/newsfirstlive-kannada/media/post_attachments/wp-content/uploads/2024/07/Shubhman-gill.jpg)
ಜಿಂಬಾಬ್ವೆ ನೀಡಿದ 152 ರನ್​ಗಳನ್ನು ಟೀಂ ಇಂಡಿಯಾದ ಇಬ್ಬರು ಕಲಿಗಳು ಹೊಡೆದುರುಳಿಸಿದ್ದಾರೆ. ಆ ಮೂಲಕ ಟೀಂ ಇಂಡಿಯಾಗೆ 10 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಅದರಲ್ಲೂ ಯಶಸ್ವಿ ಬೆನ್ನಿಗೆ ನಿಂತ ನಾಯಕ ಶುಭ್ಮನ್​ ಗಿಲ್​ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: 4,4,4,4,4,4,4,4,4,4,4,4,4,6,6.. ಯಶಸ್ವಿ ಆಟಕ್ಕೆ ಮನಸೂರೆಗೊಂಡ ಫ್ಯಾನ್ಸ್​!
/newsfirstlive-kannada/media/post_attachments/wp-content/uploads/2024/07/Shubhman-gill-1.jpg)
ಹೌದು, ನಾಯಕ ಶುಭ್ಮನ್​ ಗಿಲ್​ 39 ಎಸೆತಕ್ಕೆ 6 ಬೌಂಡರಿ ಜೊತೆಗೆ 2 ಸಿಕ್ಸ್​ ಬಾರಿಸುವ ಮೂಲಕ 58 ಬಾರಿಸಿದ್ದಾರೆ. ಪರಿಣಾಮ ಇಬ್ಬರ ಜೊತೆಯಾಟ ಟೀಂ ಇಂಡಿಯಾಗೆ ಭರ್ಜರಿ ಜಯ ತಂದುಕೊಟ್ಟಿದೆ. ಅದರಲ್ಲೂ ಟೀಂ ಇಂಡಿಯಾದ ಓಪನರ್ಸ್​ 15 ಓವರ್​ನಲ್ಲಿ ತಂಡವನ್ನು ಜಯದ ನೆರಳಿಗೆ ತಂದಿಟ್ಟಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ.
ಬೆಕ್ಕಿನ ಆಟ ಇಲಿಗೆ ಪ್ರಾಣ ಸಂಕಟ ಎಂಬಂತೆ ಇಂದಿನ ಪಂದ್ಯದಲ್ಲಿ ಯಶಸ್ವಿ ಮತ್ತು ಗಿಲ್​ ಆಟ ಜಿಂಬಾಬ್ವೆಗೆ ಸಂಕಟ ತಂದಿರೋದು ಅಷ್ಟಿಷ್ಟಲ್ಲ. ಅದರಲ್ಲೂ ಒಂದು ವಿಕೆಟನ್ನಾದರೂ ಕಬಳಿಸಬೇಕು ಎಂದು ಜಿಂಬಾಬ್ವೆ ಆಟಗಾರರು ಪ್ರಯತ್ನಿಸಿದರಾದರು ಅದು ಸಾಧ್ಯವಾಗಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us