/newsfirstlive-kannada/media/post_attachments/wp-content/uploads/2024/07/Team-india-13.jpg)
ವಿಶ್ವಕಪ್​​ ಗೆದ್ದ ಖುಷಿಯಲ್ಲಿರುವ ಭಾರತ ತಂಡವು ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಫೈನಲ್ ಗೆದ್ದ ನಂತರ ಬಾರ್ಬಡೋಸ್‌ನಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಬಾರ್ಬಡೋಸ್​ ಸೈಕ್ಲೋನ್ ಎಫೆಕ್ಟ್​​ಗೆ ಒಳಾಗಿದ್ದು, ಟೀಂ ಇಂಡಿಯಾ ಅಲ್ಲೇ ಲಾಕ್ ಆಗಿದೆ.
ಭಾರತ ತಂಡವು ಬಾರ್ಬಡೋಸ್​ನಿಂದ ನ್ಯೂಯಾರ್ಕ್​​ಗೆ ತೆರಳಬೇಕಾಗಿತ್ತು. ಆದರೆ ಚಂಡಮಾರುತದಿಂದ ಹೊರಡಲು ಇನ್ನೂ ಸಾಧ್ಯವಾಗಿಲ್ಲ. ಪ್ರತಿಕೂಲ ಹವಾಮಾನದಿಂದಾಗಿ ಟೀಂ ಇಂಡಿಯಾ ಸಂಕಷ್ಟದಲ್ಲಿದ್ದು, ಬಾರ್ಬಡೋಸ್ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ವರದಿಗಳ ಪ್ರಕಾರ ಬಾರ್ಬಡೋಸ್​ನಲ್ಲಿ ರೆಡ್​ ಅಲರ್ಟ್ ಘೋಷಣೆ ಮಾಡಲಾಗಿದೆ. ಮನೆಯಿಂದ ಯಾರಿಗೂ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಬೆರಿಲ್ ಚಂಡಮಾರುತದಿಂದಾಗಿ ಅತ್ಯಂತ ಕಷ್ಟಕರ ಪರಿಸ್ಥಿತಿ ಉದ್ಭವಿಸಿದೆ ಎನ್ನಲಾಗಿದೆ.
ಟೀಂ ಇಂಡಿಯಾ ಕತೆ ಏನು?
ವರದಿಗಳ ಪ್ರಕಾರ.. ಸೈಕ್ಲೋನ್​​ನಿಂದಾಗಿ ಟೀಂ ಇಂಡಿಯಾ ನ್ಯೂಯಾರ್ಕ್ ಹೋಗುವ ಪ್ಲಾನ್ ಕ್ಯಾನ್ಸಲ್ ಮಾಡಲಾಗಿದೆ. ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ನೇರವಾಗಿ ದೆಹಲಿಗೆ ಬರಲಿದ್ದಾರೆ. ಸದ್ಯ ಪರಿಸ್ಥಿತಿ ಸುಧಾರಿಸುವ ವರೆಗೂ ಅವರು ಅಲ್ಲೇ ಕಾಯಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ 3 ರಂದು ಟೀಂ ಇಂಡಿಯಾ ತಾಯ್ನಾಡಿಗೆ ಮರಳಬಹುದು.
ಇದನ್ನೂ ಓದಿ:3 ಹೊಸ ಕ್ರಿಮಿನಲ್ ಕಾನೂನು ಜಾರಿ.. ಇವು ನ್ಯಾಯ ವ್ಯವಸ್ಥೆ, ನಾಗರಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us