ಕ್ರಿಕೆಟ್ ಲೋಕದ ನೆಕ್ಸ್ಟ್ ಸೂಪರ್ ಸ್ಟಾರ್ ಯಾರು?
ಶುಭ್ಮನ್ ಗಿಲ್ ಹಿಂದಿಕ್ಕಿದ ಈ ಆಟಗಾರ ಯಾರು?
ಇವರ ಆಟಕ್ಕೆ ಆಸಿಸ್ ಆಟಗಾರರ ಉಘೇ ಉಘೇ..!
ವಿಶ್ವ ಕ್ರಿಕೆಟ್ ಲೋಕದ ನೆಕ್ಸ್ಟ್ ಸೂಪರ್ ಸ್ಟಾರ್ ಯಾರು? ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಡೆಬ್ಯೂ ಮಾಡಿದ ಹಲವು ಯಂಗ್ಸ್ಟರ್ಸ್ ಹೆಸರು ಸದ್ಯ ಈ ರೇಸ್ನಲ್ಲಿದೆ. ಇವರೆನ್ನೆಲ್ಲಾ ಟೀಮ್ ಇಂಡಿಯಾದ ಟೆರರ್ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಬೀಟ್ ಮಾಡಿದ್ದಾರೆ. ಜೈಸ್ವಾಲ್ ಬೆಂಕಿ ಆಟಕ್ಕೆ ವೈರಿ ತಂಡಗಳ ಆಟಗಾರರೇ ಬೆರಗಾಗಿದ್ದಾರೆ. ಟೀಮ್ ಇಂಡಿಯನ್ಸ್ ಅಂದ್ರೆ ಉರಿದು ಬೀಳೋ ಆಸಿಸ್ ಆಟಗಾರರು ಉಘೇ.. ಉಘೇ ಎಂದಿದ್ದಾರೆ.
ಯಶಸ್ವಿ ಜೈಸ್ವಾಲ್. ಟೀಮ್ ಇಂಡಿಯಾದ ನಯಾ ಸೆನ್ಸೇಷನ್.. ವಯಸ್ಸು ಇನ್ನೂ 23ರ ಗಡಿಯನ್ನ ದಾಟಿಲ್ಲ. ಟೀಮ್ ಇಂಡಿಯಾ ಪರ ಡೆಬ್ಯೂ ಮಾಡಿ ಜಸ್ಟ್ 1 ವರ್ಷ ಆಯ್ತಷ್ಟೇ. ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಈ ಒಂದು ವರ್ಷದ ಅವಧಿಯಲ್ಲಿ, ಜೈಸ್ವಾಲ್ ತನ್ನ ಟೆರರ್ ಬ್ಯಾಟಿಂಗ್ನಿಂದ ಸೃಷ್ಟಿಸಿರೋ ಹವಾ ಅಷ್ಟಿಷ್ಟಲ್ಲ..!
ಇದನ್ನೂ ಓದಿ:ಬಾಂಗ್ಲಾ ಬೇಟೆಗೆ ಚಕ್ರವ್ಯೂಹ; 5 ವರ್ಷದ ಹಿಂದಿನ ತಂತ್ರ ಪ್ರಯೋಗಿಸಲು ಪ್ಲಾನ್.. ಏನದು?
ಜೈಸ್ವಾಲ್ ಆಟಕ್ಕೆ ಕ್ರಿಕೆಟ್ ಲೋಕ ಕ್ಲೀನ್ಬೋಲ್ಡ್
ಕಳೆದ ವರ್ಷ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟು 9 ಟೆಸ್ಟ್, 23 ಟಿ20 ಪಂದ್ಯವನ್ನಾಡಿರೋ ಜೈಸ್ವಾಲ್, ಏಕದಿನ ಮಾದರಿಗೆ ಇನ್ನಷ್ಟೇ ಡೆಬ್ಯೂ ಮಾಡಬೇಕಿದೆ. ಆಡಿರೋ ಈ 32 ಅಂತಾರಾಷ್ಟ್ರೀಯ ಪಂದ್ಯಗಳಲ್ಲೇ ಜೈಸಾಲ್ ತನ್ನ ತಾಕತ್ತನ್ನ ನಿರೂಪಿಸಿದ್ದಾರೆ. ಕನ್ಸಿಸ್ಟೆಂಟ್ ಆಟದಿಂದ ಬೌಲರ್ಗಳ ಮೇಲೆ ದಂಡೆತ್ತಿ ಹೋಗಿ ರನ್ ಕೊಳ್ಳೆ ಹೊಡೆದಿರೋ ಜೈಸ್ವಾಲ್ ಇದೀಗ ವಿಶ್ವ ಕ್ರಿಕೆಟ್ನ ಸೂಪರ್ ಸ್ಟಾರ್ ಆಗುವತ್ತ ದಿಟ್ಟ ಹೆಜ್ಜೆ ಇಡ್ತಿದ್ದಾರೆ. ಅದೂ ಭಾರತ ಮತ್ತೊಬ್ಬ ಯಂಗ್ಸ್ಟರ್ ಶುಭ್ಮನ್ ಗಿಲ್ನ ಹಿಂದಿಕ್ಕಿ.
ಶುಭ್ಮನ್ ಗಿಲ್ – ಯಶಸ್ವಿ ಜೈಸ್ವಾಲ್ ನಡುವೆ ಜೈಸ್ವಾಲ್ ಹೆಸರನ್ನೇ ಆಸಿಸ್ ಆಟಗಾರರು ಆಯ್ಕೆ ಮಾಡಿರೋದ್ರಲ್ಲಿ ಉತ್ಪ್ರೇಕ್ಷೆ ಏನಿಲ್ಲ ಬಿಡಿ. ತಮ್ಮ ಟೆರರ್ ಬ್ಯಾಟಿಂಗ್ನಿಂದ ಜೈಸ್ವಾಲ್ ಮಾಡಿರೋ ಮೋಡಿ ಹಂಗಿದೆ.
9 ಟೆಸ್ಟ್, ಸಾವಿರ ರನ್, 2 ದ್ವಿಶತಕ, 1 ಶತಕ
ಟೆಸ್ಟ್ ಕ್ರಿಕೆಟ್ನಲ್ಲಿ ಯಶಸ್ವಿ ಜೈಸ್ವಾಲ್ ಮಾಡಿರೋ ಸಾಧನೆಯಿದು. ಆಡಿದ 9 ಟೆಸ್ಟ್ಗಳಲ್ಲಿ ಬೆಂಕಿ ಬ್ಯಾಟಿಂಗ್ ನಡೆಸಿರೋ ಜೈಸ್ವಾಲ್, ಬರೋಬ್ಬರಿ 68.53ರ ಸರಾಸರಿಯಲ್ಲಿ ರನ್ ಕೊಳ್ಳೆ ಹೊಡೆದಿದ್ದಾರೆ. 2 ಡಬಲ್ ಸೆಂಚುರಿ, 1 ಸೆಂಚುರಿ ಸಹಿತ ಬರೋಬ್ಬರಿ 1028 ರನ್ಗಳಿಸಿದ್ದಾರೆ. ಅಂದ್ಹಾಗೆ ಈ ಸಾವಿರ ರನ್ಗಳ ಪೈಕಿ 700 ರನ್ಗಳು ಬಂದಿರೋದು ಬಲಿಷ್ಟ ಬೌಲಿಂಗ್ ಅಟ್ಯಾಕ್, ಸಾಲಿಡ್ ಫೀಲ್ಡರ್ಗಳನ್ನ ಹೊಂದಿರೋ ಇಂಗ್ಲೆಂಡ್ ತಂಡದ ಎದುರು. ಜೈಸ್ವಾಲ್ ನೆಕ್ಸ್ಟ್ ಸೂಪರ್ ಸ್ಟಾರ್ ಅನ್ನೋದಕ್ಕೆ ಟೆಸ್ಟ್ನಲ್ಲಿ ಮಾಡಿರೋ ಈ ಸಾಧನೆಗಿಂತ ಬೇಕಾ?
ಇದನ್ನೂ ಓದಿ:ರೋಹಿತ್, ಕೊಹ್ಲಿಗೆ ಶಾಕ್ ಕೊಟ್ಟ ಬೂಮ್ ಬೂಮ್ ಬೂಮ್ರಾ.. ಕಳಚಿ ಬಿತ್ತು ಫೇಮಸ್ ಟ್ಯಾಗ್ಲೈನ್..!
23 T20.. 1 ಶತಕ.. 164.31ರ ಭಯಾನಕ ಸ್ಟ್ರೈಕ್ರೇಟ್
ರೆಡ್ ಬಾಲ್ ಕ್ರಿಕೆಟ್ನಲ್ಲಿ ಮಾತ್ರವಲ್ಲ, ವೈಟ್ಬಾಲ್ ಕ್ರಿಕೆಟ್ನಲ್ಲೂ ಜೈಸ್ವಾಲ್ ಬ್ಯಾಟ್ ಝಳಪಿಸಿದ್ದಾರೆ. ಆಡಿರೋ 23 ಟಿ20 ಪಂದ್ಯಗಳಲ್ಲಿ ಬೌಂಡರಿ-ಸಿಕ್ಸರ್ ಸಿಡಿಸಿ ಬೌಲರ್ಗಳ ಚಿಂದಿ ಉಡಾಯಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲೂ 1 ಶತಕ ಚಚ್ಚಿರೋ ಜೈಸ್ವಾಲ್, 5 ಹಾಫ್ ಸೆಂಚುರಿ ಸಹಿತ ಒಟ್ಟು 723 ರನ್ ಸಿಡಿಸಿದ್ದಾರೆ. ಜೈಸ್ವಾಲ್ ಬಿರುಗಾಳಿಯ ಬ್ಯಾಟಿಂಗ್ಗೆ 164.31ರ ಭಯಾನಕ ಸ್ಟ್ರೈಕ್ರೇಟ್ ಸಾಕ್ಷಿ.
ಹಿಟ್ಮ್ಯಾನ್ ರೋಹಿತ್ ಶರ್ಮಾಗೂ ಟಕ್ಕರ್
ರೋಹಿತ್ ಶರ್ಮಾ, ಸದ್ಯ ವಿಶ್ವ ಕ್ರಿಕೆಟ್ ಲೋಕದ ಸಿಕ್ಸರ್ ಕಿಂಗ್ ಎಂದೇ ಫೇಮಸ್. ಈ ಸಿಕ್ಸರ್ ಕಿಂಗ್ಗೂ ಯಶಸ್ವಿ ಜೈಸ್ವಾಲ್ ಟಕ್ಕರ್ ಕೊಟ್ಟಿದ್ದಾರೆ. ಕಳೆದ ವರ್ಷದಲ್ಲಿ ರೋಹಿತ್ ಶರ್ಮಾ 20 ಪಂದ್ಯವನ್ನಾಡಿ 30 ಸಿಕ್ಸರ್ ಸಿಡಿಸಿದ್ರೆ, ಜೈಸ್ವಾಲ್ ಆಡಿರೋ 14 ಪಂದ್ಯಗಳಲ್ಲೇ 42 ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ. ಸಿಕ್ಕ ಕೆಲವೇ ಅವಕಾಶಗಳಲ್ಲಿ ಜೈಸ್ವಾಲ್ ಬ್ಯಾಟ್ ಹಿಡಿದು ಘರ್ಜಿಸಿದ್ದಾರೆ.
ಏಕದಿನಕ್ಕೆ ಕಾಲಿಡಲು ಕಾತುರ
ಟೆಸ್ಟ್ ಹಾಗೂ ಟಿ20ಯಲ್ಲಿ ಆರ್ಭಟಿಸಿರೋ ಯಶಸ್ವಿ ಜೈಸ್ವಾಲ್ ಏಕದಿನ ಫಾರ್ಮೆಟ್ಗೆ ಕಾಲಿಡಲು ಕಾದು ಕುಳಿತಿದ್ದಾರೆ. ಒನ್ ಡೇ ಫಾರ್ಮೆಟ್ನಲ್ಲಿ ಮಿಂಚು ಹರಿಸೋ ಎಲ್ಲಾ ಸಾಮರ್ಥ್ಯವಿದ್ರೂ, ಸ್ಥಾನಕ್ಕಿರೋ ಪೈಪೋಟಿಯ ನಡುವೆ ಜೈಸ್ವಾಲ್ಗೆ ಅವಕಾಶ ಸಿಕ್ಕಿಲ್ಲ. ಒಂದೇ ಒಂದು ಚಾನ್ಸ್ಗಾಗಿ ಜೈಸ್ವಾಲ್ ಹಸಿದ ಹುಲಿಯಂತೆ ಕಾದು ಕುಳಿತಿದ್ದಾರೆ. ಟೆಸ್ಟ್, ಟಿ20ಯಲ್ಲಿ ಮಾಡಿರೋ ಸಾಧನೆ ನೋಡಿದ್ರೆ ಏಕದಿನದಲ್ಲಿ ಅವಕಾಶ ಸಿಕ್ರೆ ಸ್ಥಾನ ಸೀಲ್ ಮಾಡದೆ ಬಿಡಲ್ಲ ಬಿಡಿ.
ಇದನ್ನೂ ಓದಿ:ಬಾಂಗ್ಲಾಗೆ ಎಚ್ಚರಿಕೆ ಕೊಟ್ಟ ಕನ್ನಡಿಗ KL ರಾಹುಲ್; ಟೀಂ ಇಂಡಿಯಾ ಗೆಲುವಿನ ಸೂತ್ರ ಹೇಗಿದೆ..?
ಮುಂಬರುವ ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿಗೆ ಜೈಸ್ವಾಲ್ ಸಮಾರಾಭ್ಯಾಸ ಆರಂಭಿಸಿದ್ದಾರೆ. ಚೆನ್ನೈನ ಚೆಪಾಕ್ ಅಂಗಳದಲ್ಲಿ ಭರ್ಜರಿ ಅಭ್ಯಾಸ ನಡೆಸ್ತಿರೋ ಜೈಸ್ವಾಲ್, ಬಾಂಗ್ಲಾ ಟೈಗರ್ಸ್ ಭೇಟೆಯಾಡೋ ರಣೋತ್ಸಾಹದಲ್ಲಿದ್ದಾರೆ. ಗುರುವಾರದಿಂದ ಆರಂಭವಾಗೋ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ ಬ್ಯಾಟ್ ಮತ್ತಷ್ಟು ಸೌಂಡ್ ಮಾಡಲಿ ಅನ್ನೋದು ಕ್ರಿಕೆಟ್ ಪ್ರೇಮಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್