Advertisment

ದ್ರಾವಿಡ್ ನಿವೃತ್ತಿ, ಗಂಭೀರ್ ಬಗ್ಗೆ ಮಾಹಿತಿ ಇಲ್ಲ.. ಜಿಂಬಾಬ್ವೆ ಪ್ರವಾಸದಲ್ಲಿರುವ ಕೋಚ್ ಯಾರು?

author-image
Ganesh
Updated On
ದ್ರಾವಿಡ್ ನಿವೃತ್ತಿ, ಗಂಭೀರ್ ಬಗ್ಗೆ ಮಾಹಿತಿ ಇಲ್ಲ.. ಜಿಂಬಾಬ್ವೆ ಪ್ರವಾಸದಲ್ಲಿರುವ ಕೋಚ್ ಯಾರು?
Advertisment
  • ಜಿಂಬಾಬ್ವೆ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ
  • ಜುಲೈ 6 ರಂದು ಮೊದಲ ಟಿ-20 ಪಂದ್ಯ ನಡೆಯಲಿದೆ
  • ಶೀಘ್ರದಲ್ಲೇ ನೂತನ ಕೋಚ್ ಪಡೆಯಲಿರುವ ಭಾರತ ತಂಡ

ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನಿವೃತ್ತಿಯಾಗಿದ್ದಾರೆ. ನೂತನ ಕೋಚ್ ಎಂದು ಹೇಳಲಾಗುತ್ತಿರುವ ಗೌತಮ್ ಗಂಭೀರ್ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಇತ್ತ ಐದು ಪಂದ್ಯಗಳ ಟಿ20 ಸರಣಿಗಾಗಿ ಭಾರತ ತಂಡವು ಜಿಂಬಾಬ್ವೆ ಪ್ರವಾಸ ಬೆಳೆಸಿದೆ.

Advertisment

ಹಾಗಾದರೆ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತದ ಮುಖ್ಯ ಕೋಚ್ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ದ್ರಾವಿಡ್ ನಿವೃತ್ತಿ ಹಿನ್ನೆಲೆಯಲ್ಲಿ ವಿವಿಎಸ್ ಲಕ್ಷ್ಮಣ್ ಅವರು ಹಂಗಾಮಿ ಕೋಚ್ ಆಗಿ ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದಾರೆ.
ಜಿಂಬಾಬ್ವೆ ಪ್ರವಾಸದಲ್ಲಿ ಟೀಂ ಇಂಡಿಯಾವನ್ನು ಶುಭಮನ್ ಗಿಲ್‌ ಮುನ್ನಡೆಸುತ್ತಿದ್ದಾರೆ. ಮುಖ್ಯ ಕೋಚ್ ಆಯ್ಕೆಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಹಂಗಾಮಿ ಕೋಚ್ ಆಗಿ ಉಳಿಯಲಿದ್ದಾರೆ. ಲಕ್ಷ್ಮಣ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ದಿಢೀರ್ ಬದಲಾವಣೆ.. ಜಿಂಬಾಬ್ವೆ ಪ್ರವಾಸದಿಂದ ಮೂವರು ಸ್ಟಾರ್ ಆಟಗಾರರಿಗೆ ಕೊಕ್..!

ಭಾರತ ತಂಡವು ಶೀಘ್ರದಲ್ಲೇ ಮುಖ್ಯ ಕೋಚ್ ಪಡೆಯಲಿದೆ. ಈ ವರ್ಷ ಹೊಸ ಕೋಚ್‌ನೊಂದಿಗೆ ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯನ್ನು ಆಡಲಿದೆ ಎಂದು ಬಿಸಿಸಿಐ ತಿಳಿಸಿದೆ. ಟಿ20 ಸರಣಿಯ ಮೊದಲ 2 ಪಂದ್ಯಗಳಿಂದ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಅವರನ್ನು ಕೈಬಿಡಲಾಗುತ್ತಿದೆ. ಅವರ ಬದಲಿಗೆ ಸಾಯಿ ಸುದರ್ಶನ್, ಹರ್ಷಿತ್ ರಾಣಾ ಮತ್ತು ಜಿತೇಶ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Advertisment

ಇದನ್ನೂ ಓದಿ:ವಿಶ್ವಕಪ್ ವೇದಿಕೆಯಲ್ಲೇ ವಿರಾಟ್ ನಿವೃತ್ತಿ ಘೋಷಣೆ.. ಕೊಹ್ಲಿಯಂತೆ ರೋಹಿತ್ ಹಾಗೆ ಮಾಡಲಿಲ್ಲ ಯಾಕೆ ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment