊತ್ತಾದ್ರೆ ಮತ್ತಷ್ಟು ಹೆಮ್ಮೆ ಪಡ್ತೀರಿ..ಇನ್ನೂ
ಮೂಲಭೂತ ಸೌಕರ್ಯಗಳ ವಿಚಾರದಲ್ಲಿಯೂ ಕೂಡ ಟಾಟಾ ಗ್ರೂಪ್ ಹಿಂದೆ ಬಿದ್ದಿಲ್ಲ
ಟಾಟಾ ಹೌಸಿಂಗ್
ಟಾಟಾ ಪವರ್
ಟಾಟಾ ಐಟಿಎ ಪ್ರಾಜೆಕ್ಟ್
ಟಾಟಾ ಇಂಜಿನಿಯರ್ಸ್ ಲಿಮಿಟೆಡ್
ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯನ್ನೇ ನಾವು ತೆರೆದಿಡಬೇಕಾಗುತ್ತೆ. ಉದ್ಯಮ ವಲಯದಲ್ಲಿ ಟಾಟಾ ಇಟ್ಟ ಹೆಜ್ಜೆ ಮತ್ತು ಮಾಡಿದ ಕ್ರಾಂತಿಗಳು ಅಪಾರ. ಟಾಟಾ ಕಂಪನಿ ಬೆಳೆದುಕೊಂಡು ಬಂದಿದ್ದೇ ಹಾಗೆ. ಅದನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಿ ಕೂರಿಸಿದ್ದು ರತನ್ ಟಾಟಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ