newsfirstkannada.com

ಹಾಸನ To ಟೀಂ ಇಂಡಿಯಾ.. ಡೇವಿಡ್​ ಜಾನ್ಸನ್ ಕ್ರಿಕೆಟ್ ಜರ್ನಿಯೇ ರೋಚಕ ಸ್ಟೋರಿ!

Share :

Published June 20, 2024 at 2:16pm

Update June 20, 2024 at 3:30pm

    53 ವರ್ಷದ ಮಾಜಿ ಆಟಗಾರ ಡೇವಿಡ್​ ಜಾನ್ಸನ್ ನಿಧನ

    ಹಾಸನದ ಅರಸೀಕೆರೆ ಮೂಲದ ಕ್ರಿಕೆಟಿಗ ಡೇವಿಡ್​ ಜಾನ್ಸನ್

    ಭಾರತ ಪರ 2 ಟೆಸ್ಟ್‌ ಪಂದ್ಯಗಳನ್ನಾಡಿ ಎಲ್ಲರ ಗಮನ ಸೆಳೆದಿದ್ದರು

ಟೀಂ ಇಂಡಿಯಾದ ಮಾಜಿ ಆಟಗಾರ ಡೇವಿಡ್​ ಜಾನ್ಸನ್ ಇನ್ನಿಲ್ಲ.. ತಮ್ಮ 53ನೇ ವಯಸ್ಸಿನಲ್ಲಿ ಜಾನ್ಸನ್ ಅವರು ತಮ್ಮ ಲೈಫ್ ಜರ್ನಿ ಮುಗಿಸಿದ್ದಾರೆ. 

ಭಾರತದ ಕ್ರಿಕೆಟ್​​ ತಂಡದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಈ ತಾರೆ ಮೂಲತಃ ಕನ್ನಡಿಗನು ಹೌದು. ಕರ್ನಾಟಕದ ಹಾಸನ ಮೂಲದ ಅರಸೀಕೆರೆಯ ಈ ಪ್ರತಿಭೆ ಟೀಂ ಇಂಡಿಯಾ ತಂಡದಲ್ಲಿ ಗುರುತಿಸಿಕೊಂಡಿದ್ದರು. ಭಾರತ ಪರ 2 ಟೆಸ್ಟ್‌ ಪಂದ್ಯಗಳನ್ನಾಡಿದ್ದ ಕೀರ್ತಿ ಇವರಿಗಿದೆ.

ಅಕ್ಟೋಬರ್​ 16, 1971ರಲ್ಲಿ ಜನಿಸಿದ ಡೇವಿಡ್​, ವೇಗದ-ಮಧ್ಯಮ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಜೊತೆಗೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರು. 1996ರಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಲ್ಲದೆ, 3 ವಿಕೆಟ್​ಗಳನ್ನು ಪಡೆದ ಕನ್ನಡಿಗ.

1996ರ ಆಸ್ಟ್ರೇಲಿಯಾದ ಭಾರತ ಪ್ರವಾಸದ ಸಮಯದಲ್ಲಿ ಡೇವಿಡ್ ತಮ್ಮ ವೇಗದ ಬೌಲಿಂಗ್​ನಿಂದ ಮೈಕೆಲ್ ಸ್ಲೇಟರ್ ಅವರ ವಿಕೆಟ್​ ಉರುಳಿಸಿದರು. ಗಂಟೆಗೆ 157.8 ಕಿಮೀ ವೇಗದಲ್ಲಿ ವಿಕೆಟ್​​ ಕಿತ್ತರು. ಅಂದಿನಿಂದ ಭಾರತದ ಅತ್ಯಂತ ವೇಗದ ಬೌಲರ್ ಎಂದೆನಿಸಿಕೊಂಡರು.

ಇದನ್ನೂ ಓದಿ: ಟೀಂ ಇಂಡಿಯಾ ಕಟ್ಟಿಹಾಕಲು ರಶೀದ್ ಖಾನ್ ಪ್ಲಾನ್.. ಭಯಂಕರ ಅಸ್ತ್ರ ಪ್ರಯೋಗಿಸ್ತೀವಿ ಎಂದ ಅಫ್ಘಾನ್

ಇನ್ನು ಫಿರೋಜ್‌ಶಾ ಕೋಟ್ಲಾದಲ್ಲಿ ನಡೆದ ಏಕೈಕ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಆಗಿದ ಹೆಗ್ಗಳಿಕೆ ಡೇವಿಡ್​ಗೆ ಇದೆ. ಆ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು ಮೊದಲ ಟೆಸ್ಟ್‌ನಲ್ಲಿ ಆಡಿದರು.

ಆದರಿಂದು ಟೀಂ ಇಂಡಿಯಾದ ಮಾಜಿ ಆಟಗಾರ ಡೇವಿಡ್​ ಜಾನ್ಸನ್ ಅಕಾಲಿಕ ನಿಧನರಾಗಿದ್ದಾರೆ. ಡೇವಿಡ್ ಜಾನ್ಸನ್ ಅವರ ಸಾವು ಕ್ರಿಕೆಟ್​ ಪ್ರಿಯರಿಗೆ ದೊಡ್ಡ ಆಘಾತವನ್ನು ನೀಡಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಹಾಸನ To ಟೀಂ ಇಂಡಿಯಾ.. ಡೇವಿಡ್​ ಜಾನ್ಸನ್ ಕ್ರಿಕೆಟ್ ಜರ್ನಿಯೇ ರೋಚಕ ಸ್ಟೋರಿ!

https://newsfirstlive.com/wp-content/uploads/2024/06/David-Johnson-1.jpg

Load More