newsfirstkannada.com

×

ಬಾಂಗ್ಲಾ ಬೇಟೆಗೆ ಚಕ್ರವ್ಯೂಹ; 5 ವರ್ಷದ ಹಿಂದಿನ ತಂತ್ರ ಪ್ರಯೋಗಿಸಲು ಪ್ಲಾನ್.. ಏನದು?

Share :

Published September 17, 2024 at 2:20pm

    ಬಾಂಗ್ಲಾ ಸಮರಕ್ಕೆ ಕೆಂಪು ಮಣ್ಣಿನ ಪಿಚ್‌ ಸಿದ್ಧ

    ಪಿಚ್​ ಸ್ಟ್ರಾಟರ್ಜಿ ಹಿಂದಿದೆ ಭಾರೀ ಲೆಕ್ಕಾಚಾರ

    5 ವರ್ಷದ ಸ್ಟ್ರಾಟರ್ಜಿ ಮೊರೆ ಹೋಗಿದ್ದೇಕೆ..?

ಭಾರತ-ಬಾಂಗ್ಲಾ ನಡುವಿನ ಟೆಸ್ಟ್​ ಸಿರೀಸ್​ಗೆ ಕೌಂಟ್​ಡೌನ್​ ಶುರುವಾಗಿದೆ. ಬಾಂಗ್ಲಾ ಬೇಟೆಗೆ ಕಾದು ಕುಳಿತಿರುವ ಟೀಮ್ ಇಂಡಿಯಾ, 5 ವರ್ಷದ ಹಿಂದಿನ ಸ್ಟ್ರಾಟರ್ಜಿಯ ಮೊರೆ ಹೋಗ್ತಿದೆ. ತವರಿನಲ್ಲಿ ಸ್ಪಿನ್ ಅಸ್ತ್ರದ ಬದಲಾಗಿ, ಪೇಸ್ ಪವರ್​​ ಮೂಲಕ ಖೆಡ್ಡಾ ರೆಡಿ ಮಾಡ್ತಿದೆ.

ಪಾಕ್ ಎದುರು ಐತಿಹಾಸಿಕ ಸರಣಿ ಗೆದ್ದಿರುವ ಬಾಂಗ್ಲಾ, ಭಾರತಕ್ಕೆ ದಂಡೆತ್ತಿ ಬರ್ತಿದೆ. ಭಾರತದಲ್ಲೂ ಚರಿತ್ರೆ ಸೃಷ್ಟಿಸುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಬಾಂಗ್ಲಾವನ್ನ ಹಗುರವಾಗಿ ಪರಿಗಣಿಸದ ಟೀಮ್ ಇಂಡಿಯಾ, ಬಾಂಗ್ಲಾ ಟೈಗರ್ಸ್ ಬೇಟೆಗೆ ಚಕ್ರವ್ಯೂಹ ರಚಿಸಿದೆ. ಬರೋಬ್ಬರಿ 45 ದಿನಗಳ ಬಳಿಕ ಅಖಾಡಕ್ಕಿಳಿಯುತ್ತಿರೋ ಆಟಗಾರರು, 2 ಪಂದ್ಯಗಳ ಟೆಸ್ಟ್ ಸರಣಿಗೆ ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ.

ಇದನ್ನೂ ಓದಿ:ರೋಹಿತ್, ಕೊಹ್ಲಿಗೆ ಶಾಕ್ ಕೊಟ್ಟ ಬೂಮ್ ಬೂಮ್​ ಬೂಮ್ರಾ.. ಕಳಚಿ ಬಿತ್ತು ಫೇಮಸ್ ಟ್ಯಾಗ್​ಲೈನ್..!

ಸ್ಪಿನ್ ಅಲ್ಲ.. ಪೇಸ್ ಅಸ್ತ್ರದ​​ ಮೂಲಕ ಬಾಂಗ್ಲಾ ಬೇಟೆ
ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಕದನಕ್ಕೆ ಚೆಪಾಕ್ ರೆಡಿಯಾಗಿದೆ. ಇಲ್ಲಿ ಸ್ಪಿನ್​​ ಅಸ್ತ್ರದೊಂದಿಗೆ ಟೀಮ್ ಇಂಡಿಯಾ, ಬಾಂಗ್ಲಾದೇಶ ಬೇಟೆಗೆ ಇಳಿಯುತ್ತೆ ಅನ್ನೋದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದ್ರೀಗ ಟೀಮ್​ ಇಂಡಿಯಾ ಗೇಮ್​ ಪ್ಲಾನ್​ ಬದಲಿಸಿದೆ. ಬಾಂಗ್ಲಾ ಮಣಿಸಲು ಚೆಪಾಕ್​​ನಲ್ಲಿ ಸ್ಪಿನ್ ಬದಲಿಗೆ ಪೇಸ್ ಮೊರೆ ಹೋಗ್ತಿದೆ. ಇದಕ್ಕಾಗಿ ಕಪ್ಪು ಮಣ್ಣಿನ ಪಿಚ್ ಬದಲಿಗೆ ಕೆಂಪು ಮಣ್ಣಿನ ಪಿಚ್ ಕೂಡ ರೆಡಿಯಾಗಿದೆ. ಇದರ ಹಿಂದೆ ಭಾರೀ ಲೆಕ್ಕಾಚಾರವೂ ಅಡಗಿದೆ.

ಪೇಸರ್ಸ್ ಮೊರೆ ಹೋಗ್ತಿರೋದ್ಯಾಕೆ ಟೀಮ್ ಇಂಡಿಯಾ?
ಇಂಡಿಯನ್ ಕಂಡೀಷನ್ಸ್​ನಲ್ಲಿ ಟೀಮ್ ಇಂಡಿಯಾದ ಗೆಲುವಿನ ಹೀರೋಗಳೇ ಸ್ಪಿನ್ನರ್​ಗಳು. ಆದ್ರೀಗ ಟೀಮ್ ಇಂಡಿಯಾ ಪೇಸರ್​​​ಗಳ ಮೊರೆ ಹೋಗ್ತಿರುವುದು ನಿಜಕ್ಕೂ ಅಚ್ಚರಿಗೆ ಕಾರಣವೂ ಆಗಬಹುದು. ಟೀಮ್ ಇಂಡಿಯಾದ ಈ ತಂತ್ರದ ಹಿಂದೆ, ಟೀಮ್ ಇಂಡಿಯಾದ ಬಲದ ಜೊತೆ ಬಾಂಗ್ಲಾದ ವಿಕ್ನೇಸ್ ಕೂಡ ಇದೆ.

ಪೇಸ್ ಬೌಲಿಂಗ್ ತಂತ್ರ ಏಕೆ..?

  • ಸ್ಪಿನ್ ಸ್ನೇಹಿ ಪಿಚ್​ನಲ್ಲಿ ಬಾಂಗ್ಲಾದೇಶ ಅಪಾಯಕಾರಿ
  • ಬಾಂಗ್ಲಾ ಸ್ಪಿನ್ ವಿಭಾಗವೂ ಭಾರತದಂತೆ ಉತ್ತಮ
  • ಇಂಡಿಯನ್ ಬ್ಯಾಟರ್ಸ್ ಸ್ಪಿನ್ ಎದುರು ವೈಫಲ್ಯ
  • ಪೇಸ್ ಅಂಡ್ ಬೌನ್ಸಿ​ ಪಿಚ್ ಭಾರತಕ್ಕೆ ಪ್ರಯೋಜನಕಾರಿ
  • ಟೀಮ್ ಇಂಡಿಯಾ ಬ್ಯಾಟ್ಸ್​ಮನ್​​ಗಳು ಉತ್ತಮ ಆಟ
  • ಬಾಂಗ್ಲಾಗಿಂತ ಇಂಡಿಯನ್ ಪೇಸ್ ಬೌಲಿಂಗ್ ಸ್ಟ್ರಾಂಗ್​
  • ಬಾಂಗ್ಲಾ ಬ್ಯಾಟ್ಸ್​ಮನ್ಸ್​ ಪೇಸ್ ಎದುರು ಪರದಾಟ

ಕೆಂಪು ಮಣ್ಣಿನ ಪಿಚ್​​​ನಲ್ಲಿ ಬಾಂಗ್ಲಾ ಗೆಲ್ಲಲು ತಿಪ್ಪರಲಾಗ ಹಾಕಬೇಕಾಗುತ್ತೆ. ಇದಕ್ಕಾಗಿಯೇ ಟೀಮ್ ಮ್ಯಾನೇಜ್​ಮೆಂಟ್, ಬಾಂಗ್ಲಾ ಬೇಟೆಗೆ ಕೆಂಪು ಮಣ್ಣಿನ ಪಿಚ್​​ ಮೊರೆಹೋಗುತ್ತಿದೆ ಎನ್ನಲಾಗಿದೆ. 2019.. ಬಾಂಗ್ಲಾ ಭಾರತ ಪ್ರವಾಸ. ಈ ಸರಣಿಯ ಇಂದೋರ್ ಮತ್ತು ಕೋಲ್ಕತ್ತಾದಲ್ಲಿ ನಡೆದ 2 ಟೆಸ್ಟ್​ಗಳಲ್ಲಿ ಭಾರತ ಗೆದ್ದು ಬೀಗಿತ್ತು. ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದ ತ್ರಿವಳಿ ವೇಗಿಗಳು, 33 ವಿಕೆಟ್ ಉರುಳಿಸಿದ್ರು. ಇಶಾಂತ್ ಶರ್ಮಾ, ಉಮೇಶ್​ ಯಾದವ್ ತಲಾ 12 ವಿಕೆಟ್ ಉರುಳಿಸಿದ್ರೆ. ಮೊಹಮ್ಮದ್ ಶಮಿ 9 ವಿಕೆಟ್ ಬೇಟೆಯಾಡಿದ್ದರು. ಸ್ಪಿನ್ ಮಾಸ್ಟರ್ ಅಶ್ವಿನ್ ಜಸ್ಟ್​ ಐದೇ ಐದು ವಿಕೆಟ್ ಕಬಳಿಸಿದ್ದರು. ಅಂದು ಸಕ್ಸಸ್​ ಕಂಡ ತಂತ್ರವನ್ನೇ ಟೀಮ್ ಇಂಡಿಯಾ, ಈ ಸರಣಿಯಲ್ಲಿ ಅನುಸರಿಸಲು ಮುಂದಾಗ್ತಿದೆ.

ಇದನ್ನೂ ಓದಿ:6.5 ಅಡಿ ಎತ್ತರ..! ಟೀಂ ಇಂಡಿಯಾಗೆ ನೀಳಕಾಯದ ಬೌಲರ್​ ಎಂಟ್ರಿ.. ಬಾಂಗ್ಲಾಗೆ ಪುಕಪುಕ..!

ಪೇಸರ್ಸ್ ಯಾರು..?
ಬೌನ್ಸಿ ಟ್ರ್ಯಾಕ್​​ನಲ್ಲಿ ವೇಗಿ ಜಸ್​ಪ್ರೀತ್​ ಬೂಮ್ರಾ, ಮೊಹಮ್ಮದ್ ಸಿರಾಜ್ ಕಣಕ್ಕಿಳಿಯೋದು ಪಕ್ಕಾ. ಮೂರನೇ ವೇಗಿಯಾಗಿ ಯಾರಿಗೆ ಚಾನ್ಸ್​ ಅನ್ನೋದೇ ಪ್ರಶ್ನೆಯಾಗಿದೆ. ಎಡಗೈ ವೇಗಿಯಾದ ಕಾರಣಕ್ಕೆ ಯಶ್​ ದಯಾಳ್ ಡೆಬ್ಯೂ ಚಾನ್ಸ್​ ಇದೆ ಹಾಗಂತ ಸಾಲಿಡ್ ಟಚ್​ನಲ್ಲಿರುವ ಆಕಾಶ್ ದೀಪ್​​ಗೆ ಬೆಂಚ್ ಕಾಯಿಸೋಕೆ ಸಾಧ್ಯವಿಲ್ಲ. ಹೀಗಾಗಿ ಕನ್ಪೂಶನ್​ ಶುರುವಾಗಿದೆ. ಇನ್ನು ಸ್ಪಿನ್ನರ್​ಗಳಾಗಿ ಜಡೇಜಾ ಆ್ಯಂಡ್ ಅಶ್ವಿನ್ ಕಣಕ್ಕಿಳಿಯಲಿದ್ದು, ಅಕ್ಷರ್ ಪಟೇಲ್, ಕುಲ್​​ದೀಪ್ ಯಾದವ್ ಬೆಂಚ್ ಕಾಯಬೇಕಿರುವುದು ಬಹುತೇಕ ಖಚಿತ.

ಭಾರತದಲ್ಲಿ ಸ್ಪಿನ್​ ಟು ವಿನ್​ ತಂತ್ರ ಅನುಸರಿಸ್ತಾ ಇದ್ದ ಟೀಮ್​ ಇಂಡಿಯಾ ಈ ಬಾರಿ ಉಲ್ಟಾ ಪ್ಲಾನ್​ ಮಾಡಿದೆ. ಬಾಂಗ್ಲಾ ಟೈಗರ್ಸ್ ಬೇಟೆಗೆ ಟೀಮ್ ಇಂಡಿಯಾ, ಪೇಸ್ ಪವರ್​​ ಮೊರೆ ಹೋಗ್ತಿದೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ:ಬಾಂಗ್ಲಾಗೆ ಎಚ್ಚರಿಕೆ ಕೊಟ್ಟ ಕನ್ನಡಿಗ KL ರಾಹುಲ್; ಟೀಂ ಇಂಡಿಯಾ ಗೆಲುವಿನ ಸೂತ್ರ ಹೇಗಿದೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬಾಂಗ್ಲಾ ಬೇಟೆಗೆ ಚಕ್ರವ್ಯೂಹ; 5 ವರ್ಷದ ಹಿಂದಿನ ತಂತ್ರ ಪ್ರಯೋಗಿಸಲು ಪ್ಲಾನ್.. ಏನದು?

https://newsfirstlive.com/wp-content/uploads/2024/09/Team-India-Test.jpg

Load More