ಕ್ರಿಕೆಟ್ನಿಂದ ಮಾತ್ರವಲ್ಲ, ಜಾಹೀರಾತುಗಳಿಂದ ಹಣ ಗಳಿಕೆ
ವರ್ಷಕ್ಕೆ ಎಷ್ಟು ಕೋಟಿ ರೂಪಾಯಿ ಜೇಬಿಗಿಳಿಸ್ತಾರೆ ಕ್ಯಾಪ್ಟನ್?
ವರ್ಷದಿಂದ ವರ್ಷಕ್ಕೆ ಆಕಾಶಕ್ಕೇರ್ತಿದೆ ಮುಂಬೈಕರ್ ಸಂಪತ್ತು
ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್ನ ಹಿಟ್ಮ್ಯಾನ್. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಸಾಧ್ಯವಾದ ದಾಖಲೆಗಳನ್ನ ಬರೆದಿರುವ ಮಹಾವೀರ. ಲೆಕ್ಕ ವಿಲ್ಲದಷ್ಟು ದಾಖಲೆ, ಅಸಾಧ್ಯವಾದುದನ್ನ ಸಾಧಿಸಿರುವ ರೋಹಿತ್, ಖ್ಯಾತಿ ವಿಶ್ವದಗಲಕ್ಕೂ ಹರಡಿದೆ. ಇದ್ರ ಜೊತೆಗೆ ಮುಂಬೈಕರ್ ಗಳಿಕೆಯು ವರ್ಷದಿಂದ ವರ್ಷಕ್ಕೆ ಆಕಾಶಕ್ಕೇರಿದೆ. ಅಷ್ಟಕ್ಕೂ ರೋಹಿತ್ರ ಒಟ್ಟು ಆಸ್ತಿ ಎಷ್ಟು?
ರೋಹಿತ್ ಶರ್ಮಾ.. ಕ್ರಿಕೆಟ್ ಜಗತ್ತಿನ ಒನ್ ಆ್ಯಂಡ್ ಒನ್ಲಿ ಹಿಟ್ಮ್ಯಾನ್.. ಮಾಡ್ರನ್ ಡೇ ಕ್ರಿಕೆಟ್ನ ಲೆಂಜೆಂಡರಿ ಕ್ರಿಕೆಟರ್.. ವೈಟ್ ಬಾಲ್ ಕ್ರಿಕೆಟ್ನ ಬೆಸ್ಟ್ ಸ್ಟ್ರೈಕರ್ ಆಗಿರೋ ರೋಹಿತ್, ವಿಶ್ವ ಕ್ರಿಕೆಟ್ನಲ್ಲಿ ಮಾಡಿರೋ ಮೋಡಿ ನಿಜಕ್ಕೂ ಅದ್ಭುತ.
ಡಬಲ್ ಸೆಂಚುರಿಗಳ ಸಾಮ್ರಾಟನಾಗಿ ಪರಿಚಿತನಾಗಿರುವ ರೋಹಿತ್, ಕ್ರಿಕೆಟ್ ಲೋಕದ ಮೋಸ್ಟ್ ಡೇಂಜರಸ್ ಬ್ಯಾಟ್ಸ್ಮನ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಸಕ್ಸಸ್ಫುಲ್ ಓಪನರ್ ಆಗಿ ನಾಯಕನಾಗಿ ಗುರುತಿಸಿಕೊಂಡಿರುವ ರೋಹಿತ್ ಖ್ಯಾತಿ ವಿಶ್ವದಲ್ಲೆಲ್ಲ ಹರಡಿದೆ. ಐಪಿಎಲ್ನಲ್ಲಿ 5 ಬಾರಿ ಮುಂಬೈ ಇಂಡಿಯನ್ಸ್ಗೆ ಟ್ರೋಫಿ ಗೆದ್ದು ಕೊಟ್ಟಿರುವ ಹಿಟ್ಮ್ಯಾನ್, ಈಗ ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಆಟಗಾರರಲ್ಲಿ ಒಬ್ಬರು.
ಎಷ್ಟು ಕೋಟಿ ಒಡೆಯ ಟೀಮ್ ಇಂಡಿಯಾ ನಾಯಕ..?
ಹಿಟ್ಮ್ಯಾನ್ ರೋಹಿತ್ ಓರ್ವ ಸಕ್ಸಸ್ಫುಲ್ ಕ್ಯಾಪ್ಟನ್ ಮಾತ್ರವಲ್ಲ. ಟೀಮ್ ಇಂಡಿಯಾದ ಶ್ರೀಮಂತ ಕ್ರಿಕೆಟರ್ ಕೂಡ. ವಿರಾಟ್ ಕೊಹ್ಲಿ ಹಾಗೂ ಧೋನಿಯ ಆಸ್ತಿ ಮೌಲ್ಯ 1,000 ಕೋಟಿಗೂ ಅಧಿಕವಾಗಿದೆ. ಮಹೇಂದ್ರ ಸಿಂಗ್ ಧೋನಿ ಹಾಗೂ ಕಿಂಗ್ ಕೊಹ್ಲಿಗೆ ಹೋಲಿಸಿದ್ರೆ. ರೋಹಿತ್ ಶರ್ಮಾ ಗಳಿಕೆ, ಸರಿ ಸುಮಾರು 5 ಪಟ್ಟು ಕಡಿಮೆ. ಸದ್ಯದ ಮಾಹಿತಿ ಪ್ರಕಾರ ರೋಹಿತ್ ಒಟ್ಟಾರೆ ಆಸ್ತಿ ಮೌಲ್ಯ ಸುಮಾರು 214 ಕೋಟಿ ರೂಪಾಯಿ ಆಗಿದೆ.
ಬ್ಯುಸಿನೆಸ್, ಎಂಡೋರ್ಸ್ಮೆಂಟ್ಗಳಿಂದ ಕೋಟಿ ಕೋಟಿ ಹಣ ರೋಹಿತ್ ಖಜಾನೆ ಸೇರುತ್ತೆ. ಒಂದೊಂದು ಕ್ರಿಕೆಟ್ ಪಂದ್ಯದಿಂದ ಲಕ್ಷ-ಲಕ್ಷ ಹಣಗಳಿಸೋ ಹಿಟ್ಮ್ಯಾನ್, ಕ್ರಿಕೆಟ್ ಮೂಲದಿಂದ ವಾರ್ಷಿಕವಾಗಿ ಕೋಟಿ – ಕೋಟಿ ಹಣವನ್ನ ಗಳಿಸ್ತಾರೆ.
ಕ್ರಿಕೆಟ್ ಮೂಲದ ಆದಾಯ ಎಷ್ಟು..?
ಬಿಸಿಸಿಐ ಕಾಂಟ್ರಾಕ್ಟ್ನಲ್ಲಿ ಎ+ ಗ್ರೇಡ್ನಲ್ಲಿರುವ ರೋಹಿತ್, ವಾರ್ಷಿಕ 7 ಕೋಟಿ ಸ್ಯಾಲರಿ ಜೇಬಿಗೆ ಇಳಿಸಿದ್ರೆ, ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ, ಏಕದಿನ ಪಂದ್ಯಕ್ಕೆ 6 ಲಕ್ಷ ಹಾಗೂ ಟಿ20 ಪಂದ್ಯಕ್ಕೆ 3 ಲಕ್ಷ ಪಡೆಯುತ್ತಾರೆ. ಇನ್ನು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ರೋಹಿತ್, ಪ್ರತಿ ಆವೃತ್ತಿಗೆ 16 ಕೋಟಿ ರೂಪಾಯಿ ಜೇಬಿಗಿಳಿಸುತ್ತಾರೆ. ಒಟ್ಟಾರೆ ಕ್ರಿಕೆಟ್ನಿಂದ ವಾರ್ಷಿಕ 30 ಕೋಟಿ ಗಳಿಸುತ್ತಿದ್ದಾರೆ.
ಕ್ರಿಕೆಟ್ನಿಂದ ಮಾತ್ರವೇ ಅಲ್ಲ, ಕ್ರಿಕೆಟ್ ಹೊರತಾಗಿಯೂ ಹಿಟ್ಮ್ಯಾನ್ ಕೋಟಿ ಕೋಟಿ ಗಳಿಸುತ್ತಾರೆ. ಬರೋಬ್ಬರಿ 28 ಬ್ರಾಂಡ್ಗಳ ರಾಯಭಾರಿಯಾಗಿರುವ ರೋಹಿತ್, ಜಾಹೀರಾತುಗಳಿಂದ ವಾರ್ಷಿಕ ಗಳಿಕೆ ಕೋಟಿ ಲೆಕ್ಕದಲ್ಲೆ ಇದೆ. ಅಡಿಡಾಸ್, HUBLOT, CEAT, Go IBIBO ಸೇರಿದಂತೆ ಹಲವು ಪ್ರತಿಷ್ಟಿತ ಕಂಪನಿಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.
ರೋಹಿತ್ ಹೂಡಿಕೆ ಎಲ್ಲೆಲ್ಲಿ..?
ಇನ್ನು, ಸ್ವತಃ ಬ್ಯುಸಿನೆಸ್ ಮ್ಯಾನ್ ಆಗಿರುವ ರೋಹಿತ್, ಹಲವು ಮೂಲಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಮುಂಬೈನ ವೊರ್ಲಿಯಲ್ಲಿ 30 ಕೋಟಿ ರೂ. ಮೌಲ್ಯದ 4BHK ಅಪಾರ್ಟ್ಮೆಂಟ್ವೊಂದಿರುವ ರೋಹಿತ್, ಈ ಹಿಂದೆ ಲೋನಾವಾಲದಲ್ಲಿ 5 ಕೋಟಿ ಮೌಲ್ಯದ ಐಷಾರಾಮಿ ಮನೆಯನ್ನ ಮಾರಾಟ ಮಾಡಿದ್ದಾರೆ. ಇದಿಷ್ಟೇ ಅಲ್ಲ.! ರಾಪಿಡ್ಬೊಟಿಕ್ಸ್ ಹಾಗೂ ವೆರೊಟ್ಸ್ ವೆಲ್ನೆಸ್ ಸೊಲ್ಯೂಷನ್ಸ್ ಎಂಬ ಹೆಲ್ತ್ಕೇರ್ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ.
ಒಂದು ವರ್ಷಕ್ಕೆ ಆನ್ಫೀಲ್ಡ್ ಹಾಗೂ ಆಫ್ ಫೀಲ್ಡ್ನಿಂದ ಕೋಟಿ ಕೋಟಿಗಳಿಸೋ ರೋಹಿತ್ ಜೀವನ ಕೂಡ ಭಾರೀ ಐಷಾರಾಮಿಯಾಗಿದೆ. ಲ್ಯಾಂಬೋರ್ಗಿನಿ ಉರಸ್, ಮರ್ಸಿಡಿಸ್ ಬೆಂಜ್ GLS 350 d, A BMW X3 ನಂತಹ ಐಷಾರಾಮಿ ಕಾರುಗಳ ಜೊತೆ ಮಾರುತಿ ಸುಜುಕಿಯ 2 ಕಾರುಗಳಿಗೂ ಹಿಟ್ಮ್ಯಾನ್ ಮಾಲೀಕರಾಗಿದ್ದಾರೆ.
ಬ್ಯಾಟಲ್ ಫೀಲ್ಡ್ನಲ್ಲಿ ಎದುರಾಳಿ ಪಡೆಯನ್ನ ಸಿಂಹ ಸ್ವಪ್ನದಂತೆ ಕಾಡೋ ರೋಹಿತ್ ಶರ್ಮಾ, ಅಸಾಧ್ಯವಾದ ಸಾಧನೆ ಮಾಡಿದ್ದಾರೆ. ಐಪಿಎಲ್ ಅಖಾಡದಲ್ಲಿ ಸಕ್ಸಸ್ಫುಲ್ ಕ್ಯಾಪ್ಟನ್ ಅನ್ನೋ ಪಟ್ಟ ದಕ್ಕಿಸಿಕೊಂಡಿದ್ದಾರೆ. ಆನ್ಫೀಲ್ಡ್ನಲ್ಲಿ ಕಂಡ ಯಶಸ್ಸಿಗೆ ಸಿಕ್ಕ ರಿವಾರ್ಡೇ ಈ ದಾಖಲೆಯ ಆದಾಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ