ವಿಶ್ವಕಪ್​​​ ದೆಹಲಿಗೆ ಬರ್ತಿದ್ದಂತೆ ಮೊದಲ ವಿಡಿಯೋ ಹಂಚಿಕೊಂಡ ಬಿಸಿಸಿಐ.. ಆಟಗಾರರು ಮಾಡಿದ್ದೇನು ಗೊತ್ತಾ..?

author-image
Ganesh
Updated On
ವಿಶ್ವಕಪ್​​​ ದೆಹಲಿಗೆ ಬರ್ತಿದ್ದಂತೆ ಮೊದಲ ವಿಡಿಯೋ ಹಂಚಿಕೊಂಡ ಬಿಸಿಸಿಐ.. ಆಟಗಾರರು ಮಾಡಿದ್ದೇನು ಗೊತ್ತಾ..?
Advertisment
  • ವಿಶ್ವಕಪ್ ಗೆದ್ದುಕೊಂಡು ತಾಯ್ನಾಡಿಗೆ ಬಂದ ಆಟಗಾರರು
  • ಚಂಡಮಾರುತದಿಂದ ಬಾರ್ಬಡೊಸ್​​ನಲ್ಲಿಯೇ ಇದ್ದ ಆಟಗಾರರು
  • ಬೆಳಗ್ಗೆ 6 ಗಂಟೆಗೆ ರೋಹಿತ್​ ಅಂಡ್ ಟೀಮ್​​ ದೆಹಲಿಗೆ ಬಂದಿದೆ

ಟಿ20 ವಿಶ್ವಕಪ್​ ಗೆದ್ದು ಚರಿತ್ರೆ ಸೃಷ್ಟಿಸಿದ ಟೀಮ್ ಇಂಡಿಯಾ ಆಟಗಾರರು ತಾಯ್ನಾಡಿಗೆ ಬಂದಿದ್ದಾರೆ. ವಿಶೇಷ ವಿಮಾನದಲ್ಲಿ ದೆಹಲಿಗೆ ಬಂದಿಳಿದ ರೋಹಿತ್​ ಬಳಗವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ.

ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಬಿಸಿಸಿಐ ಆಟಗಾರರ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಆ ವಿಡಿಯೋದಲ್ಲಿ ಆಟಗಾರರು ಕಪ್ ಹಿಡಿದು ಸಂಭ್ರಮಿಸ್ತಿರೋ ದೃಶ್ಯಗಳಿವೆ. ಎಲ್ಲಾ ಆಟಗಾರರು ಖುಷಿಯಿಂದ ಕಪ್ ಎತ್ತಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡಿರುವ ಬಿಸಿಸಿಐ, ಕಪ್ ಮನೆಗೆ ಬಂದಾಯ್ತು ಎಂದು ಬರೆದುಕೊಂಡಿದೆ.

ಇದನ್ನೂ ಓದಿ:ದ್ರಾವಿಡ್ ನಿವೃತ್ತಿ, ಗಂಭೀರ್ ಬಗ್ಗೆ ಮಾಹಿತಿ ಇಲ್ಲ.. ಜಿಂಬಾಬ್ವೆ ಪ್ರವಾಸದಲ್ಲಿರುವ ಕೋಚ್ ಯಾರು?

publive-image

ಬೆರಿಲ್​ ಚಂಡಮಾರುತದ ಪರಿಣಾಮ ಕಳೆದ ಮೂರು ದಿನಗಳಿಂದ ಟೀಂ ಇಂಡಿಯಾ ವೆಸ್ಟ್ ​ಇಂಡೀಸ್​​ನ ಬಾರ್ಬಡೊಸ್​ನಲ್ಲಿ ಉಳಿದುಕೊಂಡಿತ್ತು. ಬಿಸಿಸಿಐ ವಿಶೇಷ ಮುತುವರ್ಜಿ ವಹಿಸಿ ಚಾರ್ಟರ್ಡ್​ ಫ್ಲೈಟ್​ ಮೂಲಕ ಆಟಗಾರರನ್ನ ದೇಶಕ್ಕೆ ಕರೆತಂದಿದೆ. ಇಂದು ಬೆಳಗ್ಗೆ 6 ಗಂಟೆಗೆ ರೋಹಿತ್​ ಅಂಡ್ ಟೀಮ್​​ ದೆಹಲಿಗೆ ಬಂದಿಳಿದಿದೆ. ಜೂನ್ 29 ರಂದು ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಕಪ್​​ಗೆ ಗೆದ್ದುಕೊಂಡಿದೆ.

ಇದನ್ನೂ ಓದಿ:ಕ್ರೈಂ ಬ್ರ್ಯಾಂಚ್ ಎಎಸ್​ಐ ಮೇಲೆ ಗುಂಡು ಹಾರಿಸಿ ಬರ್ಬರ ಹತ್ಯೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment