ಮನೆಗೆ ನುಗ್ಗಿ ಶಿಕ್ಷಕಿಯ ಹ*ತ್ಯೆ.. ಕುತ್ತಿಗೆ ಕೊಯ್ದು ಪರಾರಿಯಾದ ಮೂವರು ಹಂತಕರು

author-image
AS Harshith
Updated On
ಮನೆಗೆ ನುಗ್ಗಿ ಶಿಕ್ಷಕಿಯ ಹ*ತ್ಯೆ.. ಕುತ್ತಿಗೆ ಕೊಯ್ದು ಪರಾರಿಯಾದ ಮೂವರು ಹಂತಕರು
Advertisment
  • 47 ವರ್ಷ ವಯಸ್ಸಿನ ಶಿಕ್ಷಕಿಯನ್ನು ಕೊಂದ ಹಂತಕರು
  • ಮನೆಯಲ್ಲಿ ಮಗಳೊಂದಿಗೆ ಇದ್ದಾದ ಮರ್ಡರ್ ಮಾಡಿದ್ರು
  • ತಾಯಿ ಬಳಿಕ ಮಗಳನ್ನು ಕೊಲೆ ಮಾಡಲು ಯತ್ನ.. ಆಮೇಲೇನಾಯ್ತು?

ಶಿಕ್ಷಕಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ನಗರದಲ್ಲಿ ನಡೆದಿದೆ. ಇಲ್ಲಿನ ಮುತ್ಯಾಲಪೇಟೆ ಬಡಾವಣೆಯಲ್ಲಿ ದುರ್ಘಟನೆ ಬೆಳಕಿಗೆ ಬಂದಿದೆ.

47 ವರ್ಷ ವಯಸ್ಸಿನ ಶಿಕ್ಷಕಿ ದಿವ್ಯಶ್ರೀ ಕೊಲೆಯಾದ ಶಿಕ್ಷಕಿ. ಮೂವರು ಹಂತಕರಿಂದ ದಿವ್ಯಶ್ರೀ ಕೊಲೆ ನಡೆದಿದೆ. ಮನೆಯಲ್ಲಿ ತನ್ನ ಮಗಳೊಂದಿಗೆ ಇದ್ದಾಗ ಕೊಲೆ ಮಾಡಲಾಗಿದೆ.

ಇದನ್ನೂ ಓದಿ: ಬೆಚ್ಚಿಬಿದ್ದ ಧಾರವಾಡ! 3 ವರ್ಷಗಳ ಬಳಿಕ ಮನೆಯಲ್ಲಿ ಸಿಕ್ತು ಮೃತದೇಹ.. ಕೊಳೆತು ಅಸ್ಥಿಪಂಜರವಾಗಿತ್ತು ದೇಹ!

ಹಂತಕರು ಶಿಕ್ಷಕಿಯನ್ನು ಕೊಲೆ ಮಾಡಿದ ಬಳಿಕ ಮಗಳನ್ನು ಕೊಲೆ ಮಾಡಲು ಯತ್ನಿಸಿದ್ದಾರೆ. ಆದರೆ ಈ ವೇಳೆ ತಪ್ಪಿಸಿಕೊಂಡು ಮಗಳು ಬಚಾವ್ ಆಗಿದ್ದಾಳೆ.

ಇದನ್ನೂ ಓದಿ: ವಾರೆವ್ಹಾ! 5 ಡೋರ್​​ನ ಥಾರ್​​ ರೋಕ್ಸ್​ ಪರಿಚಯಿಸಿದ ಮಹೀಂದ್ರಾ.. ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?

ಮೃತ ಶಿಕ್ಷಕಿ ಉದ್ಯಮಿ ಪದ್ಮನಾಭ್​ರವರ ಪತ್ನಿಯಾಗಿದ್ದು, ಮುಳಬಾಗಿಲು ತಾಲ್ಲೂಕು ಮುಡಿಯನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ಪ್ರೀತಿಗೆ ಕುಟುಂಬ ಒಪ್ಪಲಿಲ್ಲ ಎಂದು ಯುವಕ ಸಾವು; ವಿಷಯ ತಿಳಿದು ಯುವತಿ ದುಡುಕಿನ ನಿರ್ಧಾರ

ಸ್ಥಳಕ್ಕೆ ಕೋಲಾರ ಎಸ್ಪಿ‌ ನಿಖಿಲ್.ಬಿ, ಮುಳಬಾಗಿಲು ನಗರ ಪೊಲೀಸರು ಮತ್ತು ಶಾಸಕ ಸಮೃದ್ದಿ ಮಂಜುನಾಥ್ ಭೇಟಿ ನೀಡಿದ್ದಾರೆ. ಎಫ್.ಎಸ್.ಎಲ್‌ ಹಾಗೂ ಶ್ವಾನ ದಳದ ಸಿಬ್ಬಂದಿಯೂ ಪರಿಶೀಲನೆ ಮಾಡಿದ್ದಾರೆ. ಸದ್ಯ ಶಿಕ್ಷಕಿ ಕೊಲೆಯಿಂದ  ಮುಳಬಾಗಿಲು ನಗರದ ಜನರು ಬೆಚ್ಚಿ ಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment