/newsfirstlive-kannada/media/post_attachments/wp-content/uploads/2024/10/Ajinkya-Rahane.jpg)
ನ್ಯೂಜಿಲೆಂಡ್​ ವಿರುದ್ಧದ ಎರಡೂ ಟೆಸ್ಟ್​ನಲ್ಲೂ ಟೀಮ್ ಇಂಡಿಯಾ ಸೋಲಿನ ಮುಖಭಂಗ ಅನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ, ಚೇತೇಶ್ವರ್​ ಪೂಜಾರಾ, ಅಜಿಂಕ್ಯಾ ರಹಾನೆ ಅನುಪಸ್ಥಿತಿ ಕಾಡ್ತಿದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇವರಿಬ್ಬರು ತಂಡದಲ್ಲಿ ಇದಿದ್ರೆ, ಈ ಗತಿ ಟೀಮ್ ಇಂಡಿಯಾಗೆ ಬರ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬರ್ತಾಯಿವೆ. ಅದ್ಯಾಕೆ ಈ ಮಾತು ಹೇಳ್ತಿದ್ದೀವಿ ಅಂತೀರಾ? ಈ ಸ್ಟೋರಿ ಓದಿ.
ನಮ್ಮ ತಂಡದಲ್ಲಿ ಒಂದೇ ದಿನ 400-450 ರನ್​ ಗಳಿಸೋ ಆಟಗಾರರು ಇದ್ದಾರೆ. ಅದೇ ರೀತಿ ಡ್ರಾ ಸಾಧಿಸುವ ಅಗತ್ಯಬಿದ್ದರೆ 2 ದಿನಗಳ ಕಾಲ ಬ್ಯಾಟಿಂಗ್​ ನಡೆಸುವ ಆಟಗಾರರಿದ್ದಾರೆ.
ಗೌತಮ್ ಗಂಭೀರ್, ಹೆಡ್ ಕೋಚ್
/newsfirstlive-kannada/media/post_attachments/wp-content/uploads/2024/09/Goutham-Gambhir.jpg)
ನ್ಯೂಜಿಲೆಂಡ್​ ಟೆಸ್ಟ್​ ಸರಣಿಗೂ ಮುನ್ನ ಟೀಮ್ ಇಂಡಿಯಾದ ಹೆಡ್​ ಕೋಚ್ ಗಂಭೀರ್ ಹೇಳಿದ್ದ ಮಾತಿದು. ಒಂದೇ ದಿನದಲ್ಲಿ 400ರಿಂದ 500 ಹೊಡೆಯೋ ಆಟಗಾರರು ಇದ್ದಾರೆ. ಅಗತ್ಯ ಬಿದ್ರೆ, 2 ದಿನಗಳ ಕಾಲ ಬ್ಯಾಟಿಂಗ್ ಮಾಡೋ ಕೆಪಾಸಿಟಿ ಇರೋ ಬ್ಯಾಟರ್​​ಗಳು ಇದ್ದಾರೆ ಅಂತಾ ಗಂಭೀರ್​ ಹೇಳಿದ್ರು. ಅಂದು ಅತಿಯಾದ ಆತ್ಮವಿಶ್ವಾಸದಲ್ಲಿ ಹೇಳಿದ್ದ ಗೌತಮ್​ ಗಂಭೀರ್ ಮಾತುಗಳು, ಎರಡೇ ಎರಡು ಟೆಸ್ಟ್​ಗಳಲ್ಲೇ ಸುಳ್ಳಾಗಿವೆ. ಎರಡು ದಿನ ಇರಲಿ, ಎರಡೂ ಇನ್ನಿಂಗ್ಸ್​ ಸೇರಿ 2 ದಿನ ಬ್ಯಾಟಿಂಗ್ ನಡೆಸದ ದುಸ್ಥಿತಿ ನಮ್ಮ ಟೀಮ್ ಇಂಡಿಯಾ ಟೆಸ್ಟ್​ ತಂಡದ್ದಾಗಿದೆ.
‘ಬಲಿಷ್ಟ’ ಟೀಮ್​ ಇಂಡಿಯಾಗೆ ಹಿನ್ನಡೆಯಾಗಿದ್ದೇನು.?
ಇಂಡೋ-ಕಿವೀಸ್ ಪುಣೆ​​ ಫೈಟ್​ ಟೆಸ್ಟ್​​​ ಮೂರೇ ದಿನಕ್ಕೆ ಖೇಲ್​ ಖತಃ ಆಗಿದೆ. ಟೀಮ್​ ಇಂಡಿಯಾ ಗೆಲ್ಲೋದಿರಲಿ, ಟಫ್​ ಫೈಟ್​​ ಕೂಡ ನೀಡದೆ ಸರಣಿ ಸೋಲಿನ ಹೀನಾಯ ಮುಖಭಂಗ ಅನುಭವಿಸಿದೆ. ಈ ಬೆನ್ನಲ್ಲೇ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಿದ್ದೆಲ್ಲಿ ಎಂಬ ಚರ್ಚೆ ಶುರುವಾಗಿದೆ.
ಆನ್​ಪೇಪರ್​ ರೆಕಾರ್ಡ್ಸ್​​ ನೋಡಿದ್ರೆ, ನ್ಯೂಜಿಲೆಂಡ್​​​ಗಿಂತ ಟೀಮ್​ ಇಂಡಿಯಾ ಸಖತ್​ ಸ್ಟ್ರಾಂಗ್ ಎನಿಸಿದೆ. ಘಟಾನುಘಟಿ ಬ್ಯಾಟ್ಸ್​ಮನ್​ಗಳ ದಂಡು, ರೋಹಿತ್​​​​​​​​​​​​​​​​, ವಿರಾಟ್​ ಕೊಹ್ಲಿ ದಿಗ್ಗಜ ನಾಮಾಂಕಿತರು, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಎಂಬ ಸ್ಫೋಟಕ ದಾಂಡಿಗರು, ಫ್ರಿನ್ಸ್​ ಎಂದು ಕರೆಸಿಕೊಳ್ಳುವ ಶುಭ್​ಮನ್​​, ಲೆಜೆಂಡರಿ ಸ್ಪಿನ್ನರ್​ಗಳು, ಹೋಮ್ ಅಡ್ವಾಂಟೇಜ್​ ಎಲ್ಲವೂ ಟೀಮ್​ ಇಂಡಿಯಾಗಿದೆ. ಆದರೆ ಮೊದಲ 2 ಟೆಸ್ಟ್​ನಲ್ಲಿ ಇದ್ಯಾವುದು ಆಸರೆಯಾಗಲಿಲ್ಲ. ಆದ್ರೆ, ಟೀಮ್ ಇಂಡಿಯಾದ ಈ ಹೀನಾಯ ಸ್ಥಿತಿ ನೋಡಿದ ಬಳಿಕ ಎಲ್ಲರಿಗೂ ನೆನಪಾಗಿರೋದು, ಆ ಇಬ್ಬರು. ಅವರೇ ಮುಂಬೈಕರ್ ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ.
/newsfirstlive-kannada/media/post_attachments/wp-content/uploads/2024/10/Ajinkya-raghane.jpg)
ರಹಾನೆ-ಪೂಜಾರ ಇದ್ದಿದ್ರೆ ಬರ್ತಿರಲಿಲ್ಲ ಈ ಗತಿ..!
ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷಣ್​ ಟೀಮ್ ಇಂಡಿಯಾದ ಆಪದ್ಭಾಂದವರು. ಈ ದಿಗ್ಗಜರ ಯುಗಾಂತ್ಯದ ಬಳಿಕ ಟೀಮ್ ಇಂಡಿಯಾಗೆ ಸಿಕ್ಕವರೇ, ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ ಪೂಜಾರಾ. ಬೌನ್ಸಿ ಟ್ರ್ಯಾಕ್​ಗಳಲ್ಲೇ ಆಗಲಿ, ಟರ್ನಿಂಗ್ ಟ್ರ್ಯಾಕ್​ಗಳಲ್ಲೇ ಆಗಲಿ, ಟೀಮ್ ಇಂಡಿಯಾದ ರಕ್ಷಕರಾಗಿ ನಿಲ್ಲುತ್ತಿದ್ದರು. ದಿನಗಟ್ಟಲೇ ಬ್ಯಾಟಿಂಗ್ ಮಾಡ್ತಿದ್ದರು. ಇವ್ರು ಹೋದ ಬಳಿಕ ತಂಡಕ್ಕೆ ಎಂಟ್ರಿ ಕೊಟ್ಟ ಗೇಮ್​ ಚೇಂಜರ್​ಗಳು, ಬಿಗ್ ಹಿಟ್ಟರ್​ಗಳು ಎಂಬ ನಾಮಾಂಕಿತರು ಟಫ್ ಕಂಡೀಷನ್ಸ್​ನಲ್ಲಿ ನಿಲ್ಲುವ ಎದೆಗಾರಿಕೆಯನ್ನೂ ಮಾಡ್ತಿಲ್ಲ.
ಇಲ್ಲೇ ಹಿಂಗೆ.. ಬೌನ್ಸಿ ಕಂಡೀಷನ್ಸ್​ನಲ್ಲಿ ಇನ್ನೆಂಗೆ...?
ಹೌದು. ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಸರ್ಫರಾಜ್ ಖಾನ್​​. ಇವ್ರೆಲ್ಲಾ ಅದ್ಬುತ ಆಟಗಾರರು ಅನ್ನೋದ್ರಲ್ಲಿ ಡೌಟೇ ಇಲ್ಲ. ಫ್ಯೂಚರ್​ ಸ್ಟಾರ್​ ಕೂಡ ಹೌದು. ಆದ್ರೆ, ಇವರಿಗೆ ಅಗ್ರೆಸ್ಸಿವ್ ಬ್ಯಾಟಿಂಗ್ ಬಿಟ್ರೆ, ಡಿಫೆನ್ಸಿವ್ ಮೂಡ್​​ನಲ್ಲಿ ಬ್ಯಾಟಿಂಗ್ ಮಾಡುವ ಕಲೆಗಾರಿಕೆಯೇ ಇಲ್ಲ. ಪುಣೆ ಹಾಗೂ ಬೆಂಗಳೂರಿನಲ್ಲಿ ಇದು ಜಗಜ್ಜಾಹೀರಾಗಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿ ತಾಳ್ಮೆ ಎಷ್ಟು ಇಂಪಾರ್ಟೆಂಟ್ ಅನ್ನೋದ್ರ ಅರಿವು ಈ ಯಂಗ್​ಸ್ಟರ್​ಗಳಿಗಿಲ್ಲ. ಅಗ್ರೆಸ್ಸಿವ್ ಎಂಬ ಒಂದೇ ಒಂದು ಮಾನದಂಡದಲ್ಲಿ ತಂಡಕ್ಕೆ ಬಂದಿರೋ ಇವ್ರು, ಎಚ್ಚರಿಕೆಯ ಆಟ ಮರೆತಿದ್ದಾರೆ.
ಇದನ್ನೂ ಓದಿ: WTC ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಕುಸಿತ.. ರೋಹಿತ್ ಪಡೆಗೆ ಫೈನಲ್ ಮತ್ತಷ್ಟು ಕಷ್ಟ.. ಕಷ್ಟ!
ಅಗ್ರೆಸ್ಸಿವ್​ ಯಂಗ್​ ಸ್ಟರ್​​ಗಳ ಎಂಟ್ರಿಯ ಪರಿಣಾಮ ದಿನಗಟ್ಟಲೇ ಬ್ಯಾಟಿಂಗ್ ಮಾಡುವ ಪ್ಯೂರ್​ ಕ್ಲಾಸ್ ಬ್ಯಾಟರ್​ಗಳು ಹೊರಬಿದ್ದಿದ್ದಾರೆ. ಅಗ್ರೆಸ್ಸಿವ್​ ಆಟಗಾರರೇ ತುಂಬಿರೋದ್ರಿಂದ ತಂಡದ ಬ್ಯಾಲೆನ್ಸ್​ ತಪ್ಪಿದೆ. ಎಲ್ಲರೂ ಹೊಡೆಯಲು ಹೋಗ್ತಾರೆ. ತಲೆ ಕೆಳಗಾಕಿ ಪೆವಿಲಿಯನ್​ ಸೇರ್ತಿದ್ದಾರೆ. ಹೋಮ್​ ಕಂಡಿಷನ್ಸ್​ನಲ್ಲೇ ವೈಫಲ್ಯ ಅನುಭವಿಸಿರುವ ಇವರು, ಆಸ್ಟ್ರೇಲಿಯಾದ ಬೌನ್ಸಿ ಟ್ರ್ಯಾಕ್​ನಲ್ಲಿ ಇನ್ನು ಹೇಗೆ ಬ್ಯಾಟಿಂಗ್ ಮಾಡ್ತಾರೋ ಆ ದೇವರೇ ಬಲ್ಲ.!
/newsfirstlive-kannada/media/post_attachments/wp-content/uploads/2024/10/Ajinkya-rahane-1.jpg)
ಸ್ಲಿಪ್​ನಲ್ಲಿ ರಹಾನೆ, ಚೇತೇಶ್ವರ ಪೂಜಾರ ಪಂಟರ್ಸ್!
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​ನಲ್ಲಿ ಬ್ಯಾಟ್ಸ್​ಮನ್​ಗಳು​​ ವೈಫಲ್ಯ ಮಾತ್ರವೇ ತಂಡಕ್ಕೆ ಹೊರೆಯಾಗಲಿಲ್ಲ. ಫೀಲ್ಡಿಂಗ್​ ವೇಳೆ ಮಾಡಿದ ಕ್ಯಾಚ್​ ಡ್ರಾಪ್​ಗಳೂ ಸೋಲಿಗೆ ಕಾರಣವಾಯ್ತು . ಯಾಕಂದ್ರೆ, ಸ್ಲಿಪ್​​​ನಲ್ಲಿ ಆಕ್ಟೀವ್ ಆಗಿರಬೇಕಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ, ಕ್ಯಾಚ್​ಗಳನ್ನ ಡ್ರಾಪ್​ ಮಾಡಿದ್ರು. ಹಾಫ್​ ಚಾನ್ಸ್​ಗಳನ್ನ ಕ್ಯಾಚ್​ಗಳಾಗಿ ಪರಿವರ್ತಿಸಲಿಲ್ಲ. ಅದೇ ರಹಾನೆ ಇದಿದ್ರೆ, ಇದಕ್ಕೆ ಉತ್ತರವಾಗ್ತಿದ್ದರು. ಇವ್ರೇ ಅಲ್ಲ.! ಪೂಜಾರ ಕೂಡ ಶಾರ್ಟ್​ ಲೆಗ್​​ ಆ್ಯಂಡ್ ಸ್ಲಿಪ್​ಗಳಲ್ಲಿ ಚುರುಕಿನ ಫೀಲ್ಡ್​ ಮಾಡ್ತಿದ್ರು.
ಸದ್ಯ ಕಾಲ ಬದಲಾಗಿದೆ. ಇದಕ್ಕೆ ತಕ್ಕಂತೆ ಆಟದ ಶೈಲಿಯೂ ಬದಲಾಗಿದೆ. ನಿಜ.. ಎಲ್ಲವನ್ನೂ ಒಪ್ಪಬೇಕು. ಹಾಗೇ ತಂಡಕ್ಕೆ ಅಗ್ರೆಸ್ಸಿವ್​ ಆಟಗಾರರು ಮಾತ್ರವಲ್ಲ.. ಸಂದರ್ಭಕ್ಕೆ ತಕ್ಕಂತೆ ಆಡೋ ಆಟಗಾರರೂ ಬೇಕಿದೆ. ಇಲ್ಲಿದಿದ್ರೆ ತಂಡದ ಬ್ಯಾಲೆನ್ಸ್​ ಮತ್ತಷ್ಟು ತಪ್ಪಲಿದೆ. ಈ ಎರಡು ಟೆಸ್ಟ್​ಗಳೇ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ಆಗಿದ್ದು, ಮುಂದಾದ್ರೂ ಮ್ಯಾನೇಜ್​​ಮೆಂಟ್​​ ಎಚ್ಚೆತ್ತುಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us