ಟೀಮ್ ಇಂಡಿಯಾದಲ್ಲಿ ಹೊಸ ಯುಗಾರಂಭ
3.5 ವರ್ಷ.. 4 ICC ಟ್ರೋಫಿ.. ಗೌತಿಗೆ ಗೆಲ್ಲುವ ಟಾಸ್ಕ್
ಗಂಭೀರ್ ಮುಂದಿರುವ ದೊಡ್ಡ, ದೊಡ್ಡ ಸವಾಲೇನು..?
ನಿರೀಕ್ಷೆಯಂತೆ ಗೌತಮ್ ಗಂಭೀರ್, ಟೀಮ್ ಇಂಡಿಯಾದ ಕೋಚ್ ಹುದ್ದೆಗೇರಿದ್ದಾರೆ. ಕೋಚ್ ಗಾದಿಗೇರಿರುವ ಗುರು ಗಂಭೀರ್ ಆಯ್ಕೆಯ ಹಿಂದೆ ಸಿಕ್ಕಾಪಟ್ಟೆ ಲೆಕ್ಕಚಾರಗಳು ಅಡಗಿವೆ. ಗೌತಮ್ ಗಂಭೀರ್ ಮುಂದೆ ಸವಾಲುಗಳ ಬೆಟ್ಟವೂ ಇದೆ. ಗುರಿಯೂ ದೊಡ್ಡದಿದೆ.
ಟೀಮ್ ಇಂಡಿಯಾದಲ್ಲಿ ಹೊಸ ಯುಗಾಂರಂಭವಾಗಿದೆ. ಒಂದೆಡೆ ಅಭಿಮಾನಿಗಳ ವಲಯದಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಹೆಡ್ ಕೋಚ್ ಆಗಿ ಆಯ್ಕೆಯಾಗಿರೋ ಗೌತಮ್ ಗಂಭೀರ್, ನಿರ್ಗಮಿತ ಕೋಚ್ ದ್ರಾವಿಡ್ಗಿಂತ ಅಧಿಕ ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಒಟ್ಟಾರೆ 3.5 ವರ್ಷ ಅಂದ್ರೆ 2027ರ ಡಿಸೆಂಬರ್ವರೆಗೆ ಗಂಭೀರ್ ಹೆಡ್ ಕೋಚ್ ಆಗಿರಲಿದ್ದಾರೆ. ಹಿಂದಿನ ಕೋಚ್ ದ್ರಾವಿಡ್ ವಾರ್ಷಿಕವಾಗಿ 12 ಕೋಟಿ ಸಂಭಾವನೆ ಪಡೀತಿದ್ದರು. ಈಗ ಗಂಭೀರ್ ಸಂಭಾವನೆ 15 ಕೋಟಿಗೂ ಅಧಿಕ ಎನ್ನಲಾಗ್ತಿದೆ.
ಇದನ್ನೂ ಓದಿ:ಮಿಸ್ಟ್ರಿ ಗರ್ಲ್ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್? ಮಾರ್ಮಿಕವಾಗಿ ಟಾಂಗ್ ಕೊಟ್ಟ ನಟಾಶಾ..!
3.5 ವರ್ಷದಲ್ಲಿ 4 ಐಸಿಸಿ ಟ್ರೋಫಿ
ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿರೋ ಗಂಭೀರ್ ಮುಂದೆ ಬೆಟ್ಟದಷ್ಟು ಸವಾಲಿದೆ. ಜಸ್ಟ್ 3.5 ವರ್ಷದ ಅವಧಿಯಲ್ಲಿ ಟೀಮ್ ಇಂಡಿಯಾ, ಬರೋಬ್ಬರಿ 4 ಐಸಿಸಿ ಟೂರ್ನಿಗಳನ್ನಾಡಲಿದೆ. ಈ ಮಹತ್ವದ ಟೂರ್ನಿಗಳು ಗೌತಮ್ ಗಂಭೀರ್ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿವೆ.
3.5 ವರ್ಷ.. 4 ಟಾಸ್ಕ್..!
2025ರ ಫೆಬ್ರವರಿ-ಮಾರ್ಚ್ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಏಕದಿನ ಮಾದರಿಯ ಈ ಟೂರ್ನಿ ಗೆಲ್ಲೋ ಸವಾಲು ಗಂಭೀರ್ ಮುಂದಿದೆ. 2025ರ ಜೂನ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ ನಡೆಯಲಿದೆ. ಆ ಬಳಿಕ 2026ರಲ್ಲಿ ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಟಿ20 ವಿಶ್ವಕಪ್ ಆಯೋಜಿಸಲಿದೆ. 2027ರಲ್ಲಿ ಸೌತ್ ಆಫ್ರಿಕಾದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಈ ನಾಲ್ಕು ಐಸಿಸಿ ಟೂರ್ನಿಗಳನ್ನ ಗೆಲ್ಲೋದು ಗೌತಮ್ ಪಾಲಿಗೆ ಬಿಗ್ ಟಾಸ್ಕ್ ಆಗಿರಲಿದೆ.
ವಿಭಿನ್ನ ಮನಸ್ಥಿತಿ.. ಏಕತೆಯೇ ಬಿಗ್ ಚಾಲೆಂಜ್
ದ್ರಾವಿಡ್ ಅಂಡ್ ರೋಹಿತ್ ಕೂಲ್ ಆ್ಯಂಡ್ ಕಾಮ್ ವ್ಯಕ್ತಿತ್ವದವರು. ಇಬ್ಬರೂ ಹೊಂದಿಕೊಳ್ಳುವ ಗುಣದವರು. ಗಂಭೀರ್ ಆಟದಲ್ಲೂ ಅಗ್ರೆಸ್ಸಿವ್, ಮಾತಿನಲ್ಲೂ ಅಗ್ರೆಸ್ಸೀವ್. ನೇರಾ ನೇರ ಮಾತನಾಡುವ ವ್ಯಕ್ತಿ. ವಿರಾಟ್ ಕೊಹ್ಲಿ ಸೇರಿದಂತೆ ಹಲವರ ಜೊತೆಗೆ ಗೌತಿ ಒಡನಾಟ ಅಷ್ಟೊಂದು ಚೆನ್ನಾಗಿಲ್ಲ. ಇದೀಗ EGO ಬಿಟ್ಟು, ತಂಡದಲ್ಲಿ ಏಕತೆ ಮೂಡಿಸುವ ಬಿಗ್ ಚಾಲೆಂಜ್ ಇದೆ. ಇದೆಲ್ಲಕ್ಕಿಂತ ಮಿಗಿಲಾಗಿ ಹೊಸ ತಂಡವನ್ನೇ ಕಟ್ಟಬೇಕಿದೆ.
ಡ್ರೆಸ್ಸಿಂಗ್ ರೂಮ್ ಚಾಲೆಂಜ್
ಇಷ್ಟೆಲ್ಲಾ ಸವಾಲುಗಳನ್ನ ಎದುರಿಸಿ ಗಂಭೀರ್ ಗೆಲ್ತಾರಾ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಸದ್ಯಕ್ಕಂತೂ ಈ ಕಠಿಣ ಸವಾಲುಗಳನ್ನ ಎದುರಿಸೋ ಸಾಮರ್ಥ್ಯ ಗಂಭೀರ್ ಬಿಟ್ರೆ, ಬೇರೆಯಾರಿಗೂ ಇಲ್ಲ. ಹೀಗಾಗಿಯೇ ಬಿಸಿಸಿಐ ಮಣೆ ಹಾಕಿದೆ.
ಗಂಭೀರ್ ಆಯ್ಕೆ ಮಾಡಿದ್ದು ಯಾಕೆ..?
ಗೌತಮ್ ಗಂಭೀರ್ಗೆ ದೇಶಕ್ಕೆ ಸೇವೆ ಸಲ್ಲಿಸೋ ಆಸಕ್ತಿ ಮೊದಲಿಂದ ಇತ್ತು. ಟೀಮ್ ಇಂಡಿಯಾದ ಕೋಚ್ ಹುದ್ದೆಯ ಬಗ್ಗೆ ಆಸಕ್ತಿ ಹೊಂದಿದ್ರು. 2007ರ ಟಿ20, 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಆಟಗಾರನಾಗಿ ಗಂಭೀರ್ ಪಾತ್ರ ಮಹತ್ವದ್ದಾಗಿತ್ತು. ನಾಯಕನಾಗಿ ಐಪಿಎಲ್‌ನಲ್ಲಿ 2 ಬಾರಿ ಕೆಕೆಆರ್ ತಂಡವನ್ನ ಚಾಂಪಿಯನ್ ಮಾಡಿದ್ದ ಗಂಭೀರ್, 2024ರ ಐಪಿಎಲ್‌ನಲ್ಲಿ ಮೆಂಟರ್ ಆಗಿಯೂ ಯಶಸ್ಸು ಕಂಡಿದ್ದಾರೆ. ಗಂಭೀರ್ ಮೆಂಟರ್ ಆಗಿದ್ದಾಗ ಸತತ 2 ಸೀಸನ್ ಪ್ಲೇ ಆಫ್ ಗೆ ಲಕ್ನೋ ತಂಡವೂ ಪ್ರವೇಶಿಸಿದೆ. ಯುವ ಆಟಗಾರರ ಪ್ರತಿಭೆಯನ್ನ ಹೊರತೆಗೆಯುವ ಕಲೆ ಇದೆ. ಗೆಲುವಿಗಾಗಿ ಯಾವುದೇ ಕಠಿಣ ನಿರ್ಧಾರಕ್ಕೂ ಹಿಂಜರಿಯಲ್ಲ. ಈ ಕಾರಣಗಳೇ ಗಂಭೀರ್ಗೆ ಆಯ್ಕೆ ಹಿಂದಿರೋ ಲೆಕ್ಕಾಚಾರವಾಗಿದೆ.
ಇದನ್ನೂ ಓದಿ:KL ರಾಹುಲ್ ಟಿ-20 ಕರಿಯರ್ ಖತಂ..? ಕೋಚ್ ಗಂಭೀರ್ ಕೂಡ ರಾಹುಲ್ ಎಂಟ್ರಿಗೆ ಅಡ್ಡಿ..!
ಟೀಮ್ ಇಂಡಿಯಾ ಗುರುವಿನ ಪಟ್ಟಕ್ಕೆ ಗೌತಮ್ ಗಂಭೀರ್ ಸೂಕ್ತ ವ್ಯಕ್ತಿ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿ ಬರ್ತಿದೆ. ಈ ಹಿಂದೆ ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಆಟಗಾರನಾಗಿ ಪ್ರಮುಖ ಪಾತ್ರ ವಹಿಸಿದ್ದ ಗೌತಮ್ ಗಂಭೀರ್, ಇದೀಗ ದ್ರೋಣಾಚಾರ್ಯರಾಗಿ ಟೀಮ್ ಇಂಡಿಯಾವನ್ನ ವಿಶ್ವ ಕ್ರಿಕೆಟ್ನಲ್ಲಿ ಮತ್ತಷ್ಟು ರಾರಾಜಿಸುವಂತೆ ಮಾಡಲಿ ಅನ್ನೋದು ಎಲ್ಲರ ಆಶಯ.
ವಿಶೇಷ ವರದಿ: ಸಂತೋಷ್
ಇದನ್ನೂ ಓದಿ:ಎಷ್ಟೇ ದೊಡ್ಡವರಾದರೂ ಹಿಂದಿನ ಉಪಕಾರ ಮರೆಯಲಿಲ್ಲ.. ರೋಹಿತ್ ಜೀವನ ಬದಲಿಸಿದ ಈ ವ್ಯಕ್ತಿ ಯಾರು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್