ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಭಾರತದ ಬಳಿಯಿದೆ ದೊಡ್ಡ ಬ್ರಹ್ಮಾಸ್ತ್ರ; ಯಾರು ಆ ಡೇಂಜರಸ್​ ಬ್ಯಾಟರ್​​?

author-image
Ganesh Nachikethu
Updated On
ಟೀಮ್​ ಇಂಡಿಯಾ ಕಟ್ಟಿ ಹಾಕೋ ಬಿಗ್ ಪ್ಲಾನ್​ನಲ್ಲಿ ಇಂಗ್ಲೆಂಡ್​ ತಂಡ.. ಇವರ ಗೇಮ್​ ವ್ಯೂಹ ಹೇಗಿದೆ?
Advertisment
  • ವರ್ಷದ ಕೊನೆಗೆ ನಡೆಯಲಿರೋ ಬಾರ್ಡರ್​​ ಗವಾಸ್ಕರ್ ಟ್ರೋಫಿ..!
  • ಆಸ್ಟ್ರೇಲಿಯಾ, ಟೀಮ್​ ಇಂಡಿಯಾ ನಡುವೆ 5 ಪಂದ್ಯಗಳ ಟೆಸ್ಟ್​ ಸರಣಿ
  • ಟೀಮ್​ ಇಂಡಿಯಾ ಗೆಲ್ಲಲು ಬೇಕೇ ಬೇಕು ಈ ಡೇಂಜರಸ್​​​ ಆಟಗಾರ

ಇತ್ತೀಚೆಗಷ್ಟೇ ಕ್ಯಾಪ್ಟನ್​ ರೋಹಿತ್​ ಶರ್ಮಾ ನೇತೃತ್ವದ ಟೀಮ್ ಇಂಡಿಯಾ 2 ಟೆಸ್ಟ್‌ಗಳ ಸರಣಿಯಲ್ಲಿ ಬಾಂಗ್ಲಾದೇಶವನ್ನು 2-0 ಅಂತರದಿಂದ ಸೋಲಿಸುವ ಮೂಲಕ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಈಗ ಟೀಮ್​ ಇಂಡಿಯಾ ತವರಿನಲ್ಲಿ ಅಕ್ಟೋಬರ್ 16ನೇ ತಾರೀಕಿನಿಂದ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಬಳಿಕ ರೋಹಿತ್​​​ ಪಡೆ ಆಸ್ಟ್ರೇಲಿಯಾ ವಿರುದ್ಧ ದೊಡ್ಡ ಪೈಪೋಟಿ ನಡೆಸಲಿದೆ.

ನವೆಂಬರ್​ನಿಂದ ಜನವರಿ ತಿಂಗಳವರಗೆ ಟೀಮ್​​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್​​ ಗವಾಸ್ಕರ್ ಟ್ರೋಫಿ ಆಡಲಿದೆ. ಇದು 5 ಪಂದ್ಯಗಳ ಟೆಸ್ಟ್ ಸರಣಿ ಆಗಿದೆ. ನವೆಂಬರ್ 22 ರಿಂದಲೇ ಪರ್ತ್​​ ಸ್ಟೇಡಿಯಮ್​ನಲ್ಲಿ ಮೊದಲ ಟೆಸ್ಟ್ ಶುರುವಾಗಲಿದೆ. ಹಾಗಾಗಿ ಇದು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ದೊಡ್ಡ ಸವಾಲು ಎದುರಾಗಲಿದೆ. ಇದರ ಮಧ್ಯೆ ಟೀಮ್​ ಇಂಡಿಯಾ ಆ ಸ್ಟಾರ್​ ಆಟಗಾರ ಅನುಪಸ್ಥಿತಿ ಕಾಡುತ್ತಿದೆ.

publive-image

ಟೀಮ್​ ಇಂಡಿಯಾ ಕಾಡುತ್ತಿದೆ ಪೂಜಾರ ಅನುಪಸ್ಥಿತಿ!

ಕಳೆದ ವರ್ಷ ನಡೆದ ವಿಶ್ವ ಟೆಸ್ಟ್‌ ಚಾಂಪಿಯನ್​ಶಿಪ್‌ ಫೈನಲ್‌ ಬಳಿಕ ಸ್ಟಾರ್​​ ಬ್ಯಾಟರ್​​ ಚೇತೇಶ್ವರ್​​ ಪೂಜಾರ ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಮೂರನೇ ಕ್ರಮಾಂಕಕ್ಕೆ ನ್ಯಾಯ ಒದಗಿಸಿರೋ ಪೂಜಾರ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಟೀಮ್​ ಇಂಡಿಯಾ ಟೆಸ್ಟ್​ ಸೀರೀಸ್​ ಆಡಲು ವಿದೇಶಿ ಪ್ರವಾಸ ಕೈಗೊಳ್ಳಲಿದೆ ಎಂದರೆ ಥಟ್​ ಅಂತಾ ನೆನಪಾಗೋ ಹೆಸರು ಚೇತೇಶ್ವರ್​​ ಪೂಜಾರ. ಆದರೀಗ, ಇವರು ಅವಕಾಶ ವಂಚಿತರಾಗಿದ್ದಾರೆ. ಈ ವರ್ಷ ನಡೆಯಲಿರೋ ಬಾರ್ಡರ್​ ಗವಾಸ್ಕರ್‌ ಟ್ರೋಫಿಯಲ್ಲಿ ಚೇತೇಶ್ವರ್ ಪೂಜಾರ ಅನುಪಸ್ಥಿತಿ ತಂಡಕ್ಕೆ ಕಾಡುವುದು ಮಾತ್ರ ಖಚಿತ ಎನ್ನುವ ಮಾತುಗಳು ಕೇಳಿ ಬಂದಿದೆ.

ಯಾರು ಈ ಪೂಜಾರ?

ಆಸ್ಟ್ರೇಲಿಯಾದಲ್ಲಿ ಪೂಜಾರ ಅಬ್ಬರಿಸಿದ್ದಾರೆ. ಕಾಂಗರೂ ನಾಡಿನಲ್ಲಿ ತಾವು ಆಡಿರೋ 11 ಟೆಸ್ಟ್‌ ಪಂದ್ಯಗಳ 21 ಇನಿಂಗ್ಸ್‌ಗಳಲ್ಲಿ 47.28ರ ಸರಾಸರಿಯಲ್ಲಿ 993 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 3 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ. ಹಾಗಾಗಿ ಚೇತೇಶ್ವರ್​​ ಪೂಜಾರ ಆಸ್ಟ್ರೇಲಿಯಾದ ವಿರುದ್ಧ ಟೆಸ್ಟ್​ ಸೀರೀಸ್​ಗೆ ಬೇಕೇ ಬೇಕು ಎನ್ನಲಾಗುತ್ತಿದೆ.

ಇದನ್ನೂ ಓದಿ:ಹಾರ್ದಿಕ್​​ ಪಾಂಡ್ಯ ಬುಡವನ್ನೇ ಅಲುಗಾಡಿಸಿದ ನಿತೀಶ್​ ರೆಡ್ಡಿ; ಸ್ಟಾರ್​ ಆಲ್​ರೌಂಡರ್​​ಗೆ ಬಿಗ್​ ಶಾಕ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment