/newsfirstlive-kannada/media/post_attachments/wp-content/uploads/2024/06/DRAVID-1.jpg)
ಟೀಮ್​ ಇಂಡಿಯಾದ ಹೆಡ್​​ಕೋಚ್ ರಾಹುಲ್​ ದ್ರಾವಿಡ್ ಡ್ರೀಮ್​​​ SEND OFF ಸಿಕ್ಕಿದೆ. ಟೀಮ್​ ಇಂಡಿಯಾ ಬಾರ್ಬಡೋಸ್​ನಲ್ಲಿ ಜಯದ ಪತಾಕೆ ಹಾರಿಸಿ ಐಸಿಸಿ ಟ್ರೋಫಿಗೆ ಮುತ್ತಿಕ್ಕಿತು. ಕೊಟ್ಯಂತರ ಭಾರತೀಯ ಕ್ರಿಕೆಟ್​ ಅಭಿಮಾನಿಗಳ 11 ವರ್ಷಗಳ ಐಸಿಸಿ ಟ್ರೋಫಿ ಕೊರಗಿಗೆ ಬ್ರೇಕ್​ ಬಿದ್ದಿದೆ. ಹೆಡ್​ಮಾಸ್ಟರ್​ ರಾಹುಲ್​ ದ್ರಾವಿಡ್​ಗೂ ಗೆಲುವಿನ ವಿದಾಯ ಸಿಕ್ಕಿದೆ.
ಗೆಲುವಿನೊಂದಿಗೆ ಕೋಚ್​ ಹುದ್ದೆಗೆ ದ್ರಾವಿಡ್​ ವಿದಾಯ..!
ಎಲ್ಲದಕ್ಕೂ ಒಂದು END ಅನ್ನೋದು ಇದ್ದೇ ಇದೆ. ಇದೀಗ ಮಿಸ್ಟರ್​​​​​ ಡಿಫಂಡೇಬಲ್​​​​, ಬ್ಯಾಟಿಂಗ್​ ಮಾಂತ್ರಿಕ ಹಾಗೂ ದಿ ವಾಲ್​ ಅಂತೆಲ್ಲಾ ಕರೆಸಿಕೊಳ್ಳುವ ರಾಹುಲ್ ದ್ರಾವಿಡ್​​ರ ಕೋಚಿಂಗ್​ ಜರ್ನಿಗೂ ಫುಲ್​ ಸ್ಟಾಫ್​ ಬಿದ್ದಿದೆ. ವಿಶ್ವಕಪ್ ಅಂತ್ಯದೊಂದಿಗೆ ಟೀಮ್ ಇಂಡಿಯಾ ಜೊತೆಗಿನ ಹೆಡ್​​ ಕೋಚ್​​​ ದ್ರಾವಿಡ್ ಪ್ರಯಾಣ ಅಂತ್ಯವಾಗಿದೆ.
ಇದನ್ನೂ ಓದಿ:ಕಣ್ಣಲ್ಲಿ ನೀರು ಮತ್ತು ವಿಜಯದ ಸಂಭ್ರಮ.. ಹೇಗಿತ್ತು ಟೀಂ ಇಂಡಿಯಾ ಆಟಗಾರರ ಗೆಲುವಿನ ಸಂಭ್ರಮ..! Photos
/newsfirstlive-kannada/media/post_attachments/wp-content/uploads/2024/06/DRAVID-KOHLI-ROHIT.jpg)
ನವೆಂಬರ್​​ 2021ರಲ್ಲಿ ಹೆಡ್​ಕೋಚ್​ ಹುದ್ದೆಗೇರಿದ ದ್ರಾವಿಡ್​ ಸುಮಾರು ಎರಡೂ ಮುಕ್ಕಾಲು ವರ್ಷಗಳ ಅವಧಿಯಲ್ಲಿ ತಂಡವನ್ನ ಯಶಸ್ಸಿನ ಹಾದಿಯಲ್ಲೇ ಮುನ್ನಡೆಸಿದ್ದಾರೆ. 31 ತಿಂಗಳ ಅವಧಿಯಲ್ಲಿ ದೇಶ ವಿದೇಶಗಳಲ್ಲಿ ದ್ರಾವಿಡ್​ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ಗೆಲುವಿನ ಶಿಖಾರಿ ನಡೆಸಿದೆ. ಸಕ್ಸಸ್​ಫುಲ್​ ಆಗಿ ತಂಡವನ್ನ ಗೈಡ್​ ಮಾಡಿದ್ದು ಮಾತ್ರವಲ್ಲ. ಈ ಅವಧಿಯಲ್ಲಿ ಯಾವುದೇ ವಿವಾದಗಳಿಗೂ ತಂಡ ಗುರಿಯಾಗದಂತೆ ದಿ ವಾಲ್​ ನೋಡಿಕೊಂಡರು.
'ಫೈನಲ್ ಸ್ಪೆಷಲಿಸ್ಟ್'​​ ಹೆಡ್​ಕೋಚ್ ರಾಹುಲ್​​​ ದ್ರಾವಿಡ್..!
ದ್ರಾವಿಡ್​ ಟೀಮ್ ಇಂಡಿಯಾದ ಹೆಡ್​​ಮಾಸ್ಟರ್​ ಆದ ಬಳಿಕ ಭಾರತ ತಂಡ ಎಲ್ಲಾ ಮಾದರಿ ಕ್ರಿಕೆಟ್​ನಲ್ಲಿ ಅದ್ಭುತ ಆಟವಾಡಿದೆ. ಏಷ್ಯಾಕಪ್​​ನಲ್ಲಿ ಚಾಂಪಿಯನ್​​​, 2023ರ ವಿಶ್ವ ಟೆಸ್ಟ್ ಚಾಂಪಿಯನ್​​​ಶಿಪ್​​ನ​​ ಫೈನಲ್​ ಹಾಗೂ​ ಅದೇ ವರ್ಷ ನಡೆದ ಏಕದಿನ ವಿಶ್ವಕಪ್​​​​​​​​ನಲ್ಲಿ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿತು. 2024ರ ಟಿ20 ವಿಶ್ವಕಪ್​ನಲ್ಲಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿ 11 ವರ್ಷಗಳ ಐಸಿಸಿ ಟ್ರೋಫಿ ಕೊರಗಿಗೆ ಬ್ರೇಕ್​ ಹಾಕಿದ್ದಾರೆ. ಕಳೆದೊಂದು ದಶಕದಿಂದ ಕೇವಲ ಬೇಸರ, ಹತಾಶೆ, ನೋವನ್ನೇ ಕಂಡಿದ್ದ ಫ್ಯಾನ್ಸ್​ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಜೊತೆಗೆ ಭಾರತದ ಕೀರ್ತಿ ಪತಾಕೆಯನ್ನು ಜಗದಗಲಕ್ಕೆ ಪಸರಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/06/Champions-1.jpg)
ಉತ್ತಮ ವಾತಾವರಣ ನಿರ್ಮಾಣ.. ಎಲ್ಲರ ಜತೆ ಫ್ರೆಂಡ್ಲಿ..!
ದ್ರಾವಿಡ್​​​​ ಕೋಚ್ ಇದ್ದಷ್ಟು ಕಾಲ ಉತ್ತಮ ಡ್ರೆಸ್ಸಿಂಗ್​​ ರೂಮ್​​ನಲ್ಲಿ ಉತ್ತಮ ವಾತಾವರಣಕ್ಕೆ ಆದ್ಯತೆ ನೀಡಿದ್ರು. ಪರಿಣಾಮ ತಂಡ ಬ್ಯಾಕ್​​​​ ಟು ಬ್ಯಾಕ್​ ಐಸಿಸಿ ಟೂರ್ನಮೆಂಟ್​ಗಳಲ್ಲಿ 3 ಬಾರಿ ಫೈನಲ್ ಪ್ರವೇಶಿಸ್ತು. ಸೀನಿಯರ್​​​-ಜ್ಯೂನಿಯರ್ ಆಟಗಾರರನ್ನು ಸಮಾನವಾಗಿ ಕಂಡರು. ಯುವ ಆಟಗಾರರ ಜೊತೆ ಫ್ರೆಂಡ್ಲಿಯಾಗಿ ಬೆರೆತರು. ಬಿದ್ದಾಗ ಬೆನ್ನುತಟ್ಟಿ ಹುರಿದುಂಬಿಸಿದ್ರು. ಗೆದ್ದಾಗ ಅಟಗಾರರೊಂದಿಗೆ ಸಂಭ್ರಮಿಸಿದ್ರು. ಇದು ತಂಡ ಒಗ್ಗಟ್ಟಾಗಿ ಹೋರಾಡಲು ನೆರವಾಯ್ತು.
ಯಶಸ್ಸು ತಲೆಗೇರಿಸಿಕೊಳ್ಳಲಿಲ್ಲ.. ಸರಳ ನಡೆಯೇ ಮಾದರಿ..!
ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡ ಐಸಿಸಿ ಟೂರ್ನಮೆಂಟ್​​​​ ಹಾಗೂ ದ್ವಿಪಕ್ಷೀಯ ಸರಣಿಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಆದರೆ ಎಂದಿಗೂ ಹೆಡ್​ಕೋಚ್​ ದ್ರಾವಿಡ್​ ಎಂದು ಯಶಸ್ಸಿನ ಕ್ರೆಡಿಟ್​ ಬಯಸಲಿಲ್ಲ. ತಾವು ಕೋಚ್​ ಆಗಿದ್ದ ಅವಧಿಯಲ್ಲಿ ನಡೆದುಕೊಂಡ ನಡೆಗಳೇ ಬೆಸ್ಟ್​ ಎಕ್ಸಾಂಪಲ್​.
ಇದನ್ನೂ ಓದಿ:‘ನೀನೇ ನಾಯಕ..’ ಹಾರ್ದಿಕ್ ಪಾಂಡ್ಯರನ್ನು ತಬ್ಬಿ ಮುತ್ತಿಟ್ಟು ಕಣ್ಣೀರು ಇಟ್ಟ ರೋಹಿತ್ ಶರ್ಮಾ
/newsfirstlive-kannada/media/post_attachments/wp-content/uploads/2024/05/Rahul-Dravid-BCCI.jpg)
ರೋಹಿತ್​​​-ಕಿಂಗ್ ಕೊಹ್ಲಿ ಮನಸ್ತಾಪಕ್ಕೆ ಬ್ರೇಕ್..!
ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕಿಂಗ್ ಕೊಹ್ಲಿ ನಡುವೆ ಅನೇಕ ವರ್ಷಗಳಿಂದ ಭಿನ್ನಾಭಿಪ್ರಾಯ ತಲೆದೂರಿತ್ತು. ದ್ರಾವಿಡ್​​ ಹೆಡ್​​ಕೋಚ್​ ಆದ ಬಳಿಕ ಇದಕ್ಕೆ ತೆರೆ ಎಳೆದ್ರು. ಇಬ್ಬರ ನಡುವಿನ ವೈಮನಸ್ಸು ದೂರವಾಗಿಸಿ ತಂಡದ ಒಳಿತಿಗಾಗಿ ಆಡುವಂತೆ ಮನವೊಲಿಸಿದ್ರು. ದ್ರಾವಿಡ್​ ಕೋಚ್​ ಆಗೋಕೂ ಮುನ್ನ ಇದ್ದ ರೋಹಿತ್​ - ಕೊಹ್ಲಿಗೂ ಬಾಂಡಿಂಗ್​ಗೂ, ಈಗಿರೋ ನಂಟಿಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ. ದ್ರಾವಿಡ್​ ಈ ವಿಚಾರದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ರು.
42 ಜನ ಡೆಬ್ಯು..! ಯಂಗ್​ಸ್ಟರ್ಸ್​ಗೆ ಭರಪೂರ ಚಾನ್ಸ್​​​..!
ದ್ರಾವಿಡ್ ಹೆಡ್​​ಕೋಚ್​​ ಹುದ್ದೆಗೇರಿದ ಬಳಿಕ ಅನೇಕ ಯಂಗ್​ಸ್ಟರ್ಸ್​ಗೆ ಡೆಬ್ಯು ಭಾಗ್ಯ ಕರುಣಿಸಿದ್ದಾರೆ. ಇವರ ಅವಧಿಯಲ್ಲಿ 3 ಮಾದರಿಯಲ್ಲಿ ಒಟ್ಟು 42 ಜನ ಪದಾರ್ಪಣೆ ಮಾಡಿದ್ದಾರೆ. ಅದ್ರಲ್ಲಿ ಕೆಲವರು ಪಾಸ್​ ಆಗಿದ್ರೆ, ಕೆಲವ್ರು ಫೇಲ್​ ಆಗಿದ್ದಾರೆ. ಪಾಸ್​ ಆಗಿ ಸಾಮರ್ಥ್ಯ ಪ್ರೂವ್​ ಮಾಡಿರುವವರು ಭವಿಷ್ಯದ ತಾರೆಗಳಾಗಿ ಮಿಂಚುತ್ತಿದ್ದಾರೆ.
ಇದನ್ನೂ ಓದಿ:ಕೊಹ್ಲಿ ಮಾತ್ರವಲ್ಲ.. ಟೀಂ ಇಂಡಿಯಾಗೆ ಗೆದ್ದ ಖುಷಿಯಲ್ಲೇ ಡಬಲ್ ಶಾಕ್..!
/newsfirstlive-kannada/media/post_attachments/wp-content/uploads/2023/12/DRAVID-3.jpg)
ಕೆಲಸದ ವಿಚಾರದಲ್ಲಿ ಕಾಂಪ್ರಮೈಸ್​ ಆಗದ ದ್ರಾವಿಡ್​​​ ಮೂರುವರೆ ವರ್ಷಗಳ ಕಾಲ ಭಾರತ ತಂಡಕ್ಕಾಗಿ ದಣಿವರಿಯದೇ ದುಡಿದಿದ್ದಾರೆ. ಆಟಗಾರನಾಗಿ, ನಾಯಕನಾಗಿ, ಇದೀಗ ಕೋಚ್ ಆಗಿ ಯಶಸ್ಸಿಗೆ ಕಾಣಿಕೆ ನೀಡಿದ್ದಾರೆ. ಯಶಸ್ವಿಯಾಗಿ ಹೆಡ್​ಕೋಚ್​ ಅವಧಿ ಮುಗಿಸಿ ಹೊರಟಿರುವ ಕನ್ನಡದ ಕಣ್ಮಣಿಗೆ ನಮ್ಮದೊಂದು ಬಿಗ್​ ಸೆಲ್ಯೂಟ್​​.
ಇದನ್ನೂ ಓದಿ:T20 World Cup ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸಿಕ್ಕಿದ್ದು ಎಷ್ಟು ಕೋಟಿ ರೂಪಾಯಿ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us