/newsfirstlive-kannada/media/post_attachments/wp-content/uploads/2024/07/Team-India-big-win.jpg)
ಇಂದು ಹರಾರೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡದ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಬರೋಬ್ಬರಿ 100 ರನ್ಗಳಿಂದ ಕ್ಯಾಪ್ಟನ್ ಶುಭ್ಮನ್ ಗಿಲ್ ಪಡೆ ಗೆಲುವು ಸಿಕ್ಕಿದೆ.
ಭಾರತ ತಂಡ ನೀಡಿದ ಬಿಗ್ ಟಾರ್ಗೆಟ್ ಬೆನ್ನತ್ತಿದ ಜಿಂಬಾಬ್ವೆ 18.4 ಓವರ್ನಲ್ಲಿ 134 ರನ್ಗೆ ಆಲೌಟ್ ಆಗಿದೆ. ವೆಸ್ಲಿ ಮಾಧೆವೆರೆ 43, ಬ್ರಿಯಾನ್ ಬೆನೆಟ್ 26, ಜೊನಾಥನ್ ಕ್ಯಾಂಪ್‌ಬೆಲ್ 10, ಲ್ಯೂಕ್ ಜೊಂಗ್ವೆ 33 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು.
ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇನ್ನಿಂಗ್ಸ್ ಉದ್ಧಕ್ಕೂ ಜಿಂಬಾಬ್ವೆ ಕ್ರಿಕೆಟ್ ತಂಡದ ಬೌಲರ್ಗಳ ಬೆಂಡೆತ್ತಿದ ಗಾಯಕ್ವಾಡ್ ಕೂಡ ಅಬ್ಬರಿಸಿದ್ರು.
ತಾನು ಆಡಿದ 47 ಬಾಲ್ನಲ್ಲಿ 1 ಸಿಕ್ಸರ್, 11 ಫೋರ್ ಸಮೇತ 77 ರನ್ ಗಳಿಸಿದ್ರು. ಈ ಮೂಲಕ ಮತ್ತೆ ಗಾಯಕ್ವಾಡ್ ಮತ್ತೆ ಫಾರ್ಮ್ಗೆ ಬಂದ್ರು. ಈ ಹಿಂದೆ ಗಾಯಕ್ವಾಡ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ.
ಕೊನೆಗೆ ಬಂದ ರಿಂಕು ಸಿಂಗ್ ಕೂಡ ಮಿಂಚಿದ್ರು. ಕೇವಲ 22 ಬಾಲ್ನಲ್ಲಿ 5 ಸಿಕ್ಸರ್, 2 ಫೋರ್ ಸಮೇತ 48 ರನ್ ಸಿಡಿಸಿ ಫಿನಿಶ್ ಮಾಡಿದ್ರು. ಕ್ಯಾಪ್ಟನ್ ಗಿಲ್ ಕೇವಲ 2 ರನ್ಗೆ ಔಟಾಗಿದ್ರು. ಟೀಮ್ ಇಂಡಿಯಾ ನಿಗದಿತ 20 ಓವರ್ನಲ್ಲಿ 236 ರನ್ ಕಲೆ ಹಾಕಿತ್ತು.
ಇದನ್ನೂ ಓದಿ:ಟೀಮ್ ಇಂಡಿಯಾಗೆ ಗುಡ್ನ್ಯೂಸ್.. ಸ್ಟಾರ್ ಯುವ ಆಟಗಾರನಿಂದ ಸ್ಟ್ರಾಂಗ್ ಕಮ್ಬ್ಯಾಕ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ