/newsfirstlive-kannada/media/post_attachments/wp-content/uploads/2023/12/Team-India-6.jpg)
ಟೀಮ್ ಇಂಡಿಯಾ ಸ್ಟಾರ್​ ಬ್ಯಾಟರ್​ ಶಿಖರ್ ಧವನ್ ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್​ ಬೈ ಹೇಳಿದ್ರು. ಶಿಖರ್​ ಧವನ್​​ ದಿಢೀರ್​​ ನಿವೃತ್ತಿ ಘೋಷಿಸಿ ಎಲ್ಲಾ ಅಭಿಮಾನಿಗಳಿಗೂ ಶಾಕ್​​ ಕೊಟ್ಟಿದ್ರು. ಈಗ ಅದೇ ಫ್ಯಾನ್ಸ್​​ಗೆ ಶಿಖರ್​ ಧವನ್​ ಗುಡ್​ನ್ಯೂಸ್​ ಕೊಟ್ಟಿದ್ದಾರೆ.
ಐಪಿಎಲ್​ಗೆ ಈಗಿನಿಂದಲೇ ಧವನ್​​ ತಯಾರಿ!
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ದಿನಗಣನೆ ಶುರುವಾಗಿದೆ. ವರ್ಷದ ಕೊನೆಗೆ ಮೆಗಾ ಹರಾಜು ನಡೆಯಲಿದೆ. ಐಪಿಎಲ್​ಗಾಗಿ ಧವನ್​​​ ಬ್ಯಾಟ್​​ ಕೈಗೆತ್ತಿಕೊಂಡಿದ್ದು, ತಯಾರಿ ಶುರು ಮಾಡಿದ್ದಾರೆ. ಅದಕ್ಕೂ ಮುನ್ನ ಗಬ್ಬರ್ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Shikhar Dhawan is back in the nets, gearing up for his Legends League Cricket return ?
?: Shikhar Dhawan/Instagram pic.twitter.com/koSjcEjrtR
— CricTracker (@Cricketracker)
Shikhar Dhawan is back in the nets, gearing up for his Legends League Cricket return 🙌
📸: Shikhar Dhawan/Instagram pic.twitter.com/koSjcEjrtR— CricTracker (@Cricketracker) September 16, 2024
">September 16, 2024
ಇನ್ನು, ಲೆಜೆಂಡ್ಸ್ ಲೀಗ್​​ಗಾಗಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರೋ ವಿಡಿಯೋವನ್ನು ಶಿಖರ್​ ಧವನ್​​ ತನ್ನ ಇನ್​ಸ್ಟಾದಲ್ಲಿ ಶೇರ್​​ ಮಾಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಧವನ್ ಬ್ಯಾಟಿಂಗ್ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ಶಿಖರ್ ಫ್ಯಾನ್ಸ್ ಸಂತಸಗೊಂಡಿದ್ದಾರೆ.
360 ಡಿಗ್ರಿಯಲ್ಲಿ ಶಾಟ್​ ಹೊಡೆದ ಶಿಖರ್​!
ಧವನ್ ಅತ್ಯುತ್ತಮ ಬ್ಯಾಟಿಂಗ್ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅದರಲ್ಲೂ ಇವರು 360 ಡಿಗ್ರಿಯಲ್ಲಿ ಶಾಟ್ ಹೊಡೆದಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ. ರಿವರ್ಸ್ ಶಾಟ್ ಅನ್ನು ಅವರು ಅದ್ಭುತವಾಗಿ ಹೊಡೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್