/newsfirstlive-kannada/media/post_attachments/wp-content/uploads/2024/07/ROHIT-4.jpg)
ಬಾರ್ಬಡೋಸ್ನಲ್ಲಿ ಬೆರಿಲ್ ಚಂಡಮಾರುತಕ್ಕೆ ಸಿಲುಕಿದ್ದ ಟೀಮ್ ಇಂಡಿಯಾ ಆಟಗಾರರನ್ನ ಬಿಸಿಸಿಐ, ವಿಶೇಷ ವಿಮಾನದ ಮೂಲಕ ತಾಯ್ನಾಡಿಗೆ ಕರೆತಂದಿದೆ. ಇದರ ವೆಚ್ಚ ಎಷ್ಟಾಗಿರಬಹುದು ಎಂಬ ಕುತೂಹಲ ಫ್ಯಾನ್ಸ್ ವಲಯದಲ್ಲಿದೆ. ಆ ಕೌತುಕತೆಗೆ ಉತ್ತರ ಇಲ್ಲಿದೆ.
ಇದನ್ನೂ ಓದಿ: ಇಬ್ಬರು ಯೋಧರು ಹುತಾತ್ಮ.. ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ್ದ ನಾಲ್ವರು ಉಗ್ರರು ಫಿನಿಶ್
ಬಿಸಿಸಿಐ.. ವಿಶ್ವ ಕ್ರಿಕೆಟ್‌ನ ಶ್ರೀಮಂತ ಕ್ರಿಕೆಟ್ ಸಂಸ್ಥೆ.. ಜಸ್ಟ್ ಹಣ ಗಳಿಸುವ ವಿಚಾರದಲ್ಲಿ ಮಾತ್ರವಲ್ಲ. ಹಣದ ಹೊಳೆ ಹರಿಸುವಲ್ಲೂ ಇದಕ್ಕೆ ಸಾಟಿ ಇಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಟಿ20 ವಿಶ್ವ ಚಾಂಪಿಯನ್ನರನ್ನ ಭಾರತಕ್ಕೆ ಕರೆತರುವ ವಿಚಾರದಲ್ಲಿ ಬಿಸಿಸಿಐ ತೆಗೆದುಕೊಂಡ ನಿರ್ಧಾರ. ಜೂನ್ 29ರಂದೇ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ, ಜೂನ್ 1ರಂದೇ ಟ್ರೋಫಿಯೊಂದಿಗೆ ತಾಯ್ನಾಡಿಗೆ ವಾಪಸಾಗಬೇಕಿತ್ತು. ಆದ್ರೆ ಬೆರಿಲ್ ಚಂಡಮಾರುತದ ಪರಿಣಾಮ ಬಾರ್ಡಡೋಸ್ನಲ್ಲಿ ಆಟಗಾರರು ಸಿಲುಕೊಂಡಿದ್ರು.
ಇದನ್ನೂ ಓದಿ:ದರ್ಶನ್ಗೆ ಶನಿ, ರಾಹು ಕಾಟ.. ರಾಜಯೋಗ ಇದೆಯಾ; ಬಂಡೆ ಮಹಾಕಾಳಿ ಪ್ರಧಾನ ಅರ್ಚಕ ನುಡಿದ ಭವಿಷ್ಯ?
ಹೀಗಾಗಿ ಜೂನ್.4ರಂದು ವಿಶೇಷ ಏರ್ ಇಂಡಿಯಾ ಬೋಯಿಂಗ್ 777 ಚಾರ್ಟೆಡ್ ಪ್ಲೈಟ್ನಲ್ಲಿ ಟೀಮ್ ಇಂಡಿಯಾ ವಾಪಸ್ ಆಗಿತ್ತು. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಇದಕ್ಕಾಗಿ ಬಿಸಿಸಿಐ ಖರ್ಚು ಮಾಡಿದ ಹಣ ಬರೋಬ್ಬರಿ 50 ಕೋಟಿ 82 ಲಕ್ಷ ರೂಪಾಯಿ. ಅಂದ್ಹಾಗೆ ಬಾರ್ಬಡೋಸ್ನಿಂದ ಡೆಲ್ಲಿ ಪ್ರಯಾಣದ ಸಮಯ ಸುಮಾರು 22 ಗಂಟೆಗಳು. ಒಂದು ಗಂಟೆ ಪ್ರಯಾಣಕ್ಕೆ 1.05 ಲಕ್ಷ ರೂಪಾಯಿ. ಅಂದ್ರೆ, ಒಬ್ಬ ಆಟಗಾರ ಬಾರ್ಬಡೋಸ್ನಿಂದ ಡೆಲ್ಲಿಗೆ ಬರಲು 66 ಲಕ್ಷ ರೂಪಾಯಿ ವ್ಯಯಿಸಿದೆ. ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ಪತ್ರಕರ್ತರು ಸೇರಿ ಬರೋಬ್ಬರಿ 70 ಮಂದಿ ಪ್ರಯಾಣಿಸಿದ್ದು, ವಿಮಾನ ಪ್ರಯಾಣದ ವೆಚ್ಚವೇ ಅಂದಾಜು 76 ಕೋಟಿ ರೂಪಾಯಿ ಎಂದು ವರದಿಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ