/newsfirstlive-kannada/media/post_attachments/wp-content/uploads/2023/10/Kohli_Rohit_123.jpg)
ನ್ಯೂಯಾರ್ಕ್​​ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡದ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಜೂನ್​​ 9ನೇ ತಾರೀಕಿನಂದು ಪಾಕ್​​ ವಿರುದ್ಧ ನಡೆಯಲಿರೋ ರೋಚಕ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೆಣಸಲಿದೆ. ಈ ಬಗ್ಗೆ ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತಾಡಿದ್ದಾರೆ.
ನಾವು ಐರ್ಲೆಂಡ್​ ವಿರುದ್ಧ ಗೆದ್ದಿದ್ದೇವೆ. ಆದರೆ, ಇದು ಕೇವಲ 5 ತಿಂಗಳ ಹಳೆ ಪಿಚ್​​. ಹಾಗಾಗಿ ನಮಗೆ ಇನ್ನೂ ಪಿಚ್​ ಕಂಡೀಷನ್ಸ್​ ಇನ್ನೂ ಅರ್ಥ ಆಗಿಲ್ಲ. ಬ್ಯಾಟಿಂಗ್​ ಮಾಡುವಾಗಲೂ ವಿಕೆಟ್​ ಯಾವಾಗ ಬೇಕಾದ್ರೂ ಬೀಳಬಹುದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೂ ನಾವು ನೋಡಿಕೊಂಡು ಆಡಬೇಕು ಎಂದರು.
ಪಾಕ್​ ವಿರುದ್ಧ ಪಂದ್ಯದಲ್ಲೂ ಪರಿಸ್ಥಿತಿಗೆ ಅನುಗುಣವಾಗಿ ಪ್ಲಾನ್​ ಮಾಡುತ್ತೇವೆ. ನಮ್ಮ ಸ್ಟ್ರಾಟಜಿ ನಮಗಿದೆ. ಆದರೆ, ಸಂದರ್ಭ ನೋಡಿಕೊಂಡು ಪ್ಲಾನ್​ ಮಾಡೋದು ಒಳ್ಳೆಯದು. ಪಾಕ್​​, ಭಾರತ ನಡುವಿನ ಪಂದ್ಯ ರೋಚಕವಾಗಿ ಇರಲಿದೆ. ಪಂದ್ಯ ಗೆಲುವಿಗೆ ತಂಡದ ಎಲ್ಲಾ ಆಟಗಾರರ ಕೊಡುಗೆ ಅಗತ್ಯ. ಬ್ಯಾಲೆನ್ಸ್​ ಟೀಮ್​​ ಆಯ್ಕೆ ಮಾಡಿಕೊಂಡಿದ್ದೇವೆ. ಯಾವ ರೀತಿ ಶಾಟ್ಸ್​ ಆಡಬೇಕು ಎಂದು ನೋಡಿಕೊಂಡು ಆಡುತ್ತೇವೆ. ಪಾಕ್ ವೇಗಿಗಳನ್ನ ಕೊಹ್ಲಿ ನೋಡ್ಕೊಳ್ತಾರೆ ಎಂದರು.
ಇದನ್ನೂ ಓದಿ:‘ಏನು ಅರ್ಥವೇ ಆಗ್ತಿಲ್ಲ’- ಗೆದ್ರೂ ಅಸಮಾಧಾನ ಹೊರಹಾಕಿದ ಕ್ಯಾಪ್ಟನ್​ ರೋಹಿತ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us