newsfirstkannada.com

×

ಕೊಹ್ಲಿ, ರೋಹಿತ್​ರನ್ನ ಬಿಟ್ಟುಬಿಡಿ.. ಬಾಂಗ್ಲಾ ಟೆಸ್ಟ್​ ಸರಣಿ ಈ ಆಟಗಾರರಿಗೆ ತುಂಬಾನೇ ಇಂಪಾರ್ಟೆಂಟ್!

Share :

Published September 18, 2024 at 11:10am

Update September 18, 2024 at 11:13am

    ಭಾರತ-ಬಾಂಗ್ಲಾ ಸರಣಿಗೆ ಕೌಂಟ್​ಡೌನ್ ಶುರು

    ಭಾರತಕ್ಕೆ ಈ ಟೆಸ್ಟ್ ಬಹು ಮುಖ್ಯ ಯಾಕೆ ಗೊತ್ತಾ?

    ಪಾಕ್​​ನಲ್ಲಿ ಬಾಂಗ್ಲಾ ಗೆಲುವು.. ಭಾರತಕ್ಕೆ ಎಚ್ಚರಿಕೆ?

ಭಾರತ, ಬಾಂಗ್ಲಾ ನಡುವಿನ ಟೆಸ್ಟ್​ ಸಿರೀಸ್​​ಗೆ ಕೌಂಟ್​ಡೌನ್ ಶುರುವಾಗಿದೆ. ನಾಳೆಯಿಂದ ಶುರುವಾಗಲಿರುವ ಈ ಟೆಸ್ಟ್​ ಸರಣಿ ಪ್ರವಾಸಿ ಬಾಂಗ್ಲಾದೇಶಕ್ಕಿಂತ ಟೀಮ್ ಇಂಡಿಯಾಗೆ ಮೋಸ್ಟ್ ಇಂಪಾರ್ಟೆಂಟ್​. ಟೀಮ್ ಇಂಡಿಯಾಗೆ ಮಾತ್ರವೇ ಅಲ್ಲ. ತಂಡದಲ್ಲಿನ ಪ್ರತಿ ಆಟಗಾರನ ಪಾಲಿಗೂ ಇದು​ ಮಹತ್ವದ ಸಿರೀಸ್.

ಟೀಮ್ ಇಂಡಿಯಾದ ಟೆಸ್ಟ್​ ಸೀಸನ್​ ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಒಂದು ತಿಂಗಳ ವಿಶ್ರಾಂತಿ ಬಳಿಕ ಅಖಾಡಕ್ಕಿಳಿಯುತ್ತಿರುವ ಹಿಟ್​ಮ್ಯಾನ್ ಪಡೆಗೆ ಬಾಂಗ್ಲಾ ಎದುರಿನ ಮೊದಲ ಸವಾಲೇ ಅಗ್ನಿಪರೀಕ್ಷೆಯ ಕಣವಾಗಿದೆ. ಈ ಒಂದು ಸರಣಿಯ ಸೋಲು-ಗೆಲುವಿನ ಮೇಲೆ ಟೀಮ್ ಇಂಡಿಯಾದ ಭವಿಷ್ಯ ಮಾತ್ರವಲ್ಲ. ಆಟಗಾರರ ಭವಿಷ್ಯವೂ ನಿಂತಿದೆ.

ಇದನ್ನೂ ಓದಿ:ಗಿಲ್ ಅಲ್ಲ.. ಈತ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಒಂದೇ ವರ್ಷಕ್ಕೆ ಸೂಪರ್ ಸ್ಟಾರ್..!

ಪಾಕ್​ ಎದುರಿನ ಬಾಂಗ್ಲಾ ಗೆಲುವು.. ಭಾರತಕ್ಕೆ ಎಚ್ಚರಿಕೆ..!
ಪಾಕಿಸ್ತಾನ​​ ತಂಡವನ್ನ ಪಾಕ್​​ ನೆಲದಲ್ಲೇ ಬಾಂಗ್ಲಾ ಸೋಲುಣಿಸಿದೆ. ಟೆಸ್ಟ್​ ಸರಣಿಯನ್ನ 2-0 ಅಂತರದಿಂದ ಕ್ಲೀನ್​ ಸ್ವೀಪ್ ಮಾಡಿರುವ ಬಾಂಗ್ಲಾ, ಐತಿಹಾಸಿಕ ಸಾಧನೆಯನ್ನ ಮಾಡಿದೆ. ಅವರದ್ದೇ ನೆಲದಲ್ಲಿ ಪಾಕ್​ ಪಡೆಯನ್ನ ಗಿರಗಿಟ್ಲೆ ಆಡಿಸಿರುವ ಬಾಂಗ್ಲಾ ಟೀಮ್, ಈಗ ಅದೇ ತಂಡದೊಂದಿಗೆ ಭಾರತದ ದಂಡಯಾತ್ರೆಗೆ ಆಗಮಿಸಿದೆ. ಅದೇ ಫೈಟಿಂಗ್ ಸ್ಪಿರಿಟ್​ ಅನ್ನೇ ಇಲ್ಲೂ ಮುಂದುವರಿಸುವ ಆತ್ಮವಿಶ್ವಾಸದಲ್ಲಿದೆ. ಇದು ಇಷ್ಟು ದಿನ ವಿಶ್ರಾಂತಿಯಲ್ಲಿದ್ದ ಟೀಮ್ ಇಂಡಿಯಾಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ಆಟಗಾರರ ಅದ್ಭುತ ಲಯ​..
ಭಾರತಕ್ಕಾಗಮಿಸುತ್ತಿರುವ ಬಾಂಗ್ಲಾ ಪಡೆ, ಅತಿಯಾದ ಆತ್ಮವಿಶ್ವಾಸದಿಂದ ಟೀಮ್ ಇಂಡಿಯಾವನ್ನ ಸೋಲಿಸುವ ಮಾತನಾಡ್ತಿಲ್ಲ. ತಂಡದಲ್ಲಿನ ಆಟಗಾರರು ಅದ್ಭುತ ಲಯದಲ್ಲಿರುವುದು ಒಂದು ಕಾರಣವಾಗಿದೆ. ಮುಶ್ಫಿಕರ್ ರಹೀಮ್, ಲಿಟನ್ ದಾಸ್, ಮೆಹದಿ ಹಸನ್, ಶದಮಾನ್ ಇಸ್ಲಾಂ ರೆಡ್​ ಹಾಟ್ ಫಾರ್ಮ್​ನಲ್ಲಿದ್ದಾರೆ. ಬೌಲರ್​ಗಳಾದ ಮೆಹದಿ ಹಸನ್ ಮಿರ್ಜಾ, ಹಸನ್ ಮೊಹಮ್ಮದ್, ನಹಿದ್ ರಾಣಾ, ಶಕೀಬ್ ಅಲ್ ಹಸನ್, ಟಸ್ಕಿನ್ ಅಹ್ಮದ್ ಕೂಡ ಒಳ್ಳೆ ರಿಧಮ್​ನಲ್ಲಿದ್ದಾರೆ. ಭಾರತದಲ್ಲೂ ಉತ್ತಮ ಪ್ರದರ್ಶನ ನೀಡೋ ಲೆಕ್ಕಚಾರದಲ್ಲಿರೋ ಇವ್ರು, ಬಿಗ್​ ಥ್ರೆಟ್ ಆಗಬಲ್ಲ ಸಾಧ್ಯತೆ ಇದೆ.

ಇದನ್ನೂ ಓದಿ:ಬಾಂಗ್ಲಾ ಬೇಟೆಗೆ ಚಕ್ರವ್ಯೂಹ; 5 ವರ್ಷದ ಹಿಂದಿನ ತಂತ್ರ ಪ್ರಯೋಗಿಸಲು ಪ್ಲಾನ್.. ಏನದು?

WTC ಅಂಕಪಟ್ಟಿಯಲ್ಲಿ ನಂ.1 ಸ್ಥಾನ ಭಾರತಕ್ಕೆ ಮುಖ್ಯ
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ದೃಷ್ಟಿಯಿಂದ ಟೀಮ್ ಇಂಡಿಯಾ, ಬಾಂಗ್ಲಾ ಎದುರಿನ 2 ಟೆಸ್ಟ್​ ಪಂದ್ಯಗಳನ್ನ ಗೆಲ್ಲಬೇಕಿದೆ. ಆ ಮೂಲಕ ನಂಬರ್​ 1 ಸ್ಥಾನವನ್ನು ಉಳಿಸಿಕೊಳ್ಳಬೇಕಿದೆ. ಬಾಂಗ್ಲಾ ಎದುರಿನ 2 ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ಟೀಮ್ ಇಂಡಿಯಾ, ತವರಿನಲ್ಲಿ ನ್ಯೂಜಿಲೆಂಡ್ ಎದುರು 3 ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ 5 ಟೆಸ್ಟ್ ಪಂದ್ಯಗಳ ಸವಾಲು ಎದುರಿಸಲಿದೆ. ಈ 10 ಟೆಸ್ಟ್​ಗಳ ಪೈಕಿ ಟೀಮ್ ಇಂಡಿಯಾ, ಕನಿಷ್ಠ ಐದಾರು ಟೆಸ್ಟ್​ ಗೆದ್ದರಷ್ಟೇ WTC ಅಂಕಪಟ್ಟಿಯಲ್ಲಿ ಸೇಫ್​. ಹೀಗಾಗಿ ಬಾಂಗ್ಲಾ ಎದುರು ಗೆಲುವು ಟೀಮ್ ಇಂಡಿಯಾಗೆ ಅನಿವಾರ್ಯ.

ರೆಡ್​ ಬಾಲ್​​ಗೆ ಹೊಂದಿಕೊಳ್ಳಬೇಕು ಹಿರಿಯ ಆಟಗಾರರು
ಟೀಮ್ ಇಂಡಿಯಾದ ಸೀನಿಯರ್ಸ್, ಟೆಸ್ಟ್​ ಕ್ರಿಕೆಟ್​​ಗೆ ಹೊಂದಿಕೊಳ್ಳಬೇಕಿದೆ. ಪ್ರಮುಖವಾಗಿ 9 ತಿಂಗಳಿಂದ ಟೆಸ್ಟ್​ ಕ್ರಿಕೆಟ್ ಆಡದ ವಿರಾಟ್, 20 ತಿಂಗಳ ಬಳಿಕ ಟೆಸ್ಟ್​ಗೆ ಮರಳಿರೋ ರಿಷಭ್​ ಪಂತ್, ಬ್ಯಾಟಿಂಗ್​​​ ಲಯ ಕಂಡುಕೊಳ್ಳಬೇಕಿದೆ. ನಾಯಕ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಶುಭ್​ಮನ್ ಗಿಲ್ ಕೂಡ ಟೆಸ್ಟ್ ಫಾರ್ಮೆಟ್​​ಗೆ ಹೊಂದಿಕೊಳ್ಳಬೇಕಿದೆ. ಅಕಸ್ಮಾತ್, ಇವ್ರು ಕೈಕೊಟ್ಟರೆ ಟೀಮ್ ಇಂಡಿಯಾದ WTC ಫೈನಲ್​ ಎಂಟ್ರಿ ಕನಸು ತೂಗುಯ್ಯಲೆಯಲ್ಲಿ ಸಿಲುಕಲಿದೆ.

ಇದನ್ನೂ ಓದಿ:ರೋಹಿತ್, ಕೊಹ್ಲಿಗೆ ಶಾಕ್ ಕೊಟ್ಟ ಬೂಮ್ ಬೂಮ್​ ಬೂಮ್ರಾ.. ಕಳಚಿ ಬಿತ್ತು ಫೇಮಸ್ ಟ್ಯಾಗ್​ಲೈನ್..!

ಟೆಸ್ಟ್​ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಯುವಕರಿಗೆ ಬೆಸ್ಟ್ ಚಾನ್ಸ್!
ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿರುವ ಸರ್ಫರಾಜ್ ಖಾನ್, ಧೃವ್ ಜುರೇಲ್​, ಆಕಾಶ್​ ದೀಪ್, ಯಶ್ ದಯಾಳ್​ ಪಾಲಿಗೆ ಇದು ವೃತ್ತಿ ಜೀವನಕ್ಕೆ ತಿರುವ ನೀಡುವ ಸರಣಿಯಾಗಿದೆ. ಸಿಕ್ಕ ಒಂದೇ ಒಂದೊಂದು ಅವಕಾಶವನ್ನು ಈ ನಾಲ್ವರು ಬಾಚಿಕೊಳ್ಳಬೇಕಿದೆ. ಆ ಮೂಲಕ ವೃತ್ತಿ ಜೀವನದ ಮೊದಲ ಯಶಸ್ಸಿನ ಮೆಟ್ಟಿಲುಗಳಾಗಿಸಿಕೊಳ್ಳಬೇಕಿದೆ. ಇಲ್ಲ ಇದೇ ಸರಣಿಯೇ ಈ ಯುವ ಆಟಗಾರರ ಪಾಲಿಗೆ ಕೊನೆ ಸರಣಿಯಾದರು ಅಚ್ಚರಿ ಇಲ್ಲ.

ಒಟ್ನಲ್ಲಿ! ಪಾಕ್​ ಎದುರು ಗೆದ್ದ ಆತ್ಮವಿಶ್ವಾಸದಲ್ಲಿರುವ ಬಾಂಗ್ಲಾ, ಅದೇ ರಿಸಲ್ಟ್ ಭಾರತದಲ್ಲಿ ರಿಪೀಟ್​ ಮಾಡೋ ಲೆಕ್ಕಾಚಾರದಲ್ಲಿದೆ. 45 ದಿನಗಳ ಬಳಿಕ ಅಖಾಡಕ್ಕಿಳಿಯುತ್ತಿರುವ ಟೀಮ್ ಇಂಡಿಯಾ ಮುಂದೆ ಹಲವು ಸವಾಲಿವೆ. ಆ ಸವಾಲನ್ನ ಗೆದ್ದು, ತವರಿನಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದಾಡುತ್ತಾ.? ಕಾದು ನೋಡಬೇಕಿದೆ.

ಇದನ್ನೂ ಓದಿ:ಬಾಂಗ್ಲಾಗೆ ಎಚ್ಚರಿಕೆ ಕೊಟ್ಟ ಕನ್ನಡಿಗ KL ರಾಹುಲ್; ಟೀಂ ಇಂಡಿಯಾ ಗೆಲುವಿನ ಸೂತ್ರ ಹೇಗಿದೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ, ರೋಹಿತ್​ರನ್ನ ಬಿಟ್ಟುಬಿಡಿ.. ಬಾಂಗ್ಲಾ ಟೆಸ್ಟ್​ ಸರಣಿ ಈ ಆಟಗಾರರಿಗೆ ತುಂಬಾನೇ ಇಂಪಾರ್ಟೆಂಟ್!

https://newsfirstlive.com/wp-content/uploads/2023/06/Test-Team-India_1.jpg

Load More