ಕೊಹ್ಲಿ, ಸಿರಾಜ್​ ಅಲ್ಲ; ಟೀಮ್​ ಇಂಡಿಯಾಗೆ RCB ಸ್ಟಾರ್​ ಎಂಟ್ರಿ; ಭಾರತಕ್ಕೆ ಬಂತು ಆನೆಬಲ

author-image
Ganesh Nachikethu
Updated On
ಕೊಹ್ಲಿ, ಸಿರಾಜ್​ ಅಲ್ಲ; ಟೀಮ್​ ಇಂಡಿಯಾಗೆ RCB ಸ್ಟಾರ್​ ಎಂಟ್ರಿ; ಭಾರತಕ್ಕೆ ಬಂತು ಆನೆಬಲ
Advertisment
  • ಅ. 24ರಿಂದ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ಮಧ್ಯೆ 2 ಟೆಸ್ಟ್​
  • ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ!
  • 2ನೇ ಟೆಸ್ಟ್​​ನಿಂದ ಹೊರಬಿದ್ದ ಟೀಮ್​ ಇಂಡಿಯಾದ ಸ್ಟಾರ್ ವೇಗಿ​

ಟೀಮ್​​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಸಿರಾಜ್​​. ಇವರು ಭಾರತ ಕ್ರಿಕೆಟ್​​ ತಂಡದ ಬೌಲಿಂಗ್​ ವಿಭಾಗದ ಆಧಾರಸ್ತಂಭ ಎಂದು ಹೇಳಬಹುದು. ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಮೊಹಮ್ಮದ್​ ಸಿರಾಜ್​​​ ಉತ್ತಮ ಪ್ರದರ್ಶನ ನೀಡಲಿಲ್ಲ. ತಂಡ ತನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. ಹಾಗಾಗಿ ಟೀಮ್​​ ಇಂಡಿಯಾ ಸೋಲಿನ ಬೆನ್ನಲ್ಲೇ ಅತೀಹೆಚ್ಚು ಟೀಕೆಗೆ ಒಳಗಾದವರು ಸಿರಾಜ್​​.

2ನೇ ಇನ್ನಿಂಗ್ಸ್​ನಲ್ಲಿ ಶೂನ್ಯ ವಿಕೆಟ್​​​

ಬೆಂಗಳೂರು ಟೆಸ್ಟ್‌ನಲ್ಲಿ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸಾಕಷ್ಟು ನಿರಾಸೆ ಮೂಡಿಸಿದ್ರು. ತನ್ನ ತವರು ಪಿಚ್‌ನಲ್ಲಿಯೂ ಸಿರಾಜ್ ವಿಕೆಟ್ ಪಡೆಯಲು ಪರದಾಡಿದ್ರು. ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ಪಡೆದ ಇವರು, 2ನೇ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಇವರ ಬದಲಿಗೆ ಆಕಾಶ್ ದೀಪ್​ಗೆ ಚಾನ್ಸ್ ನೀಡುವ ಸಾಧ್ಯತೆ ಇದೆ.

publive-image

ಸಿರಾಜ್​ ಬದಲಿಗೆ ಆರ್​​ಸಿಬಿ ಸ್ಟಾರ್​ಗೆ ಮಣೆ

ನ್ಯೂಜಿಲೆಂಡ್​ ವಿರುದ್ಧದ 2ನೇ ಟೆಸ್ಟ್​ನಿಂದ ಮೊಹಮ್ಮದ್​ ಸಿರಾಜ್​ ಬಹುತೇಕ ಹೊರಬೀಳುವುದು ಖಚಿತವಾಗಿದೆ. ಇವರ ಬದಲಿಗೆ ಆರ್​​​ಸಿಬಿ ತಂಡದ ಸ್ಟಾರ್​ ಬೌಲರ್​ ಆಕಾಶ್​ ದೀಪ್​​ಗೆ ಅವಕಾಶ ನೀಡಲಾಗುವುದು. ಇತ್ತೀಚೆಗೆ ನಡೆದ ಬಾಂಗ್ಲಾದೇಶದ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸೀರೀಸ್​ನಲ್ಲಿ ಆಕಾಶ್​ ದೀಪ್​​ ಒಟ್ಟು 5 ವಿಕೆಟ್​ ಪಡೆದು ಮೋಡಿ ಮಾಡಿದ್ರು.

ಇತ್ತೀಚೆಗೆ ಬೆಂಗಳೂರಿನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಟೀಮ್​ ಇಂಡಿಯಾ ವಿರುದ್ಧ ನ್ಯೂಜಿಲೆಂಡ್​​ ಬರೋಬ್ಬರಿ 8 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್​ ತಂಡ 1-0 ಅಂತರದ ಮುನ್ನಡೆ ಸಾಧಿಸಿದೆ.

24ನೇ ತಾರೀಕಿನಿಂದ 2ನೇ ಟೆಸ್ಟ್​ ಶುರು

ಇನ್ನು, 2ನೇ ಟೆಸ್ಟ್​​ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಇದಕ್ಕೆ ಟೀಮ್​ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಂಡಿದೆ. ಅಕ್ಟೋಬರ್​​ 24ನೇ ತಾರೀಕಿನಿಂದ ಶುರುವಾಗೋ ಈ ಟೆಸ್ಟ್​ ಪಂದ್ಯ 28ರ ವರೆಗೆ ನಡೆಯಲಿದೆ. ಈ ಪಂದ್ಯಕ್ಕೆ ಮುನ್ನವೇ ಟೀಮ್​​ ಇಂಡಿಯಾದಲ್ಲಿ ಮೇಜರ್​​ ಸರ್ಜರಿ ಆಗಲಿದೆ.

ಇದನ್ನೂ ಓದಿ: 2ನೇ ಟೆಸ್ಟ್​​​ಗೆ ಮುನ್ನ ಟೀಮ್​ ಇಂಡಿಯಾಗೆ ಬಿಗ್​ ಶಾಕ್​​​; ಪಂದ್ಯದಿಂದ ಸ್ಟಾರ್​​ ಪ್ಲೇಯರ್​​ ಔಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment