ಇಂಡೋ-ಬಾಂಗ್ಲಾ ಟೆಸ್ಟ್ ಕದನಕ್ಕೆ ಕೌಂಟ್ಡೌನ್
ಬಾಂಗ್ಲಾ ಬೇಟೆಗೆ ಇಂಡಿಯನ್ ಟೈಗರ್ಸ್ ಸನ್ನದ್ಧ
ಗೆಲ್ಲಲು ಕ್ಯಾಚಸ್ ವಿನ್ ಮ್ಯಾಚಸ್ ಮಂತ್ರ ಮೊರೆ
ಕ್ರಿಕೆಟ್ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಅನ್ನೋ ಮಾತಿದೆ. ಬಾಂಗ್ಲಾದೇಶ ಸಂಹಾರಕ್ಕೆ ಟೀಮ್ ಇಂಡಿಯಾ ಇದೇ ಮಂತ್ರ ಜಪಿಸಿದೆ. ಫೀಲ್ಡಿಂಗ್ ಕೋಚ್ ಮಾರ್ಗದರ್ಶನದಲ್ಲಿ ರೋಹಿತ್ ಬಾಯ್ಸ್ ಫೀಲ್ಡಿಂಗ್ನಲ್ಲಿ ಇನ್ನಿಲ್ಲದಂತೆ ಬೆವರು ಹರಿಸಿದ್ದಾರೆ.
ನಾಳೆಯಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಟೆಸ್ಟ್ ವಾರ್ ಆರಂಭಗೊಳ್ಳಲಿದೆ. ಚೆಪಾಕ್ ಬ್ಯಾಟಲ್ ಗೆಲ್ಲಲು ಎರಡು ತಂಡಗಳು ಇನ್ನಿಲ್ಲದ ತಂತ್ರ-ಪ್ರತಿತಂತ್ರ ರೂಪಿಸಿವೆ. ಚೆನ್ನೈನಲ್ಲಿ ಆಯೋಜಿಸಿದ್ದ 4 ದಿನಗಳ ರೋಹಿತ್ ಪಡೆ ಕ್ಯಾಂಪ್ ಮುಗಿದಿದೆ. ಮೊದಲು ಮೂರು ದಿನ ಬ್ಯಾಟಿಂಗ್ ಹಾಗೂ ಬೌಲಿಂಗ್ ಅಭ್ಯಾಸ ನಡೆಸಿದ್ದ ಆಟಗಾರರು ಫೈನಲ್ ಡೇ ಫೀಲ್ಡಿಂಗ್ ಕಡೆ ಹೆಚ್ಚು ಗಮನಹರಿಸಿದ್ರು.
ಇದನ್ನೂ ಓದಿ:ಬೆಳಗಾವಿ ಗಣೇಶ ಉತ್ಸವ ಮೆರವಣಿಗೆ ವೇಳೆ ಅನಾಹುತ; ಓರ್ವ ಸಾವು
ಕ್ಯಾಚಸ್ ವಿನ್ ಮ್ಯಾಚಸ್
ಪಾಕ್ ಮಣಿಸಿ ಭಾರತಕ್ಕೆ ಆಗಮಿಸಿರೋ ಬಾಂಗ್ಲಾದೇಶವನ್ನ ಮಣಿಸಲು ಬರೀ ಬೌಲಿಂಗ್ ಹಾಗೂ ಬ್ಯಾಟಿಂಗ್ನಿಂದಷ್ಟೇ ಸಾಧ್ಯವಿಲ್ಲ. ಫೀಲ್ಡಿಂಗ್ ಕೂಡ ಬಹುಮುಖ್ಯ. ಇದನ್ನರಿತ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಟೀಮ್ ಇಂಡಿಯಾ ಆಟಗಾರರಿಗೆ ಚೆಪಾಕ್ ಮೈದಾನದಲ್ಲಿ ಬೆವರಿಳಿಸಿದ್ದಾರೆ. ಸುದೀರ್ಘ ಸಮಯ ಫೀಲ್ಡಿಂಗ್ ಡ್ರಿಲ್ ನಡೆಸಿ, ಎದುರಾಳಿ ಬಾಂಗ್ಲಾಗೆ ವಿ ಆರ್ ರೆಡಿ ಅನ್ನೋ ಸಂದೇಶ ರವಾನಿಸಿದ್ದಾರೆ.
ಟಿ.ದಿಲೀಪ್ ಮಾರ್ಗದರ್ಶನ
ಚಾಣಾಕ್ಷ ಫೀಲ್ಡಿಂಗ್ ಮಾರ್ಗದರ್ಶನಕ್ಕೆ ಹೆಸರುವಾಸಿ ಟಿ ದಿಲೀಪ್, ಬಾಂಗ್ಲಾವನ್ನ ಮಟ್ಟಹಾಕಲು ಕಠಿಣ ಫೀಲ್ಡಿಂಗ್ ಡ್ರಿಲ್ ನಡೆಸಿದ್ರು. ಫೈನಲ್ಡೇ ಫೀಲ್ಡಿಂಗ್ ಅಭ್ಯಾಸವನ್ನ ಒಟ್ಟು ಸೆಗ್ಮೆಂಟ್ಗಳಾಗಿ ವಿಭಾಗಿಸಿದ್ರು. ಕಾಂಪಿಟೇಶನ್ ಡ್ರಿಲ್ನಲ್ಲಿ ಕೊಹ್ಲಿ ತಂಡ ಗೆದ್ದು ಬೀಗ್ತು. ಕಾಂಪಿಟೇಶನ್ ಡ್ರಿಲ್ ಬಳಿಕ ಆಟಗಾರರು ಫೀಲ್ಡಿಂಗ್ ಪ್ರಾಕ್ಟೀಸ್ ಅಖಾಡಕ್ಕೆ ಧುಮುಕಿದ್ರು. ಮೊದಲ ಬ್ಯಾಚ್ನಲ್ಲಿ ಬೌಲರ್ಸ್ ಹಾಗೂ ಆಲ್ರೌಂಡರ್ಸ್ ಔಟ್ ಫೀಲ್ಡ್ ಹಾಗೂ ಇನ್ ಫೀಲ್ಡ್ನಲ್ಲಿ ಕ್ಯಾಚಿಂಗ್ ಅಭ್ಯಾಸ ನಡೆಸಿದ್ರು.
ಇದನ್ನೂ ಓದಿ:ಕೊಹ್ಲಿ, ರೋಹಿತ್ರನ್ನ ಬಿಟ್ಟುಬಿಡಿ.. ಬಾಂಗ್ಲಾ ಟೆಸ್ಟ್ ಸರಣಿ ಈ ಆಟಗಾರರಿಗೆ ತುಂಬಾನೇ ಇಂಪಾರ್ಟೆಂಟ್!
ಬ್ಯಾಟ್ಸ್ಮನ್ಗಳಿಂದ ಸ್ಲಿಪ್ ಫೀಲ್ಡಿಂಗ್ ತಾಲೀಮು
ಬೌಲರ್ಸ್ ಹಾಗೂ ಆಲ್ರೌಂಡರ್ಸ್ ಫೀಲ್ಡಿಂಗ್ ಡ್ರಿಲ್ ತೆಗೆದುಕೊಂಡು ಬಳಿಕ ಟಿ ದಿಲೀಪ್ ಬ್ಯಾಟ್ಸ್ಮನ್ಗಳಿಗೆ ಬೆವರಿಳಿಸಿದ್ರು. ಸ್ಲಿಪ್ ಫೀಲ್ಡಿಂಗ್ನಲ್ಲಿ ಆಗುವ ಲೋಪ ಸರಿಪಡಿಸುವ ಉದ್ದೇಶದಿಂದ ಶಾರ್ಟ್ ಲೆಗ್ ಹಾಗೂ ಸಿಲ್ಲಿ ಪಾಯಿಂಟ್ನಲ್ಲಿ ಕ್ಯಾಚ್ ಪ್ರಾಕ್ಟೀಸ್ ಮಾಡಲಾಯ್ತು.
ಹಿಂದಿನ ಸರಣಿಗಳಲ್ಲಾದ ಫೀಲ್ಡಿಂಗ್ ಮಿಸ್ಟೇಕ್ಸ್ಗೆ ಮದ್ದು
ಚಾಂಪಿಯನ್ ಟೀಮ್ ಇಂಡಿಯಾದ ಟೆಸ್ಟ್ ಫೀಲ್ಡಿಂಗ್ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಎಸ್ಪೆಷಲಿ ಸ್ಲಿಪ್ ಫೀಲ್ಡಿಂಗ್ನಲ್ಲಿ ಸುಲಭ ಕ್ಯಾಚ್ಗಳನ್ನ ಕೈಚೆಲ್ಲಿತ್ತು. ಬಾಂಗ್ಲಾದೇಶ, ಶ್ರೀಲಂಕಾ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಎದುರಿನ ಸರಣಿಗಳಲ್ಲಿ ಭಾರತ ತಂಡದ ಫೀಲ್ಡಿಂಗ್ ವೀಕ್ನೆಸ್ ಬಟಾಬಯಲಾಗಿತ್ತು. ಇದರಿಂದ ಪಾಠ ಕಲಿತಿರೋ ಟೀಮ್ ಇಂಡಿಯಾ ಬಾಂಗ್ಲಾ ಸರಣಿಗೂ ಮುನ್ನ ಫೀಲ್ಡಿಂಗ್ ಕಡೆ ಹೆಚ್ಚು ಗಮನ ಹರಿಸಿದೆ. ಇದರ ಲಾಭವನ್ನ ರೋಹಿತ್ ಬಾಯ್ಸ್ ಪಡೆದುಕೊಳ್ಳಲಿ. ಕ್ಯಾಚಸ್ ವಿನ್ ಮ್ಯಾಚಸ್ ಮಂತ್ರ ಅನುಸರಿಸಿ ತವರಿನಲ್ಲಿ ಬಾಂಗ್ಲಾವನ್ನ ಬೇಟೆಯಾಡುವಂತಾಗಲಿ.
Intensity 🔛 point 😎🏃♂️
Fielding Coach T Dilip sums up #TeamIndia's competitive fielding drill 👌👌 – By @RajalArora #INDvBAN | @IDFCFIRSTBank pic.twitter.com/eKZEzDhj9A
— BCCI (@BCCI) September 16, 2024
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್