ಗಂಭೀರ್ ಕೋಚ್ ಆದ್ಮೇಲೂ ಸ್ಟಾರ್ ಆಟಗಾರನಿಗೆ ಭಾರೀ ಅನ್ಯಾಯ
ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲೂ ಅವಕಾಶ ನೀಡದ ಕೋಚ್
ನಂಬಿಸಿ ಸ್ಟಾರ್ ಆಟಗಾರನ ಬೆನ್ನಿಗೆ ಚೂರು ಹಾಕಿದ ಕೋಚ್ ಗಂಭೀರ್..!
ಶ್ರೀಲಂಕಾ, ಟೀಮ್ ಇಂಡಿಯಾ ಮಧ್ಯೆ ಟಿ20 ಸರಣಿ ನಡೆಯುತ್ತಿದೆ. ಶನಿವಾರ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 40ಕ್ಕೂ ಹೆಚ್ಚು ರನ್ಗಳಿಂದ ಗೆದ್ದು ಬೀಗಿದೆ. ಈ ಮಧ್ಯೆ ಜಸ್ಟೀಸ್ ಫಾರ್ ಸಂಜು ಸ್ಯಾಮ್ಸನ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ.
ಮೊದಲ ಟಿ20 ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಅವರಿಗೆ ಪ್ಲೇಯಿಂಗ್ ಎಲೆವೆನ್ನಲ್ಲಿ ಅವಕಾಶ ನೀಡಿರಲಿಲ್ಲ. ಇವರ ಬದಲಿಗೆ ರಿಷಬ್ ಪಂತ್ಗೆ ಅವಕಾಶ ನೀಡಿದ್ರು. ಪಂತ್ ತನಗೆ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಕೊನೆವರೆಗೂ ಕ್ರೀಸ್ನಲ್ಲಿ ನಿಂತು ಕಳಪೆ ಬ್ಯಾಟಿಂಗ್ ಮಾಡಿದ್ರು. ಆದ್ದರಿಂದ ಎಷ್ಟು ಸಲ ಸಂಜುಗೆ ಮೋಸ ಮಾಡ್ತೀರಾ? ಗಂಭೀರ್ ಮತ್ತು ಬಿಸಿಸಿಐಗೆ ನಾಚಿಕೆ ಆಗಬೇಕು ಎಂದು ಟ್ವೀಟ್ ಮಾಡಿ ಟೀಮ್ ಇಂಡಿಯಾ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
ಸಂಜುಗೆ ಮೋಸ ಮಾಡಿದ ಗಂಭೀರ್!
ಈ ಹಿಂದೆ ಸೌತ್ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಶತಕ ಸಿಡಿಸಿ ಭಾರತ ತಂಡವನ್ನು ಗೆಲ್ಲಿಸಿದ್ರು. ಆ ಸಂದರ್ಭದಲ್ಲಿ ಕೋಚ್ ಗೌತಮ್ ಗಂಭೀರ್, ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಬೇಕಿದೆ ಎಂದಿದ್ದರು. ಇವಾಗ ಅವರೇ ಕೋಚ್ ಆಗಿದ್ದು, ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಪಂತ್ ಅವರನ್ನು ಆಯ್ಕೆ ಮಾಡಿ ಸ್ಯಾಮ್ಸನ್ಗೆ ಕೊಕ್ ನೀಡಲಾಗಿದೆ. ಮುಂದೆ ಏಕದಿನ ವಿಶ್ವಕಪ್ ನಡೆಯಲಿದ್ದು, ಈಗಿನಿಂದಲೇ ಸಂಜು ಸ್ಯಾಮ್ಸನ್ ಅವಕಾಶ ಕಿತ್ತುಕೊಳ್ಳಲು ಗಂಭೀರ್ ಮುಂದಾಗಿದ್ದಾರೆ ಎಂದು ಸೋಷಿಯಲ್ ಮೀಡಿಯದಲ್ಲಿ ಟ್ರೆಂಡ್ ಆಗುತ್ತಿದೆ.
ಬಿಸಿಸಿಐನಿಂದ ಸಂಜು ಸ್ಯಾಮ್ಸನ್ಗೆ ಬಿಗ್ ಶಾಕ್
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟಾಪ್ ಲೀಡಿಂಗ್ ಸ್ಕೋರರ್ ಪೈಕಿ ಸಂಜು ಸ್ಯಾಮ್ಸನ್ ಒಬ್ಬರು. ತಾನು ಆಡಿದ 15 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಬರೋಬ್ಬರಿ 531 ರನ್ ಚಚ್ಚಿದ್ರು. ಇವರು ಸುಮಾರು 24 ಸಿಕ್ಸರ್, 48 ಫೋರ್ ಬಾರಿಸಿದ್ರು. ಹೈಎಸ್ಟ್ ಸ್ಕೋರ್ 86 ಆಗಿದ್ದು, ಸ್ಟ್ರೈಕ್ ರೇಟ್ 150ಕ್ಕೂ ಹೆಚ್ಚಿತ್ತು. ಹಾಗಾಗಿಯೇ ಸಂಜು ಸ್ಯಾಮ್ಸನ್ 2024ರ ಟಿ20 ವಿಶ್ವಕಪ್ಗೆ ಆಯ್ಕೆಯಾಗಿದ್ರು. ಇನ್ನು, ಟಿ20 ವಿಶ್ವಕಪ್ನಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ಮ್ಯಾನೇಜ್ಮೆಂಟ್ ಪಂತ್ಗೆ ಅವಕಾಶ ನೀಡಿತ್ತು.
ಇನ್ನು, ಅವಕಾಶ ನೀಡಿದ್ರೂ ಪಂತ್ ಟಿ20 ವಿಶ್ವಕಪ್ನಲ್ಲಿ ಒಂದೆರಡು ಪಂದ್ಯ ಹೊರತುಪಡಿಸಿ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಿಲ್ಲ. ಅಷ್ಟೇ ಅಲ್ಲ ಪಂತ್ ಇದುವರೆಗೂ ಆಡಿರೋ 74 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕೇವಲ 1158 ರನ್ ಕಲೆ ಹಾಕಿದ್ದಾರೆ. ಆವರೇಜ್ ಕೇವಲ 22 ಇದ್ದು, ಸ್ಟ್ರೈಕ್ ರೇಟ್ ಕೂಡ 127 ಮಾತ್ರ ಇದೆ. ಹಾಗಾಗಿ ಪಂತ್ ಜಾಗಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಗಂಭೀರ್ ತಂದು ಕೂರಿಸೋ ಸಾಧ್ಯತೆ ಇದೆ ಎಂದು ವರದಿ ಆಗಿತ್ತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್