newsfirstkannada.com

ಪಾಕ್​ ವಿರುದ್ಧ ರೋಚಕ ಪಂದ್ಯ.. ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ರೋಹಿತ್​ ಶರ್ಮಾ!

Share :

Published June 9, 2024 at 6:41pm

    ಇಂದು ಟೀಮ್​ ಇಂಡಿಯಾ, ಪಾಕ್​ ಮಧ್ಯೆ ಮೆಗಾ ಹೈವೋಲ್ಟೇಜ್​ ಪಂದ್ಯ

    ಪಾಕ್ ತಂಡದ​ ವಿರುದ್ಧ ಹೇಗಾದ್ರೂ ಗೆಲ್ಲಲೇಬೇಕು ಎಂದು ಭಾರತ ಜಿದ್ದು

    ರೋಚಕ ಪಂದ್ಯಕ್ಕೆ ಮುನ್ನ ಟೀಮ್​ ಇಂಡಿಯಾಗೆ ಕೈ ಕೊಟ್ಟ ಸ್ಟಾರ್​​ ಪ್ಲೇಯರ್​​​

ಇಂದು ನಡೆಯಲಿರೋ 2024ರ ಟಿ20 ವಿಶ್ವಕಪ್​ ಮೆಗಾ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್​ ಇಂಡಿಯಾ, ಪಾಕ್​ ತಂಡಗಳು ಮುಖಾಮುಖಿ ಆಗುತ್ತಿವೆ. ನಸೌ ಕೌಂಟಿ ಇಂಟರ್‌ ನ್ಯಾಷನಲ್‌ ಕ್ರೀಡಂಗಣದಲ್ಲಿ ಈ ರೋಚಕ ಪಂದ್ಯ ನಡೆಯಲಿದ್ದು, ಮ್ಯಾಚ್​ ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಮಧ್ಯೆ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕಾದಿದೆ.

ಯೆಸ್​​, ಪಾಕ್​ ವಿರುದ್ಧ ಪಂದ್ಯಕ್ಕೆ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಲಭ್ಯರಾಗಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಐರ್ಲೆಂಡ್ ವಿರುದ್ಧ ಪಂದ್ಯದ ವೇಳೆ ರೋಹಿತ್ ಶರ್ಮಾ ಅವರ ಕೈಗೆ ಬೌನ್ಸರ್ ಬಡಿದು ತೀವ್ರವಾಗಿ ಗಾಯಗೊಂಡಿದ್ದಾರೆ. ಹಾಗಾಗಿ ಪಾಕ್​ ವಿರುದ್ಧ ಆಡೋದು ಕಷ್ಟ ಎಂದು ಹೇಳಲಾಗುತ್ತಿದೆ.

ಐರ್ಲೆಂಡ್​ ವಿರುದ್ಧ ಸ್ಟಾರ್ ಬ್ಯಾಟರ್ ರೋಹಿತ್ ಕೇವಲ 37 ಎಸೆತಗಳಲ್ಲಿ 4 ಫೋರ್​ ಮತ್ತು 3 ಸಿಕ್ಸರ್​​ಗಳ ಸಮೇತ ಬಿರುಸಿನ ಬ್ಯಾಟಿಂಗ್​ ಮಾಡಿ 52 ರನ್​ ಸಿಡಿಸಿದ್ರು. ಆದರೆ, ಮಾರ್ಕ್ ಅಡೇರ್ ಬೌಲಿಂಗ್​ನಲ್ಲಿ ಕೆಟ್ಟ ಬೌನ್ಸರ್​​ ಬಡಿದು ರೋಹಿತ್​ ಗಾಯಗೊಂಡು ರಿಟೈರ್​ ಆಗಿದ್ರು.

ಇನ್ನು, ಒಂದು ವೇಳೆ ರೋಹಿತ್​ ಆಡಿದ್ರೂ ಬ್ಯಾಟರ್​ ಆಗಿ ಕಣಕ್ಕಿಳಿಯಲಿದ್ದಾರೆ. ರೋಹಿತ್​ ಕೈಯಲ್ಲಿ ಫೀಲ್ಡಿಂಗ್​ ಮಾಡೋದು ಕಷ್ಟ ಎಂದು ಹೇಳಲಾಗುತ್ತಿದೆ. ರೋಹಿತ್​ ಶರ್ಮಾ ಕೇವಲ ಬ್ಯಾಟರ್​ ಆಗಿ ಕಣಕ್ಕಿಳಿದ್ರೆ, ಹಾರ್ದಿಕ್​ ಪಾಂಡ್ಯ ಕ್ಯಾಪ್ಟನ್​ ಆಗಲಿದ್ದಾರೆ.

ಇದನ್ನೂ ಓದಿ: ಭಾರತ VS ಪಾಕ್​​.. ಕೊಹ್ಲಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಅಂಬಾಟಿ ರಾಯುಡು!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪಾಕ್​ ವಿರುದ್ಧ ರೋಚಕ ಪಂದ್ಯ.. ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ರೋಹಿತ್​ ಶರ್ಮಾ!

https://newsfirstlive.com/wp-content/uploads/2024/06/Rohit-Sharma-speaking.jpg

Load More