ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ
2019ರ ಏಕದಿನ ವಿಶ್ವಕಪ್ ವಿಚಾರವಾಗಿ ಮೊಹಮ್ಮದ್ ಶಮಿ ಅಸಮಾಧಾನ
ನನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ವಿರಾಟ್ ವಿರುದ್ಧ ಸಿಡಿಮಿಡಿ..!
ಭಾರತ, ಶ್ರೀಲಂಕಾ ನಡುವಿನ ಟಿ20 ಮತ್ತು ಏಕದಿನ ಸರಣಿ ಜೂನ್ 27ನೇ ತಾರೀಕಿನಿಂದ ಶುರುವಾಗಲಿದೆ. ಶ್ರೀಲಂಕಾ ಪ್ರವಾಸಕ್ಕೆ ಈಗಾಗಲೇ ಬಲಿಷ್ಠ ಟೀಮ್ ಇಂಡಿಯಾ ಪ್ರಕಟ ಆಗಿದೆ. ರೆಸ್ಟ್ನಲ್ಲಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಅಮಿತ್ ಮಿಶ್ರಾ ವಿರಾಟ್ ಕೊಹ್ಲಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಈ ಬೆನ್ನಲ್ಲೇ ಟೀಮ್ ಇಂಡಿಯಾ ಹಾಲಿ ಕ್ರಿಕೆಟರ್ ಮೊಹಮ್ಮದ್ ಶಮಿ ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Mohammad Shami taking a dig at kohli-shastri politics for excluding him from 2019 wc semifinal 👏 pic.twitter.com/GJxP78vkrI
— Dev 🇮🇳 (@time__square) July 19, 2024
ಮೊಹಮ್ಮದ್ ಶಮಿ ಹೇಳಿದ್ದೇನು..?
2019ರ ಏಕದಿನ ವಿಶ್ವಕಪ್ಗೆ ನಾನು ಆಯ್ಕೆಯಾಗಿದ್ದೆ. ನನ್ನನ್ನು ಕೇವಲ 4 ಪಂದ್ಯಗಳಲ್ಲಿ ಮಾತ್ರ ಆಡಿಸಲಾಯ್ತು. ನಾನು 4 ಪಂದ್ಯಗಳಲ್ಲಿ ಬರೋಬ್ಬರಿ 14 ವಿಕೆಟ್ ತೆಗೆದಿದ್ದೆ. ಆದ್ರೆ, ಇನ್ನೂ 5 ಪಂದ್ಯಗಳಲ್ಲಿ ನನಗೆ ಆಡಲು ಅವಕಾಶ ನೀಡಲಿಲ್ಲ. ಆಗ ವಿರಾಟ್ ಕ್ಯಾಪ್ಟನ್, ರವಿಶಾಸ್ತ್ರಿ ಅವರು ಟೀಮ್ ಇಂಡಿಯಾ ಹೆಡ್ ಕೋಚ್ ಆಗಿದ್ರು. ನನಗೂ ಈಗಲೂ ಅದರ ಬಗ್ಗೆ ಪ್ರಶ್ನೆ ಕೇಳಬೇಕು ಅನಿಸುತ್ತಿಲ್ಲ. ಅಂದು ನನಗೆ ಅವಕಾಶ ನೀಡಿದ್ರೆ ನ್ಯೂಜಿಲೆಂಡ್ ವಿರುದ್ಧ ಗೆಲ್ಲುತ್ತಿದ್ದೆವು ಎಂದರು. ಈ ಮೂಲಕ ಪರೋಕ್ಷವಾಗಿ ಕೊಹ್ಲಿ, ರವಿಶಾಸ್ತ್ರಿ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಇದನ್ನೂ ಓದಿ: 6,6,6,6,6,6,6,6; ಅಬ್ಬರದ ಶತಕ ಸಿಡಿಸಿದ್ದ ಟೀಮ್ ಇಂಡಿಯಾ ಯುವ ಬ್ಯಾಟರ್ಗೆ ಸಿಗಲಿಲ್ಲ ಚಾನ್ಸ್!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ