ಅಭಿಷೇಕ್​​ ಅವಕಾಶ ಕಿತ್ತುಕೊಂಡ ಶುಭ್ಮನ್​ ಗಿಲ್​​.. ಕ್ಯಾಪ್ಟನ್​ ವಿರುದ್ಧ ಬಹಿರಂಗ ಆಕ್ರೋಶ!

author-image
Ganesh Nachikethu
Updated On
ಬೌಲಿಂಗ್ Ranking​ನಲ್ಲಿ ನಂ.1 ಪಟ್ಟಕ್ಕೇರಿದ ಸಿರಾಜ್.. ಶುಭ್​ಮನ್ ಹೆಸರಲ್ಲೂ ಇದೆ ದಾಖಲೆ.. ಅದೇನದು? ಈ ಸ್ಟೋರಿ ಓದಿ ​
Advertisment
  • ಜಿಂಬಾಬ್ವೆ ವಿರುದ್ಧ ಗೆದ್ರೂ ಟೀಮ್​ ಇಂಡಿಯಾ ಅಭಿಮಾನಿಗಳ ಭಾರೀ ಆಕ್ರೋಶ
  • ಟೀಮ್​ ಇಂಡಿಯಾ ಕ್ಯಾಪ್ಟನ್​​​ ಶುಭ್ಮನ್​​​ ಗಿಲ್​​ ವಿರುದ್ಧ ಬಹಿರಂಗ ಅಸಮಾಧಾನ!
  • ಅಭಿಷೇಕ್​ ಶರ್ಮಾ ಅವಕಾಶ ಕಿತ್ತುಕೊಂಡ ಗಿಲ್​​ ವಿರುದ್ಧ ಕೆಂಡಕಾರಿದ ನೆಟ್ಟಿಗರು

ಇಂದು ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ 3ನೇ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್​​ ತಂಡಕ್ಕೆ ಟೀಮ್​ ಇಂಡಿಯಾ 183 ರನ್​ಗಳ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​​​ ಶುಭ್ಮನ್​ ಗಿಲ್​ ಕೊನೆವರೆಗೂ ಕ್ರೀಸ್​ನಲ್ಲಿ ನಿಂತು ಅತ್ಯುತ್ತಮವಾಗಿ ಬ್ಯಾಟ್​ ಬೀಸಿದ್ರು. ತಾನು ಆಡಿದ 49 ಬಾಲ್​ನಲ್ಲಿ 3 ಸಿಕ್ಸರ್​​, 7 ಫೋರ್​ ಸಮೇತ 66 ರನ್​​ ಸಿಡಿಸಿದ್ರು.

ಇವರಿಗೆ ಸಾಥ್​ ಕೊಟ್ಟ ಯಶಸ್ವಿ ಜೈಸ್ವಾಲ್​​ 2 ಸಿಕ್ಸರ್​​, 4 ಫೋರ್​​ ಸಮೇತ 36 ರನ್​​ ಚಚ್ಚಿದ್ರು. ಅಭಿಷೇಕ್​ ಶರ್ಮಾ ಕೇವಲ 10 ರನ್​ಗೆ ವಿಕೆಟ್​ ಒಪ್ಪಿಸಿದ್ರು. ರುತುರಾಜ್​​​ ಗಾಯಕ್ವಾಡ್​ ಕೇವಲ 28 ಬಾಲ್​ನಲ್ಲಿ 3 ಭರ್ಜರಿ ಸಿಕ್ಸರ್​​, 4 ಫೋರ್​​ನೊಂದಿಗೆ 49 ರನ್​​​ ಕಲೆ ಹಾಕಿದ್ರು. ಬಳಿಕ ಬಂದ ಸಂಜು ಸ್ಯಾಮ್ಸನ್​ 12 ರನ್​​​ ಬಾರಿಸಿದ್ರು. ಇದರ ಪರಿಣಾಮ ಟೀಮ್​ ಇಂಡಿಯಾ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 182 ರನ್​​ ಗಳಿಸಿತ್ತು.

ಶುಭ್ಮನ್​​ ಗಿಲ್​ ವಿರುದ್ಧ ಮತ್ತೆ ಆಕ್ರೋಶ

ಇನ್ನು, ಶುಭ್ಮನ್​ ಗಿಲ್​​ ಆಟದ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಭಿಷೇಕ್​ ಶರ್ಮಾ ಓಪನಿಂಗ್​ ಬ್ಯಾಟರ್​​​. ಗಿಲ್​ ಅಭಿಷೇಕ್​​ಗೆ ಓಪನಿಂಗ್​ ಮಾಡೋಕೆ ಬಿಟ್ಟುಕೊಟ್ಟು ತಾನು ಒನ್​ ಡೌನ್​​ ಆಗಿ ಆಡಬಹುದಿತ್ತು. ಅಭಿಷೇಕ್​ ಅವರನ್ನು ಡಿಮೋಟ್​ ಮಾಡಿದ್ದು ಸೆಲ್ಫಿಶ್​ ಕ್ಯಾಪ್ಟನ್ಸಿ. ಗಿಲ್​ಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.


">July 10, 2024

ಇದನ್ನೂ ಓದಿ:ಟೀಮ್​ ಇಂಡಿಯಾ ಕ್ಯಾಪ್ಟನ್​​ ಆಗಲು ಕೆ.ಎಲ್​​ ರಾಹುಲ್​​ ಪರ ಕೋಚ್​​ ಗಂಭೀರ್​​ ಒಲವು.. ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment