Advertisment

ಬರೋಬ್ಬರಿ 5 ಸಾವಿರ ಕೋಟಿ ಒಡೆಯ.. ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಗೆದ್ರಾ.. ಸೋತ್ರಾ?

author-image
Bheemappa
Updated On
ಬರೋಬ್ಬರಿ 5 ಸಾವಿರ ಕೋಟಿ ಒಡೆಯ.. ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಗೆದ್ರಾ.. ಸೋತ್ರಾ?
Advertisment
  • ಜಗನ್​ ಮೋಹನ್​ ರೆಡ್ಡಿ ಪಕ್ಷವನ್ನ ಕೈಹಿಡಿಯದ ಆಂಧ್ರದ ಮತದಾರರು
  • ದೇಶದ ​ಎಲ್ಲಾ ಅಭ್ಯರ್ಥಿಗಳಿಗಿಂತ ಹೆಚ್ಚು ಶ್ರೀಮಂತ ಆಗಿರುವ TDP ನಾಯಕ
  • ಡಾಕ್ಟರ್ ಆಗಿರುವ TDP ಅಭ್ಯರ್ಥಿ ಆಸ್ತಿ ಮೌಲ್ಯ ಎಷ್ಟು ಕೋಟಿ ರೂ. ಗೊತ್ತಾ?

ಹೈದರಾಬಾದ್: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿರುವ ಚಂದ್ರಶೇಖರ್ ಪೆಮ್ಮಸಾನಿ ಗುಂಟೂರು ಲೋಕಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇಲ್ಲಿವರೆಗೆ 4,75,907 ಮತಗಳಿಂದ ಮುನ್ನಡೆಯಲ್ಲಿದ್ದು ಪೆಮ್ಮಸಾನಿ ಗೆಲುವಿನ ಸನಿಹದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

Advertisment

ಇದನ್ನೂ ಓದಿ: ಅಬ್ಬಬ್ಬಾ! ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ; ಎಷ್ಟು ಸಾವಿರ ಕೋಟಿ ಒಡೆಯ ಗೊತ್ತಾ? 

ಆಂಧ್ರದ ಗುಂಟೂರು ಲೋಕಸಭಾ ಕ್ಷೇತ್ರದಿಂದ ಡಾ.ಚಂದ್ರಶೇಖರ್ ಪೆಮ್ಮಸಾನಿ ಅವರು ಈ ಸಲ ತೆಲುಗು ದೇಶಂ ಪಾರ್ಟಿಯಿಂದ ಸ್ಪರ್ಧೆ ಮಾಡಿದ್ದರು. ಸದ್ಯದ ಮಾಹಿತಿ ಪ್ರಕಾರ YSRCP ಅಭ್ಯರ್ಥಿ ಕಿಲಾರಿ ವೆಂಕಟ ರೋಸಯ್ಯ ವಿರುದ್ಧ ಚಂದ್ರಶೇಖರ್ ಪೆಮ್ಮಸಾನಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಟಿಡಿಪಿಯಿಂದ ಚಂದ್ರಶೇಖರ್ ಪೆಮ್ಮಸಾನಿ 4,75,907 ಮತಗಳಿಂದ ಮುನ್ನಡೆ ಪಡೆದಿದ್ದರೇ, ಇತ್ತ YSRCP ಅಭ್ಯರ್ಥಿ ಕಿಲಾರಿ ವೆಂಕಟ ರೋಸಯ್ಯ 2,58,099 ಮತಗಳಿಂದ ಹಿನ್ನಡೆಯಲ್ಲಿದ್ದಾರೆ. ಒಟ್ಟು 2.5 ಲಕ್ಷ ವೋಟ್​ಗಳಿಂದ ಪೆಮ್ಮಸಾನಿ ಮುನ್ನಡೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಈಗಾಗಲೇ ಪೆಮ್ಮಸಾನಿ ಗೆದ್ದಿದ್ದಾರೆ ಎಂದು ಹೇಳಲಾಗುತ್ತಿದ್ದು ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆ ಒಂದು ಬಾಕಿ ಇದೆ.

ಇದನ್ನೂ ಓದಿ: ಜೈಲಿಂದಲೇ ಸ್ಪರ್ಧಿಸಿ ಲೀಡ್​ನಲ್ಲಿರೋ ಅಮೃತ್ ಪಾಲ್ ಸಿಂಗ್.. ಯಾವ ಕ್ಷೇತ್ರ?

Advertisment

publive-image

ಆಂಧ್ರದ ಗುಂಟೂರು ಲೋಕಸಭಾ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ ಚಂದ್ರಶೇಖರ್ ಪೆಮ್ಮಸಾನಿ ಬರೋಬ್ಬರಿ 5,705 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿರುವುದಾಗಿ ನಾಮಿನೇಷನ್ ಸಲ್ಲಿಸುವಾಗ ಘೋಷಿಸಿಕೊಂಡಿದ್ದಾರೆ. ಹೀಗಾಗಿ ಇವರು ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದು, ಅಫಿಡವಿಟ್ ಪ್ರಕಾರ ಒಟ್ಟು 5,598 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 106 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ.

ಸದ್ಯ ಆಂಧ್ರಪ್ರದೇಶದ ವಿಧಾನಸಭಾ ಮತದಾನದ ಫಲಿತಾಂಶ ಕೂಡ ಇಂದೆ ಪ್ರಕಟಗೊಳ್ಳುತ್ತಿದ್ದು ಈಗಾಗಲೇ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಗೆಲುವಿನ ನಗೆ ಬೀರಿದೆ. ಮುಂದಿನ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ನಾಯ್ಡು ಅವರ ಪಕ್ಷದ ಪೆಮ್ಮಸಾನಿ ಕೂಡ ಗುಂಟೂರು ಕ್ಷೇತ್ರದಿಂದ ಗೆಲುವಿನ ಅಲೆಯಲ್ಲಿ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment