newsfirstkannada.com

×

ರೋಹಿತ್, ಕೊಹ್ಲಿಗೆ ಶಾಕ್ ಕೊಟ್ಟ ಬೂಮ್ ಬೂಮ್​ ಬೂಮ್ರಾ.. ಕಳಚಿ ಬಿತ್ತು ಫೇಮಸ್ ಟ್ಯಾಗ್​ಲೈನ್..!

Share :

Published September 17, 2024 at 1:13pm

    ರೋಹಿತ್​-ಕೊಹ್ಲಿನಾ ಬೂಮ್ರಾ ಹಿಂದಿಕ್ಕಿದ್ದು ಹೇಗೆ ಗೊತ್ತಾ?

    ಬೂಮ್ರಾರನ್ನು ಆರ್​ ಅಶ್ವಿನ್ ಬಣ್ಣಿಸಿದ್ದು ಹೇಗೆ ಗೊತ್ತಾ?

    ಕೊಹ್ಲಿ, ರೋಹಿತ್ ಟೀಂ ಇಂಡಿಯಾದ ಸಾಮಾನ್ಯ ಆಟಗಾರರು

ಹಿಟ್​​ಮ್ಯಾನ್​​ ರೋಹಿತ್​ ಶರ್ಮಾ, ಕಿಂಗ್​ ವಿರಾಟ್​ ಕೊಹ್ಲಿ. ಇವರಿಬ್ಬರು ಟೀಮ್​ ಇಂಡಿಯಾದ ಸಾಮಾನ್ಯ ಪ್ಲೇಯರ್ಸ್​ ಅಷ್ಟೇ. ತಂಡದ ಇಂಪಾರ್ಟೆಂಟ್​ ಪ್ಲೇಯರ್ಸ್​​ ಅಲ್ಲ. ಸೂಪರ್​​ ಸ್ಟಾರ್​ ಬ್ಯಾಟ್ಸ್​​ಮನ್​​ಗಳು, ಬೂಮ್ರಾ ಬಿರುಗಾಳಿಯ ಮುಂದೆ ಮಕಾಡೆ ಮಲಗಿದ್ದಾರೆ. ಕೊಹ್ಲಿ, ರೋಹಿತ್​ನ ಹಿಂದಿಕ್ಕಿ​ ಯಾರ್ಕರ್​​ ಸ್ಪೆಷಲಿಸ್ಟ್​ ಬೂಮ್ರಾ ಭಾರತದ ಇಂಪಾರ್ಟೆಂಟ್​ ಪ್ಲೇಯರ್​ ಅನ್ನೋ ಪಟ್ಟ ಕಬ್ಜ ಮಾಡಿದ್ದಾರೆ.

ಕಿಂಗ್​ ವಿರಾಟ್​ ಕೊಹ್ಲಿ, ಹಿಟ್​ಮ್ಯಾನ್​ ರೋಹಿತ್​​ ಶರ್ಮಾ.. ಟೀಮ್​ ಇಂಡಿಯಾ ಜೋಡೆತ್ತು. ಕಳೆದೊಂದು ದಶಕದಲ್ಲಿ ಈ ಜೋಡಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ವಿಶ್ವ ಕ್ರಿಕೆಟ್​​ ಲೋಕವನ್ನ ಅಕ್ಷರಶಃ ಆಳಿದ್ದಾರೆ. ಟೀಮ್​ ಇಂಡಿಯಾ ಪಾಲಿಗಂತೂ ಇವರಿಬ್ಬರು ಮ್ಯಾಚ್​​ ವಿನ್ನರ್​​​​​ಗಳಾಗಿದ್ದಾರೆ. ಈ ಕಾರಣದಿಂದಲೇ ಭಾರತೀಯ ಕ್ರಿಕೆಟ್​​ ತಂಡದ ಮೋಸ್ಟ್​ ಇಂಪಾರ್ಟೆಂಟ್​ ಪ್ಲೇಯರ್ಸ್​ ಅನ್ನೋ ಟ್ಯಾಗ್​ಲೈನ್​ ಹೊಂದಿದ್ದಾರೆ. ಈಗ ಆ ಟ್ಯಾಗ್​ಲೈನ್​ ಕಳಚಿ ಬಿದ್ದಿದೆ.

ಇದನ್ನೂ ಓದಿ:ಬಾಂಗ್ಲಾಗೆ ಎಚ್ಚರಿಕೆ ಕೊಟ್ಟ ಕನ್ನಡಿಗ KL ರಾಹುಲ್; ಟೀಂ ಇಂಡಿಯಾ ಗೆಲುವಿನ ಸೂತ್ರ ಹೇಗಿದೆ..?

ರೋಹಿತ್, ಕೊಹ್ಲಿ ಬಹುಮುಖ್ಯ ಪ್ಲೇಯರ್ಸ್​​ ಅಲ್ಲ
ಟೀಮ್​ ಇಂಡಿಯಾ ಯಾವುದೇ ಸರಣಿ, ಟೂರ್ನಿ, ಪಂದ್ಯವನ್ನಾಡಲಿ, ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಯೇ ಸೆಂಟರ್​ ಆಫ್​ ಅಟ್ರಾಕ್ಷನ್​. ಇದ್ರ ಹಿಂದೆ ಇದ್ದ ರೀಸನ್ ಇವರಿಬ್ಬರು ಮ್ಯಾಚ್​​​ ವಿನ್ನರ್ಸ್​ ನಂಬಿಕೆ. ಈಗ ಕಾಲ ಬದಲಾಗಿದೆ. ಇವರಿಬ್ಬರ ಆಟವೂ ಬದಲಾಗಿದೆ. ಇವರಿಬ್ಬರನ್ನ ಹಿಂದಿಕ್ಕಿ ಯಾರ್ಕರ್​​ ಸ್ಪೆಷಲಿಸ್ಟ್​ ಜಸ್​​ಪ್ರಿತ್​ ಬೂಮ್ರಾ, ಟೀಮ್​ ಇಂಡಿಯಾದ ಮೋಸ್ಟ್​ ಇಂಪಾರ್ಟೆಂಟ್​ ಪ್ಲೇಯರ್​​ ಪಟ್ಟವನ್ನ ಕಬ್ಜ ಮಾಡಿದ್ದೂ ಆಗಿದೆ.

ಕಮ್​​ಬ್ಯಾಕ್​ನ ಬಳಿಕ ಬೂಮ್ರಾ ಬಿರುಗಾಳಿ
ಇಂಜುರಿಗೆ ತುತ್ತಾಗಿ ಸುದೀರ್ಘ ಕಾಲ ಟೀಮ್​ ಇಂಡಿಯಾದಿಂದ ಹೊರಬಿದ್ದಿದ್ದ ಜಸ್​​ಪ್ರಿತ್​ ಬೂಮ್ರಾ, ಕಮ್​​ಬ್ಯಾಕ್​ ಮಾಡಿದ ಬಳಿಕ ಸಾಲಿಡ್​​ ಫಾರ್ಮ್​ನಲ್ಲಿದ್ದಾರೆ. ಮೂರೂ ಫಾರ್ಮೆಟ್​​ನಲ್ಲಿ ಮಿಂಚು ಹರಿಸ್ತಿರೋ ಬೂಮ್ರಾ, ಬಿರುಗಾಳಿಯ ದಾಳಿಗೆ ಎದುರಾಳಿಗಳು ತತ್ತರಿಸಿದ್ದಾರೆ. ಖತರ್ನಾಕ್​ ಬೌಲಿಂಗ್​ನಿಂದ ಕಮಾಲ್​ ಮಾಡ್ತಿರೋ ಬೂಮ್ರಾ, ಟೀಮ್​ ಇಂಡಿಯಾದ ಮೋಸ್ಟ್​ ಇಂಪಾರ್ಟೆಂಡ್​ ಪ್ಲೇಯರ್​​ ಎನಿಸಿಕೊಂಡಿದ್ದಾರೆ. ಫ್ಯಾನ್ಸ್​, ಕ್ರಿಕೆಟ್​ ಎಕ್ಸ್​ಪರ್ಟ್ಸ್​ ಮಾತ್ರವಲ್ಲ.. ಟೀಮ್​ ಇಂಡಿಯಾ ಕ್ರಿಕೆಟಿಗರು ಕೂಡ ಈ ಮಾತನ್ನ ಒಪ್ಪಿದ್ದಾರೆ.

ಇದನ್ನೂ ಓದಿ:6.5 ಅಡಿ ಎತ್ತರ..! ಟೀಂ ಇಂಡಿಯಾಗೆ ನೀಳಕಾಯದ ಬೌಲರ್​ ಎಂಟ್ರಿ.. ಬಾಂಗ್ಲಾಗೆ ಪುಕಪುಕ..!

ಟೀಮ್​ ಇಂಡಿಯಾದ ಬಹುಮುಖ್ಯ ಆಟಗಾರ
ಚೆನ್ನೈನ ಜನರಾದ ನಾವು ಬೌಲರ್​​ಗಳನ್ನ ಹೆಚ್ಚು ಪ್ರಶಂಸಿಸುತ್ತೇವೆ. ಬೂಮ್ರಾನ ಚಾಂಪಿಯನ್​ ಎಂದೇ ನಾವು ನೋಡಬೇಕು. ನಾನು ಬೇರೆಯವರ ಬಗ್ಗೆ ಹೇಳಲ್ಲ. ಜಸ್​​​​ಪ್ರೀತ್​ ಬೂಮ್ರಾ, ಸದ್ಯಕ್ಕಂತೂ ಭಾರತ ಕ್ರಿಕೆಟ್​ ತಂಡದ ಬಹುಮುಖ್ಯ ಆಟಗಾರ-R. ಅಶ್ವಿನ್​, ಸ್ಪಿನ್ನರ್​

ಬೂಮ್ರಾ ಅಲಭ್ಯ.. ಲಂಕಾದಲ್ಲಿ ಸೋಲಿನ ಮುಖಭಂಗ
ಬೂಮ್ರಾ ಭಾರತ ತಂಡದ ಬಹುಮುಖ್ಯ ಆಟಗಾರ ಯಾಕೆ ಅನ್ನೋದಕ್ಕೆ ಈ ಹಿಂದಿನ ಲಂಕಾ ಸರಣಿ ಬೆಸ್ಟ್​​ ಎಕ್ಸಾಂಪಲ್​. ಲಂಕಾ ಪ್ರವಾಸದ ಏಕದಿನ ತಂಡದಲ್ಲಿ ಸೂಪರ್​ ಸ್ಟಾರ್​ಗಳಾದ ಕೊಹ್ಲಿ-ರೋಹಿತ್ ಇಬ್ಬರೂ ಇದ್ರು. ಸರಣಿಯಲ್ಲಿ ಆಗಿದ್ದು ಹೀನಾಯ ಮುಖಭಂಗ. ಕೊಹ್ಲಿ ಫ್ಲಾಪ್​ ಶೋ ನೀಡಿದ್ರೆ, ರೋಹಿತ್​ಗೆ ತಂಡವನ್ನ ​ಗೆಲುವಿನ ದಡ ಸೇರಿಸೋಕೆ ಆಗ್ಲಿಲ್ಲ. ಅದೇ ಬೂಮ್ರಾ ಆಡಿದ್ರೆ, ಶ್ರೀಲಂಕಾ ತಂಡಕ್ಕೆ ಕಾಂಪಿಟೇಟಿವ್​ ಸ್ಕೋರ್​ ಕಲೆ ಹಾಕೋಕೆ ಆಗ್ತಿರಲಿಲ್ಲ.. ಭಾರತಕ್ಕೆ ಚೇಸಿಂಗ್​ ಕಷ್ಟವೂ ಆಗ್ತಿರಲಿಲ್ಲ.

ಲಂಕಾ ಸರಣಿಯ ಸೋಲು ಬಿಡಿ. ಕಳೆದ ಟಿ20 ವಿಶ್ವಕಪ್​ ಟೂರ್ನಿ ಬೂಮ್ರಾ ಯಾಕೆ ಟೀಮ್​ ಇಂಡಿಯಾದ ಇಂಪಾರ್ಟೆಂಟ್​ ಪ್ಲೇಯರ್​ ಅನ್ನೋದಕ್ಕೆ ಬೆಸ್ಟ್​ ಎಕ್ಸಾಂಪಲ್​. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ ಟೀಮ್​ ಇಂಡಿಯಾ ಸೋಲಿನ ಹಾದಿ ತುಳಿದಿತ್ತು. ಆಗ ಮ್ಯಾಜಿಕ್​ ಮಾಡಿದ್ದ ಬೂಮ್ರಾ, ದಿಗ್ವಿಜಯದ ರೂವಾರಿಯಾಗಿದ್ರು. ಫೈನಲ್​ ಪಂದ್ಯದಲ್ಲೂ ಅದೇ ಕಥೆ. ಸೌತ್​ ಆಫ್ರಿಕಾ ಬ್ಯಾಟ್ಸ್​ಮನ್​ಗಳ ಹೆಡೆಮುರಿ ಕಟ್ಟಿ ಟ್ರೋಫಿ ಗೆಲುವಿಗೆ ಬೂಮ್ರಾ ಕಾರಣರಾಗಿದ್ರು.

ಇದನ್ನೂ ಓದಿ: 4 ಪಂದ್ಯ.. ಕಿತ್ತಿರೋದು 30 ವಿಕೆಟ್.. ಚೆಪಾಕ್​​ನಲ್ಲಿ ಇವ್ರಿಗೆ ಸಾಟಿಯೇ ಇಲ್ಲ.. ಬಾಂಗ್ಲಾಗೆ ಢವಢವ..!

T20 ವಿಶ್ವಕಪ್​ ಟೂರ್ನಿ ಮಾತ್ರವಲ್ಲ.. ಕಳೆದೊಂದು ವರ್ಷದಲ್ಲಿ ಮೂರೂ ಫಾರ್ಮೆಟ್​ನಲ್ಲಿ ಹಲವು ಸರಣಿಗಳ ಹಾಗೂ ಪಂದ್ಯಗಳ ಗೆಲುವಿನ ಶ್ರೇಯ ಬೂಮ್ರಾಗೆ ಸೇರಬೇಕು. ಹಾಗಂತ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ತಂಡಕ್ಕೆ ಮ್ಯಾಚ್​ ವಿನ್ನರ್ಸ್​ ಅಲ್ಲವೇ ಅಲ್ಲ ಅಂತಲ್ಲ. ಇವರಿಬ್ಬರೂ ತಂಡದಲ್ಲಿದ್ದು, ಟೀಮ್​ ಇಂಡಿಯಾ ಗೆದ್ದಾಗಲೂ, ಬೂಮ್ರಾ ಇಂಪ್ಯಾಕ್ಟ್​ ವಿನ್ನಿಂಗ್​​ ಮೇಲೆ ಪರಿಣಾಮ ಬೀರಿದೆ. ಹೀಗಾಗಿಯೇ ಟೆಸ್ಟ್​, ಏಕದಿನ, ಟಿ20.. ಎಲ್ಲಾ ಫಾರ್ಮೆಟ್​ನಲ್ಲೂ ಮಿಂಚು ಹರಿಸಿರೋ ಬೂಮ್ರಾ ಟೀಮ್​ ಇಂಡಿಯಾದ ಇಂಪಾರ್ಟೆಂಟ್​ ಪ್ಲೇಯರ್​ ಅನ್ನೋ ಟಾಕ್​ ಶುರುವಾಗಿದೆ.

ಇದನ್ನೂ ಓದಿ: ಸ್ಪೆಷಲ್ ಟ್ಯಾಲೆಂಟ್ ಹುಡುಗನಿಗೆ ಚಾನ್ಸ್ ಕೊಡಲು ಗಂಭೀರ್ ಕಸರತ್ತು​.. 8 ವೇಗಿಗಳು ಅಸಮಾಧಾನ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಹಿತ್, ಕೊಹ್ಲಿಗೆ ಶಾಕ್ ಕೊಟ್ಟ ಬೂಮ್ ಬೂಮ್​ ಬೂಮ್ರಾ.. ಕಳಚಿ ಬಿತ್ತು ಫೇಮಸ್ ಟ್ಯಾಗ್​ಲೈನ್..!

https://newsfirstlive.com/wp-content/uploads/2024/06/Rohit-Bumrah.jpg

Load More